More

    ದೊಡ್ಡಶಾಂತನ ಕಟ್ಟೆ ಹೂಳು ತೆರವು

    ಚಾಮರಾಜನಗರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಮಾನವ ಹಕ್ಕುಗಳ ಹೋರಾಟ ಸಮಿತಿ, ದೊಡ್ಡಶಾಂತನ ಕಟ್ಟೆ ಕೆರೆ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಭಾನುವಾರ ಕೊಳ್ಳೇಗಾಲ ಪಟ್ಟಣಕ್ಕೆ ಸಮೀಪದ ಬಸ್ತೀಪುರ ಗ್ರಾಮದ ದೊಡ್ಡಶಾಂತನ ಕಟ್ಟೆ ಹೂಳೆತ್ತುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಕಾರ್ಯಕ್ರಮಕ್ಕೆ ಧರ್ಮಸ್ಥಳ ಸಂಸ್ಥೆ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ್ ನಲ್ಲಿತಾಯ್ ಚಾಲನೆ ನೀಡಿ ಮಾತನಾಡಿ, ಪುರಾತನ ಕಾಲದಲ್ಲಿ ರಾಜ ಮಹಾರಾಜರು ಕಟ್ಟಿಸಿದ ಕೆರೆ, ಕಟ್ಟೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಹೊಣೆಗಾರಿಕೆಯೂ ಹೌದು. ಧರ್ಮಸ್ಥಳ ಸಂಸ್ಥೆ 700ಕ್ಕೂ ಅಧಿಕ ಕೆರೆಗಳಿಗೆ ಪುನರುಜ್ಜೀವನ ನೀಡಿದೆ. ಇದರಿಂದ ಎಷ್ಟೋ ಕೃಷಿಕರ ಭೂಮಿಗಳಿಗೆ ಫಲವತ್ತಾದ ಮಣ್ಣಿನ ಸೌಲಭ್ಯ, ಅಂತರ್ಜಲ ಮಟ್ಟ, ಸಂಗ್ರಹ ಸಾಮರ್ಥ್ಯ ಹೆಚ್ಚುವಿಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಅನುಕೂಲವಾಗಿದೆ. ಇಂತಹ ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿದ್ದು ನಮ್ಮೆಲ್ಲರ ಪುಣ್ಯ ಎಂದರು.

    ನಗರಸಭೆ ಮಾಜಿ ಅಧ್ಯಕ್ಷ ಶಾಂತರಾಜು ಬಸ್ತೀಪುರ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಸಾಮಾಜಿಕ ಕಾರ್ಯಕ್ರದಲ್ಲಿ ತೊಡಗಿಸಿಕೊಂಡು ಜನರ ಅಭಿವೃದ್ಧಿಗೆ ಶ್ರಮಿಸಿದೆ. ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಂಘ ಸಂಸ್ಥೆಗಳ ರಚನೆ ಮೂಲಕ ನೆರವಾಗಿದೆ. ಅಂತೆಯೆ, ನಮ್ಮೂರಿನ ಕೆರೆ ಅಭಿವೃದ್ಧಿಗೆ ಮುಂದಾಗಿರುವುದು ಸಂತೋಷ ತಂದಿದೆ ಎಂದರು.

    ನಗರಸಭೆ ಮಾಜಿ ಉಪಾಧ್ಯಕ್ಷೆ ಸುಶೀಲಾ ಶಾಂತರಾಜು, ದೊಡ್ಡ ಶಾಂತನ ಕೆರೆ ಸಮಿತಿ ಅಧ್ಯಕ್ಷ ಮಹದೇವಪ್ಪ, ಬಸ್ತೀಪುರ ಗ್ರಾಮದ ಗೌಡ ಬೋಳೇಗೌಡ, ಮುಖಂಡರು ಹಾಗು ಮಹಿಳೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts