More

    Web Exclusive | ಜೆಟಿಒ ನೇಮಕಾತಿಗೆ ಗ್ರಹಣ – ಮೂರು ವರ್ಷವಾದರೂ ಪೂರ್ಣಗೊಳ್ಳದ ಪ್ರಕ್ರಿಯೆ

    ಅವಿನಾಶ ಎಸ್. ಮೈಸೂರು
    ಸರ್ಕಾರದ ಬೇಜವಾಬ್ದಾರಿಯೋ, ಕರೊನಾ ಹಾವಳಿಯೋ ಒಟ್ಟಾರೆ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ (ಐಟಿಐಗಳಿಗೆ ಕಿರಿಯ ತರಬೇತುದಾರರ ನೇಮಕ ಪ್ರಕ್ರಿಯೆಗೆ ಗ್ರಹಣ ಹಿಡಿದಿದ್ದು, ಸುಮಾರು 10 ವರ್ಷಗಳಿದ ಯಾವುದೇ ನೇಮಕಾತಿಯಾಗದೆ ಸಾಕಷ್ಟು ಸಂಖ್ಯೆಯಲ್ಲಿ ತರಬೇತುದಾರರ ಹುದ್ದೆಗಳು ಖಾಲಿ ಉಳಿದಿವೆ.

    ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿರರುವ ಹಿನ್ನೆಲೆಯಲ್ಲಿ ಬೇರೆ ಯಾವುದೇ ಹೊಸ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಕರೊನಾ ಪರಿಣಾಮದಿಂದಾಗಿ ಹೊಸ ಉದ್ಯೋಗಗಳನ್ನು ಪಡೆಯಲá- ಸಾಧ್ಯವಾಗದೆ ಭವಿಷ್ಯದ ಮೇಲೆ ಕರಿನೆರಳು ಬೀಳುವ ಭಯ ಕಾಡುತ್ತಿದೆ.
    | ನವ್ಯಾ, ಪರೀಕ್ಷಾರ್ಥಿ, ರಾಮನಗರ

    ಕರ್ನಾಟಕ ಲೋಕಸೇವಾ ಆಯೋಗದ ಮುಖ್ಯ ಉದ್ದೇಶವೇ ಸಿಬ್ಬಂದಿ ಪೂರೈಕೆಯಾಗಿದೆ. ಯಾವುದೇ ನೇಮಕಾತಿ ತೆಗೆದುಕೊಂಡರೂ ಅಲ್ಲೆಲ್ಲವೂ ವಿಳಂಬ ಧೋರಣೆಯೇ ಎದ್ದು ಕಾಣುತ್ತಿದೆ. ಮುಂದಾದರೂ ಆಯೋಗವು ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಕಾರ್ಯ ಮಾಡಲಿ.
    | ಸತ್ಯನಾರಾಯಣ, ಪರೀಕ್ಷಾರ್ಥಿ, ಮೈಸೂರು

    ಕರೊನಾ ಮಹಾಮಾರಿಯಿಂದಾಗಿ ಯಾವುದೇ ಕೆಲಸವಿಲ್ಲದೆ ಸಾವಿರಾರು ಅಭ್ಯರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ, ನೂರಾರು ಉದ್ಯೋಗಾಕಾಂಕ್ಷಿಗಳಿಗೆ ವಯಸ್ಸು ಮೀರುತ್ತಿದ್ದು, ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಆಯ್ಕೆ ಪಟ್ಟಿ ಪ್ರಕಟಿಸಲು ಕೆಪಿಎಸ್​ಸಿಗೆ ಸೂಚಿಸಬೇಕು.
    | ಚೇತನ್, ಪರೀಕ್ಷಾರ್ಥಿ, ಮಂಡ್ಯ

    ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ನೇಮಕಾತಿಗೆ ಅನುಭವ ಕಡ್ಡಾಯವಾಗಿರುವುದರಿಂದ ಪರಿಶೀಲನೆ ನಡೆಯುತ್ತಿದೆ. ಶೀಘ್ರದಲ್ಲಿಯೇ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ. ಪ್ರಶಿಕ್ಷಣಾರ್ಥಿಗಳು ಆತಂಕಗೊಳ್ಳುವ ಅಗತ್ಯವಿಲ್ಲ.
    | ಹೆಸರೇಳಲಿಚ್ಛಿಸದ ಅಧಿಕಾರಿ

    2018ರ ಫೆಬ್ರವರಿಯಲ್ಲಿ ಕೆಪಿಎಸ್​ಸಿಯಿಂದ 1520 ಜೆಟಿಒ (ಜೂನಿಯರ್ ಟ್ರೇನಿಂಗ್ ಆಫೀಸರ್)ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. 50 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಅದರಂತೆ 2018ರ ಡಿಸೆಂಬರ್ ಅಂತ್ಯದಲ್ಲಿ ಪರೀಕ್ಷೆಯೂ ಮುಗಿದು 2019ರ ನವೆಂಬರ್​ನಲ್ಲಿಯೇ ತಾತ್ಕಾಲಿಕ ಆಯ್ಕೆ ಪಟ್ಟಿಯೂ ಪ್ರಕಟವಾಯಿತು. ಆದರೆ, ಅಲ್ಲಿಗೆ ನಿಂತಿರುವ ಪ್ರಕ್ರಿಯೆ 3 ವರ್ಷವಾಗುತ್ತಾ ಬಂದರೂ ಇನ್ನೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಗೊಳ್ಳದೆ ನನೆಗುದಿಗೆ ಬಿದ್ದಿದೆ.

    ಇದನ್ನೂ ಓದಿ : ಮತಾಂತರ ತಂದಿಟ್ಟ ಅವಾಂತರ – ತಾಯಿಯ ಅಂತ್ಯಸಂಸ್ಕಾರದ ವೇಳೆ ನಡೆಯಿತು ಫೈಟಿಂಗ್ !

    ತಾತ್ಕಾಲಿಕ ಪಟ್ಟಿಯಲ್ಲಿ ಆ್ಕಯೆಾದರೂ ಆದೇಶ ಪ್ರತಿ ಕೈಗೆ ಸಿಗದೆ ನೂರಾರು ಉದ್ಯೋಗಾಕಾಂಕ್ಷಿಗಳು ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ಇನ್ನೂ ಕೆಲವರು ಮುಂದಿನ ದಾರಿ ಕಾಣದೆ ಕಂಗಾಲಾಗಿದ್ದು, ಮಾಡಲು ಕೆಲಸವಿಲ್ಲದೆ ಖಿನ್ನತೆಗೆ ಜಾರುತ್ತಿದ್ದಾರೆ. ರಾಜ್ಯದಲ್ಲಿ 258 ಸರ್ಕಾರಿ, 196 ಅನುದಾನಿತ ಐಟಿಐಗಳಿದ್ದು, ಪ್ರತಿ ವರ್ಷ ಸಾವಿರಾರು ಅಭ್ಯರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೆ, 2014ರಲ್ಲಿ ರಾಜ್ಯ ಸರ್ಕಾರ ಹೊಸದಾಗಿ 100 ಐಟಿಐಗಳನ್ನು ತೆರೆದಿದ್ದು, ಅಲ್ಲಿಯೂ ತರಬೇತುದಾರರ ಕೊರತೆಯಿದೆ. ಇದು ವಿದ್ಯಾರ್ಥಿಗಳ ಕಲಿಕೆ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದ್ದು, ಅರೆಬೆಂದ ಕಾಳುಗಳಂತೆ ತಮ್ಮ ಅವಧಿ ಮುಗಿಸಿ ತರಬೇತಿ ಕೇಂದ್ರಗಳಿದ ಹೊರಬೀಳುತ್ತಿದ್ದಾರೆ.

    ಇದನ್ನೂ ಓದಿ : ಸುಲಭವಾಗಿ ಪೊಲೀಸ್ ಸೇವೆ ಪಡೆಯಲು ತಂತ್ರಜ್ಞಾನ ಬಳಸಿ; ಕಮಿಷನರ್ ಕಮಲ್ ಪಂತ್ ಸಲಹೆ

    ಟಾಟಾ ಟೆಕ್ನಾಲಜೀಸ್​ನೊಂದಿಗೆ ಒಪ್ಪಂದ
    ಒಂದೆಡೆ ತರಬೇತುದಾರರ ಆಯ್ಕೆ ಪ್ರಕ್ರಿಯೆ ಗ್ರಹಣ ಹಿಡಿದಿದ್ದರೂ ಆ ಕಡೆ ಗಮನಹರಿಸದ ಸರ್ಕಾರ ನವೆಂಬರ್ 6ರಂದು ಪುಣೆಯ ಟಾಟಾ ಟೆಕ್ನಾಲಜೀಸ್ ಕಂಪನಿ ಸಹಯೋಗದಲ್ಲಿ ರಾಜ್ಯದ ಕೈಗಾರಿಕಾ ತರಬೇತಿ ಸಂಸ್ಥೆಗಳ ಗುಣಮಟ್ಟ ಹೆಚ್ಚಿಸಿ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಅನ್ವಯ ಟಾಟಾ ಟೆಕ್ನಾಲಜೀಸ್ ಸಹಭಾಗಿತ್ವದಲ್ಲಿ ಕೈಗಾರಿಕೆಗಳ ಬೇಡಿಕೆಗೆ ತಕ್ಕಂತೆ ತರಬೇತಿ ನೀಡಲು ಅಗತ್ಯ ಸೌಲಭ್ಯ ಒದಗಿಸುವ ಮೂಲಕ ರಾಜ್ಯದ 150 ಸರ್ಕಾರಿ ಐಟಿಐಗಳನ್ನು 4636.50 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸುವ ಹಾಗೂ ಈ ಐಟಿಐಗಳಲ್ಲಿ ಕೈಗಾರಿಕೆಗಳಿಗೆ ವಾಸ್ತವವಾಗಿ ಅಗತ್ಯವಿರುವ ಕೌಶಲ ತರಬೇತಿ ನೀಡುವ ಉದ್ದೇಶವನ್ನು ಹೊಂದಲಾಗಿದೆ.

    ಇದನ್ನೂ ಓದಿ : ಜೋ ಬಿಡೆನ್​ ಅಧಿಕಾರಕ್ಕೆ ಬರುತ್ತಿದ್ದಂತೆ ಟಾಯ್ಲೆಟ್​ ಪೇಪರ್​ಗೂ ಬಂತು ಬರ! ಕೊಳ್ಳಲು ಮುಗಿಬಿದ್ದ ಜನ

    ಬಹುತೇಕ ಎಲ್ಲ ನೇಮಕಾತಿಗಳೂ ವಿಳಂಬ: ಕೆಪಿಎಸ್​ಸಿ ನಡೆಸುವ ಬಹುತೇಕ ಎಲ್ಲ ನೇಮಕಾತಿಗಳೂ ವರ್ಷಗಟ್ಟಲೇ ವಿಳಂಬವಾಗುತ್ತಿವೆ. ಯಾವುದೇ ಇಲಾಖೆಗೆ ಅಗತ್ಯ ಸಿಬ್ಬಂದಿಯನ್ನು ಆಯ್ಕೆ ಮಾಡಿ ನೇಮಕ ಆದೇಶ ಪತ್ರ ನೀಡುವಷ್ಟರಲ್ಲಿ ಇಲಾಖೆಯಲ್ಲಿ ಮತ್ತಷ್ಟು ಸಿಬ್ಬಂದಿ ಕೊರತೆ ಉಂಟಾಗಿರುತ್ತದೆ. ಈ ನಿಧಾನಗತಿಯಿಂದ ಹಲವು ಉದ್ಯೋಗಾಕಾಂಕ್ಷಿಗಳ ಮತ್ತು ಸಾರ್ವಜನಿಕರ ಹಿಡಿಶಾಪಕ್ಕೆ ಗುರಿಯಾಗುತ್ತಿದ್ದ ಆಯೋಗಕ್ಕೆ ಇತ್ತೀಚೆಗೆ ಹೈಕೋರ್ಟ್ ಕೂಡ ಛೀಮಾರಿ ಹಾಕಿದೆ. ಲೋಪಗಳನ್ನು ಸರಿಪಡಿಸಲು ಸಾಧ್ಯವಿಲ್ಲದಿದ್ದರೆ ಕೆಪಿಎಸ್​ಸಿಯನ್ನು ರದ್ದು ಮಾಡುವುದೇ ಸೂಕ್ತ ಎಂದು ಹೈಕೋರ್ಟ್ ಹೇಳಿರುವುದು ಆಯೋಗ ಮತ್ತು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ಇನ್ನು ಮುಂದಾದರೂ ಸರ್ಕಾರ ಮತ್ತು ಆಯೋಗ ಈ ಬಗ್ಗೆ ಗಮನಹರಿಸಿ ನೇಮಕಾತಿ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಿ ಎಂಬುದು ಉದ್ಯೋಗಾಕಾಂಕ್ಷಿಗಳ ಆಶಯ.

    ಕಳ್ಳಭಟ್ಟಿ ದುರಂತಕ್ಕೆ ಏಳು ಸಾವು, ಕನಿಷ್ಠ 15 ಮಂದಿ ಆಸ್ಪತ್ರೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts