More

    ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ

    ತೇರದಾಳ: ಇತ್ತೀಚೆಗೆ ಸಂಭವಿಸುತ್ತಿರುವ ಬೈಕ್ ಅಪಘಾತಗಳನ್ನು ಪರಿಶೀಲಿಸಿದರೆ 10 ರಲ್ಲಿ 8 ರಿಂದ 9 ಜನ ಸಾವನ್ನಪ್ಪುತ್ತಿದ್ದು, ಇದಕ್ಕೆ ಹೆಲ್ಮೆಟ್ ಧರಿಸದಿರುವುದೇ ಕಾರಣ ಎಂದು ಬನಹಟ್ಟಿ ಸಿಪಿಐ ಸಂಜಯ ಬಳಗಾರ ಹೇಳಿದರು.

    ಅಪರಾಧ ತಡೆ ಮಾಸಾಚರಣೆ ನಿಮಿತ್ತ ಗುರುವಾರ ಇಲ್ಲಿನ ಕೆಜಿಎಸ್ ಶಾಲೆಯಲ್ಲಿ ತೇರದಾಳ ಪೂರ್ವ ವಲಯದ ಸರ್ಕಾರಿ ಶಾಲೆ ಮಕ್ಕಳಿಗೆ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ರಸಪ್ರಶ್ನೆ, ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಲು ಹೇಳಬೇಕು ಎಂದರು.
    ಬಂಗಾರದ ಆಭರಣಗಳನ್ನು ಸ್ವಚ್ಛ ಮಾಡಿಕೊಡುವುದಾಗಿ ಮನೆಗಳಿಗೆ ಬರುವ ವಂಚಕರ ಹಾವಳಿ ಹೆಚ್ಚಾಗಿದೆ. ಆದ್ದರಿಂದ ಮನೆಯಲ್ಲಿ ಈ ಬಗ್ಗೆಯೂ ಜಾಗೃತಿ ಹೊಂದಲು ಮಕ್ಕಳಿಗೆ ಮನವರಿಕೆ ಮಾಡಿದರು.

    ಪಿಎಸ್‌ಐ ಅಪ್ಪು ಐಗಳಿ, ವಿದ್ಯಾರ್ಥಿಗಳಲ್ಲಿ ಕಾನೂನಿ ಅರಿವು ಮತ್ತು ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಸರ್ಕಾರಿ ಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

    ಸಿಆರ್‌ಪಿ ಎ.ಆರ್. ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ವಿಠಲ ವಾಜಂತ್ರಿ ಅಧ್ಯಕ್ಷತೆ ವಹಿಸಿದ್ದರು.
    ಮುಖ್ಯಶಿಕ್ಷಕ ಕೆ.ಡಿ ಮಾಲಗಾಂವಿ, ಗಂಗಾಧರ ಮೋಪಗಾರ, ಎಂ.ಕೆ. ಮೇಗಾಡಿ, ಪ್ರಕಾಶ ಹವಾಲ್ದಾರ್, ಧನಂಜಯ ಯಲ್ಲಟ್ಟಿ, ಪರಯ್ಯ ತೆಳಗಿನಮನಿ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts