More

    ಕಾಲುವೆಯಲ್ಲಿ ಗೇಜ್ ನಿರ್ವಹಣೆ ಸರಿಪಡಿಸಿ

    ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಮೈಲ್ 69ರಲ್ಲಿ ಗೇಜ್ ಒಂದು ಅಡಿ ತಪ್ಪಾಗಿದ್ದು, ಅದನ್ನು ಸರಿಪಡಿಸುವ ಮೂಲಕ ಮಾನ್ವಿ, ಸಿರವಾರ, ದೇವದುರ್ಗ, ರಾಯಚೂರು ತಾಲೂಕುಗಳಿಗೆ ಸಮರ್ಪಕ ನೀರು ಒದಗಿಸಬೇಕು ಎಂದು ತುಂಗಭದ್ರಾ ಎಡದಂಡೆ ಕಾಲುವೆ ರೈತರ ವೇದಿಕೆ ಒತ್ತಾಯಿಸಿದೆ.

    ವೇದಿಕೆ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಶ್ರೀನಿವಾಸಗೆ ಮನವಿ ಸಲ್ಲಿಸಿ, ಸಮರ್ಪಕ ಗೇಜ್ ನಿರ್ವಹಣೆಯಿಲ್ಲದೆ ಕಾಲುವೆ ಕೆಳಭಾಗದ ರೈತರಿಗೆ ಸಮರ್ಪಕ ನೀರು ದೊರೆಯದಂತಾಗಿದ್ದು, ಕೂಡಲೇ ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

    ವಾಸ್ತವದಲ್ಲಿ ಕಾಲುವೆ ಕೆಳಭಾಗಕ್ಕೆ ಕಡಿಮೆ ನೀರು ಹರಿಸಲಾಗುತ್ತಿದ್ದು, ಲೆಕ್ಕದ ಪುಸ್ತಕದಲ್ಲಿ ನೀರು ಸರಿಯಾಗಿ ಹರಿದಿದೆ ಎಂದು ತೋರಿಸಲಾಗುತ್ತಿದೆ. ರಾಜಾರೋಷವಾಗಿ ಯಂತ್ರಗಳನ್ನು ಬಳಸಿಕೊಂಡು ನೀರು ಕಳ್ಳತನ ಮಾಡಿ ಜಮೀನಿಗೆ ಹರಿಸಿಕೊಳ್ಳಲಾಗುತ್ತಿದೆ. ಆದರೆ ಅಕಾರಿಗಳು ಕಂಡು ಕಾಣದಂತಿದ್ದಾರೆ.

    ಪಾಪಯ್ಯ ಟನಲ್‌ನಿಂದಾಗಿ ಕಾಲುವೆಗೆ ನಿಗದಿತ ಪ್ರಮಾಣದ ನೀರು ಹರಿಸಲು ಸಾಧ್ಯವಾಗುತ್ತಿಲ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಮುಖ್ಯ ಕಾಲುವೆಗೆ ರಂಧ್ರ ಕೊರೆದು ಪಂಪ್‌ಸೆಟ್ ಮೂಲಕ ನೀರು ಕಳ್ಳತನ ಮಾಡುತ್ತಿರುವುದನ್ನು ತಡೆಯಬೇಕು.
    ಕಾಲುವೆ ನಿರ್ವಹಣೆಗೆ ಸಿಬ್ಬಂದಿ ಕೊರತೆಯನ್ನು ನಿವಾರಿಸಬೇಕು. ನವಲಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

    ವೇದಿಕೆ ಅಧ್ಯಕ್ಷ ಶಂಕರಗೌಡ ಹರವಿ, ಪದಾಕಾರಿಗಳಾದ ಅಮರೇಶ ಹೊಸಮನಿ, ವೈ.ಬಸನಗೌಡ, ಶಿವಶಂಕರರೆಡ್ಡಿ, ಎಚ್.ವಿಶ್ವನಾಥಗೌಡ, ಕೆ.ಚನ್ನಬಸವ ಪಾಟೀಲ್, ಭೀಮರೆಡ್ಡಿ ಸರ್ಜಾಪುರ, ಶರಣಯ್ಯ, ಅಮರೇಶ ಪಾಟೀಲ್, ಎನ್.ವಿರುಪಾಕ್ಷಿಗೌಡ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts