More

    Web Exclusive|ಭೂಮಿ ಖರೀದಿ ಜೋರು – ಮುಗಿಬಿದ್ದ ತಮಿಳುನಾಡು, ಕೇರಳೀಯರು !

    ಮಹದೇವಸ್ವಾಮಿ ಕೊಡಸೋಗೆ ಗುಂಡ್ಲುಪೇಟೆ

    ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ, ತಾಲೂಕಿನಲ್ಲಿ ತೀವ್ರ ಪರಿಣಾಮ ಬೀರಿದ್ದು, ನೆರೆ ರಾಜ್ಯದವರಿಂದ ಭೂಮಿ ಖರೀದಿ ಭರಾಟೆ ಹೆಚ್ಚಾಗಿದೆ. ನಾಲ್ಕು ದಶಕಗಳಿಂದ ಸ್ವಂತ ಭೂಮಿ ಖರೀದಿಸಲು ಸಾಧ್ಯವಾಗದೆ, ಗುತ್ತಿಗೆ ಆಧಾರದ ಮೇಲೆ ವಹಿವಾಟು ನಡೆಸುತ್ತಿದ್ದ ನೆರೆಯ ಕೇರಳ ಹಾಗೂ ತಮಿಳುನಾಡು ರಾಜ್ಯದವರು, ಇದೀಗ ಕಾಯ್ದೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಪರಿಣಾಮ, ಪ್ರತಿ ದಿನವೂ ಪಟ್ಟಣದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಜನರಿಂದ ತುಂಬಿ ತುಳುಕುತ್ತಿದೆ.

    ನೆರೆ ರಾಜ್ಯಗಳಿಗೆ ತೆರಳಲು ಒಂದು ದಿನದ ಪಾಸ್ ನೀಡುತ್ತಿರುವ ಪರಿಣಾಮ ಭೂಮಿ ಖರೀದಿಸುವ ಬಹುತೇಕರು ತಮ್ಮ ವ್ಯವಹಾರಗಳನ್ನು ನೋಟರಿ ಕಚೇರಿಯಲ್ಲಿಯೇ ಮಾಡಿಸಿಕೊಳ್ಳುತ್ತಿದ್ದಾರೆ. ಕರೊನಾ ನಿಯಂತ್ರಣಕ್ಕೆ ಬಂದ ಬಳಿಕ ಕ್ರಯ ನೋಂದಣಿ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.
    | ರಾಜೇಂದ್ರಪ್ರಸಾದ್, ಸಬ್ ರಿಜಿಸ್ಟ್ರಾರ್

    ಕೇರಳ ಹಾಗೂ ತಮಿಳುನಾಡಿನಲ್ಲಿ ಭೂಮಿ ಬೆಲೆ ಹೆಚ್ಚಾಗಿರುವುದರಿಂದ ಅಲ್ಲಿನ ಜನರು ನೆರೆಯ ತಾಲೂಕಿನಲ್ಲಿ ಭೂಮಿ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಅಲ್ಲಿ 10 ಸೆಂಟ್ಸ್ ಭೂಮಿ ಮಾರಾಟ ಮಾಡಿ ಅದೇ ಹಣದಲ್ಲಿ ತಾಲೂಕಿನಲ್ಲಿ ಎಕರೆಗಟ್ಟಲೆ ಭೂಮಿ ಖರೀದಿಸಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಲಾಭ ಬರುತ್ತದೆ ಎಂಬ ನಿರೀಕ್ಷೆಯಿಂದ ಭೂಮಿ ಮೇಲೆ ಬಂಡವಾಳ ಹೂಡುತ್ತಿದ್ದಾರೆ. ಅದರಲ್ಲಿಯೂ ಕೇರಳದಲ್ಲಿ ವಿದೇಶದ ಹಣ ಹೆಚ್ಚಾಗಿರುವುದರಿಂದ ಪ್ರತಿ ದಿನವೂ ಭೂಮಿ ಖರೀದಿ ಒಪ್ಪಂದ, ವ್ಯವಹಾರಗಳು ನಡೆಯುತ್ತಿವೆ. ನೆರೆ ರಾಜ್ಯದವರು ಖರೀದಿಗೆ ಮುಂದಾಗುತ್ತಿರುವ ಪರಿಣಾಮ ತಾಲೂಕಿನಲ್ಲಿ ಭೂಮಿ ಬೆಲೆ ಹೆಚ್ಚಾಗುತ್ತಿದ್ದು, ಸ್ಥಳೀಯರು ಖರೀದಿಸಲು ಹಿಂಜರಿಯುವಂತಾಗಿದೆ.

    ಇದನ್ನೂ ಓದಿ : ನಗ್ರೋಟಾ ಉಗ್ರರ ಉಸ್ತುವಾರಿ ನೋಡ್ಕೊಳ್ತಿದ್ದುದು ಜೆಇಎಂ ಮುಖ್ಯಸ್ಥ ಮಸೂದ್ ಅಜರ್​ನ ಸಹೋದರ!

    ಜಮೀನುಗಳಿಗೆ ಚಿನ್ನದ ಬೆಲೆ

    ಗುಂಡ್ಲುಪೇಟೆ ಸುತ್ತಲಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಜಮೀನುಗಳಿಗೆ ಸಬ್ ರಿಜಿಸ್ಟ್ರಾರ್ ಕಚೇರಿ ಅಂದಾಜು 9 ಲಕ್ಷ ರೂ. (ಪ್ರತಿ ಎಕರೆಗೆ) ಬೆಲೆ ನಿಗದಿ ಮಾಡಿದೆ. ಆದರೆ, ಸುಲ್ತಾನ್ ಭತ್ತೇರಿ ರಸ್ತೆಯ ಕೂತನೂರು, ಊಟಿ ರಸ್ತೆಯ ಪುತ್ತನಪುರ ಗೇಟ್, ಮೈಸೂರು ರಸ್ತೆಯ ಮಾಡ್ರಹಳ್ಳಿವರೆಗಿನ ಜಮೀನುಗಳಿಗೆ 20 ರಿಂದ 25 ಲಕ್ಷ ರೂ. ಇದ್ದ ಮಾರುಕಟ್ಟೆ ಬೆಲೆ ಇದೀಗ 35ರಿಂದ 40 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಭೂಮಿಯ ಬೆಲೆ 40 ರಿಂದ 50 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ. ಚಾಮರಾಜನಗರ ರಸ್ತೆಯ ಬದಿಗಳಲ್ಲಿನ ಜಮೀನುಗಳಿಗೂ ಚಿನ್ನದ ಬೆಲೆ ಬಂದಿದೆ. ರಸ್ತೆ ಬದಿಗಳಲ್ಲಿ ಜಮೀನು ಹೊಂದಿರುವವರಿಗೆ ಶುಕ್ರದೆಸೆ ತಿರುಗುತ್ತಿದೆ.

    ಪರಿಣಾಮ ಏನಾಗಬಹುದು?:
    ಹೆಚ್ಚಿನ ಹಣ ದೊರಕುವ ಆಸೆಯಿಂದ ಸ್ಥಳೀಯರು ತಮ್ಮ ಭೂಮಿಯನ್ನು ಮಾರಾಟ ಮಾಡುವ ಸನ್ನಿವೇಶ ಎದುರಾಗಿದೆ. ಜತೆಗೆ, ಭೂಮಿ ಮಾರಾಟ ಮಾಡಿ ಬಂದ ಹಣವನ್ನು ಕೆಲವೇ ದಿನಗಳಲ್ಲಿ ಖರ್ಚು ಮಾಡಿ ಮತ್ತೆ ಕಾರ್ವಿುಕರಾಗುವ ಅಪಾಯ ಹೆಚ್ಚಾಗಿದೆ. ಇತ್ತ ತಾವು ಖರೀದಿಸಿದ ಭೂಮಿಯಲ್ಲಿ ಸ್ವಲ್ಪ ದಿನ ವ್ಯವಸಾಯ ಮಾಡುವ ಮಾಲೀಕರು, ನಂತರದ ದಿನಗಳಲ್ಲಿ ಭೂ ಪರಿವರ್ತನೆ ಮಾಡಿಸಿ ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಂಡರೂ ಅಚ್ಚರಿ ಇಲ್ಲ. ಪರಿಣಾಮ, ಭವಿಷ್ಯದಲ್ಲಿ ಆಹಾರೋತ್ಪದನೆ ಕುಂಠಿತವಾಗುವ ಸನ್ನಿವೇಶ ನಿರ್ವಣವಾಗುತ್ತಿದೆ.

    ಇದನ್ನೂ ಓದಿ : ಮತಾಂತರ ತಂದಿಟ್ಟ ಅವಾಂತರ – ತಾಯಿಯ ಅಂತ್ಯಸಂಸ್ಕಾರದ ವೇಳೆ ನಡೆಯಿತು ಫೈಟಿಂಗ್ !

    ನೋಂದಣಿ ಕಾರ್ಯ ಚುರುಕುಗೊಂಡಿಲ್ಲ:
    ಕರೊನಾ ಹಿನ್ನೆಲೆಯಲ್ಲಿ ನೆರೆ ರಾಜ್ಯಗಳಿಂದ ರಾಜ್ಯಕ್ಕೆ ಬರುವವರಿಗೆ ಕೇವಲ ಒಂದು ದಿನದ ಪಾಸ್ ನೀಡಲಾಗುತ್ತಿದೆ. ತಡವಾಗಿ ಹಿಂದಿರುಗುವವರು 12 ದಿನಗಳ ಕ್ವಾರಂಟೈನ್​ಗೆ ಒಳಪಡಬೇಕಾಗಿರುವುದರಿಂದ ಬೆಳಗ್ಗೆ ಆಗಮಿಸುವ ಖರೀದಿದಾರರು ಭೂಮಿ ಮಾಲೀಕರೊಂದಿಗೆ ರ್ಚಚಿಸಿ, ಒಪ್ಪಂದ ಮಾಡಿಕೊಂಡು ಸಂಜೆ ವೇಳೆಗೆ ಹಿಂದಿರುಗುತ್ತಿದ್ದಾರೆ. ಇದರಿಂದ ಇನ್ನೂ ಕಚೇರಿಯಲ್ಲಿ ನೋಂದಣಿ ಕಾರ್ಯ ಚುರುಕುಗೊಂಡಿಲ್ಲ ಎಂದು ಪತ್ರ ಬರಹಗಾರರು ಹೇಳುತ್ತಿದ್ದಾರೆ.

    ಚೆನ್ನೈ ರಸ್ತೆಗಿಳಿದು ಬೆಂಬಲಿಗರಿಗೆ ಸರ್​ಪ್ರೈಸ್ ಕೊಟ್ಟ ಅಮಿತ್ ಷಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts