More

    ತನ್ನ ಯಶಸ್ಸಿನ ಹಿಂದಿರುವ ತಾಯಿಯ ಶ್ರಮ ನೆನೆದು ಭಾವುಕರಾದ ಅಂಜಿಕ್ಯಾ ರಹಾನೆ

    ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ಅಂಜಿಕ್ಯಾ ರಹಾನೆ ಇಂದು ವಿಶ್ವ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರರಾಗಿರುವ ಅದ್ಭುತ ಆಟಗಾರ ಎಂಬುದರಲ್ಲಿ ಸಂಶಯವೇ ಇಲ್ಲ. ರಹಾನೆಯಂತಹ ಪ್ರತಿಭೆ ಆರಂಭದ ದಿನಗಳಲ್ಲಿ ಬಡತನದ ಬೇಗೆಯನ್ನು ದಾಟಿ ಇತರರಿಗೆ ಸ್ಫೂರ್ತಿಯಾದಂತಹ ಸರಳ ವ್ಯಕ್ತಿತ್ವದ ವ್ಯಕ್ತಿಯು ಹೌದು.

    ಟೆಸ್ಟ್​ನಿಂದ ಕ್ರಿಕೆಟ್​ ವೃತ್ತಿ ಜೀವನವನ್ನು ಆರಂಭಿಸಿದ ರಹಾನೆ ತಮ್ಮ ಅದ್ಭುತ ಪ್ರತಿಭೆಯಿಂದಲೇ ಎಲ್ಲ ಮಾದರಿ ಕ್ರಿಕೆಟ್​ನಲ್ಲೂ ತಮ್ಮದೇ ಛಾಪು ಮೂಡಿಸಿದರು. ಸೋಲು-ಗೆಲುವಿನ ಏರಿಳಿತಗಳಿಂದ ಕ್ರಿಕೆಟ್​ ವೃತ್ತಿ ಬದುಕಿನಲ್ಲಿ ತಮ್ಮದೇ ಇತಿಹಾಸ ಸೃಷ್ಟಿಸಿಕೊಂಡಿರುವ ರಹಾನೆ ಬೆಳೆದು ಬಂದ ಹಾದಿ ರೋಚಕವಾಗಿದೆ.

    ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನದಲ್ಲಿ ರಹಾನೆ ತಮ್ಮ ಬದುಕಿನ ಹೋರಾಟದ ಚಿತ್ರಣವನ್ನು ವಿವರಿಸಿದರು. ಬಡತನ ಕುಟುಂಬದಲ್ಲಿ ಜನಿಸಿದ ರಹಾನೆಗೆ ತಮ್ಮ ಪಾಲಕರು ಯಾವುದೇ ಕೊರತೆ ಬರದಂತೆ ನೋಡಿಕೊಂಡಿದ್ದು ಇಂದು ರಹಾನೆ ಸಾಧನೆಗೆ ಕಾರಣವಾಗಿದೆ. ಕ್ರಿಕೆಟ್​ ತರಬೇತಿಗಾಗಿ ಪ್ರತಿನಿತ್ಯ ರಿಕ್ಷಾದಲ್ಲಿ ಓಡಾಡುವಷ್ಟು ಹಣವು ಇರಲಿಲ್ಲ. ನನ್ನ ತಾಯಿ ಪ್ರತಿದಿನ ಸುಮಾರು 8 ಕಿ.ಮೀ. ನಡೆದುಕೊಂಡು ನನಗೆ ತರಬೇತಿ ಕೊಡಿಸಿದರು ಎಂದು ಮೆಲುಕು ಹಾಕಿದ್ದಾರೆ.

    ನಾನಿಲ್ಲಿರುವುದೇ ನನ್ನ ಪಾಲಕರಿಂದ
    ಒಂದು ಕಂಕುಳಲ್ಲಿ ನನ್ನ ಸಹೋದರನನ್ನು ಎತ್ತಿಕೊಂಡು, ಇನ್ನೊಂದು ಕೈಯಲ್ಲಿ ನನ್ನ ಕ್ರಿಕೆಟ್​ ಕಿಟ್​ ಅನ್ನು ಹಿಡಿದು ನನ್ನ ತಾಯಿ ಪ್ರತಿದಿನ ಸುಮಾರು 8 ಕಿ.ಮೀ ನಡೆಯುತ್ತಿದ್ದರು. ನಾನು ಕ್ರಿಕೆಟರ್​ ಆಗಬೇಕೆಂಬ ಕನಸನ್ನು ನನ್ನ ಪಾಲಕರು ಖುಷಿಯಿಂದಲೇ ಸ್ವೀಕರಿಸಿದರು. ಸಾಕಷ್ಟು ಶ್ರಮಿಸಿದರು. ಅದರ ಫಲಿತಾಂಶವೇ ನಾನಿಂದು ಇಲ್ಲಿದ್ದೇನೆ ಎಂದರು.

    ನನ್ನ ಕ್ರಿಕೆಟ್​ ವೃತ್ತಿ ಜೀವನ ಶುರುವಾಗಿದ್ದು ದೊಂಬಿವಿಲಿಯಲ್ಲಿ. ನಾನು ಕ್ರಿಕೆಟ್​ ತರಬೇತಿಗೆ ಹೋಗುವಾಗ ನಾವೇಕೆ ರಿಕ್ಷಾದಲ್ಲಿ ಹೋಗಬಾರದು ಎಂದು ನನ್ನ ತಾಯಿ ಬಳಿ ಕೇಳಿದ್ದೆ. ಆದರೆ, ಅವರ ಬಳಿ ಅಂದಿಗೆ ಯಾವುದೇ ಉತ್ತರ ಇರಲಿಲ್ಲ. ವಾರದಲ್ಲಿ ಒಂದು ಬಾರಿ ಮಾತ್ರ ನನ್ನ ಆಸೆಯಂತೆ ರಿಕ್ಷಾ ಸವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

    ನಾನು ಇಲ್ಲಿರುವುದೇ ನನ್ನ ಪಾಲಕರಿಂದ. ಅವರಿಗಾಗಿಯೇ ನಾನಿಂದು ಹಳೆಯ ರಹಾನೆಯಾಗಿಯೇ ಉಳಿದಿದ್ದೇನೆ. ನನಗಾಗಿ ನನ್ನ ಕುಟುಂಬ ತುಂಬಾ ತ್ಯಾಗ ಮಾಡಿದೆ. ನನ್ನ ತಂದೆಯು ಸಹ ನನ್ನ ತರಬೇತಿಗೆ ಹಲವು ಬಾರಿ ಕರೆದುಕೊಂಡು ಹೋಗಿದ್ದಾರೆ. ನನ್ನ ಯಾವುದೇ ಕನಸಿಗೂ ಅವರು ಅಡ್ಡಿಯಾಗಲಿಲ್ಲ. ಎಂದಿಗೂ ನನ್ನ ದಾರಿಯನ್ನು ಅವರು ಪ್ರಶ್ನಿಸಲಿಲ್ಲ. ಅವರ ಪ್ರೋತ್ಸಾಹ ಮತ್ತು ಸಹಕಾರ ನಾನಿಂದು ಒಳ್ಳೆಯ ಸ್ಥಾನಕ್ಕೇರಲು ಕಾರಣವಾಗಿದೆ ಎಂದು ಹೇಳಿಕೊಂಡಿದ್ದಾರೆ.

    ಅಂದಹಾಗೆ ರಹಾನೆ 2011ರಲ್ಲಿ ಇಂಗ್ಲೆಂಡ್​ ಪ್ರವಾಸದ ವೇಳೆ ಟೀಮ್​ ಇಂಡಿಯಾಗೆ ಸೇರುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts