ಲಂಡನ್​ ಬೀದಿಯಲ್ಲಿ ಭಾರತದ ಮಾವಿನ ದರ್ಬಾರ್: ಸೀರೆಯುಟ್ಟು ಹಣ್ಣನ್ನು ಮಾರಿದ ಯುವತಿ; ವಿಡಿಯೋ ವೈರಲ್! Indian Mango in London

ಲಂಡನ್​ ಬೀದಿಯಲ್ಲಿ ಮಾರಾಟವಾಗುತ್ತಿರುವ ರತ್ನಗಿರಿ ಮಾವು
ಲಂಡನ್​ ಬೀದಿಯಲ್ಲಿ ಮಾರಾಟವಾಗುತ್ತಿರುವ ರತ್ನಗಿರಿ ಮಾವು
Published on

ಪ್ರಮುಖ ಮುಖ್ಯಾಂಶಗಳು

  • ಭಾರತದ ಮಾವಿಗೆ ಅಂತರಾಷ್ಟ್ರೀಯ ದರ್ಜೆ
  • ಲಂಡನ್​ ಬೀದಿಯಲ್ಲಿ ಮಾರಾಟವಾಗುತ್ತಿರುವ ರತ್ನಗಿರಿ ಮಾವು
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ಲಂಡನ್​: ಮಾವಿನ ಹಣ್ಣು, ಇದನ್ನು ಹಣ್ಣುಗಳ ರಾಜನೆಂದು ಕರೆಯಲಾಗುತ್ತದೆ. ಭಾರತದಲ್ಲಿ ಈ ಮಾವಿನ ಹಣ್ಣುಗಳ ಅಭಿಮಾನಿಗಳಿಗಳಿಗೆ ಕೊರತೆಯೇ ಇಲ್ಲ. ಬೇಸಿಗೆಗಾಲ ಬಂತೆಂದರೆ ಸಾಕು ಬೀದಿ-ಬೀದಿಗಳಲ್ಲಿ ಈ ಹಣ್ಣು ಕ್ಷಣಾರ್ಧದಲ್ಲಿ ಬಿಕರಿಯಾಗುತ್ತದೆ.
ಆದರೆ ಇತ್ತೀಚೆಗೆ ಈ ಮಾನಿವಹಣ್ಣಿಗೆ ಅಂತರಾಷ್ಟ್ರೀಯ ಮನ್ನಣೆ ದೊರೆತಿದ್ದು, ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಈ ಹಣ್ಣಿನ ಮಾರಾಟ ಅಧಿಕವಾಗುತ್ತಿದೆ. ಕೆಲ ದಿನಗಳ ಹಿಂದೆ ಭಾರತದ ಮಹಿಳೆಯೊಬ್ಬಳು ಲಂಡನ್ (Indian Mango in London)​ ನಗರದ ಬೀದಿಗಳಲ್ಲಿ ಮಾವಿನ ಹಣ್ಣನ್ನು ಮಾರುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್​ ಆಗುತ್ತಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ, ಕೆಂಪು ಸೀರೆಯನ್ನು ಧರಿಸಿರುವ ಮಹಿಳೆಯೊಬ್ಬಳು ತಳ್ಳುಗಾಡಿಯಲ್ಲಿ, ರತ್ನಗಿರಿ ತಳಿಗೆ ಸೇರಿರುವ ಮಾವಿನ ಹಣ್ಣಗಳನ್ನು ಹಾಕಿಕೊಂಡು, ಮಾನಿನ ಹಣ್ಣು ಬೇಕೇ? ಮಾನಿವು ಹಣ್ಣು ಎಂದು ಕೂಗುತ್ತಾ ಹೋಗುತ್ತಿದ್ದರೆ, ಜನ ಆಕೆ ಬಳಿಗೆ ಬಂದು ಹಣ್ಣನ್ನು ಖರೀದಿಸುತ್ತಿರುವ ವಿಡಿಯೋ ಸಂಚಲನಕ್ಕೆ ಕಾರಣವಾಗಿದೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದು, ಲಕ್ಷಾಂತರ ವೀಕ್ಷಣೆಯನ್ನು ಇದು ಪಡೆದುಕೊಂಡಿದೆ. ಅಂತು ಮಾವಿನ ಹಣ್ಣಿಗೂ ಅಂತರಾಷ್ಟ್ರೀಯ ಖ್ಯಾತಿ ದೊರೆಯಿತು ಎಂದು ಒಬ್ಬರು ಕಮೆಂಟ್​ ಮಾಡಿದರೆ, ನಮ್ಮ ಭಾರತೀಯರು ಲಂಡನ್​ಗೆ ಹೋದರು ತಮ್ಮಲಿರುವ ಭಾರತವನ್ನು ಮರೆಯುವುದಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಕೆಲವರು, ಒಂದು ಕಾಲದಲ್ಲಿ ನಮ್ಮ ದೇಶವನ್ನು ಆಳಿದ್ದ ಬ್ರಿಟಿಷರ ನೆಲದಲ್ಲಿ ಈಗ ನಮ್ಮ ಭಾರತದ ರತ್ನಗಿರಿ ಮಾವು ಮಾರಾಟವಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅಭಿಪ್ರಾಯ ಹಂಚಿ ಕೊಂಡಿದ್ದಾರೆ,(ಏಜನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net