More

    ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ – ಸಚಿವ ಜಾರಕಿಹೊಳಿ

    ಅಥಣಿ/ ಕೊಕಟನೂರ: ಅಥಣಿ ಮತಕ್ಷೇತ್ರಕ್ಕೆ ವಿಶೇಷ ನೀರಾವರಿ ಯೋಜನೆ ರೂಪಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಭರವಸೆ ನೀಡಿದರು.

    ತಾಲೂಕಿನ ಅವರಖೋಡದಲ್ಲಿ ನಿರ್ಮಾಣವಾಗಲಿರುವ ಬ್ರಿಡ್ಜ್ ಕಂ ಬಾಂದಾರ ಸ್ಥಳ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 48 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಇಲ್ಲಿ 0.7 ಟಿಎಂಸಿ ಸಂಗ್ರಹಣೆಯಾಗಲಿದ್ದು, ಇದರಿಂದ ಅಥಣಿ ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ನೀಗಲಿದೆ.

    ಮಲ್ಟಿವಿಲೇಜ್ ಯೋಜನೆಗೂ ಇದು ಸಹಕಾರಿಯಾಗಲಿದೆ. ಬೇಸಿಗೆಯಲ್ಲಿ ಕೃಷ್ಣಾ ನದಿ ನೀರಿನ ಅಭಾವ ತಪ್ಪಿಸಲು ಮಹಾರಾಷ್ಟ್ರ ಸರ್ಕಾರದ ಜತೆ ಮಾತುಕತೆ ನಡೆದಿದ್ದು, ಬರುವ ದಿನಗಳಲ್ಲಿ ಅಥಣಿ, ರಾಯಬಾಗ ಹಾಗೂ ಚಿಕ್ಕೋಡಿ ತಾಲೂಕಿನ ನೀರಾವರಿ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

    ನೀರಾವರಿ ಸೌಲಭ್ಯಕ್ಕೆ ಬದ್ಧ: ನೀರಿನ, ಸಮಸ್ಯೆಗೆ, ಶಾಶ್ವತ, ಪರಿಹಾರ, ಸಚಿವ ಜಾರಕಿಹೊಳಿ, ಭರವಸೆ, ಬಾಂದಾರ, ನಿರ್ಮಾಣಕ್ಕೆ, ಸ್ಥಳ ಪರಿಶೀಲನೆ, ಅಥಣಿ ಕ್ಷೇತ್ರಕ್ಕೆ ಹೆಚ್ಚಿನ ನೀರಾವರಿ ಸೌಲಭ್ಯ ಒದಗಿಸಲು ಬದ್ಧನಾಗಿದ್ದೇನೆ. ಝುಂಜುರವಾಡ-ಕೊಟ್ಟಲಗಿ- ಕಕಮರಿ ಏತ ನೀರಾವರಿ ಕುಡಿಯುವ ನೀರಿನ ಯೋಜನೆ ರೂಪಿಸಲಾಗುವುದು. ಇದಕ್ಕೆ ಅಲ್ಲಿಯ ರೈತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

    ಶಾಸಕ ಮಹೇಶ ಕುಮಠಳ್ಳಿ, ಜಿಪಂ ಸದಸ್ಯ ಸಿದ್ದಪ್ಪ ಮುದಕಣ್ಣವರ, ಕಿರಣಗೌಡ ಪಾಟೀಲ, ನೀರಾವರಿ ಇಲಾಖೆ ಎಂಡಿ ಮಲ್ಲಿಕಾರ್ಜುನ ಗುಂಗೆ, ಅಧೀಕ್ಷಕ ಅಭಿಯಂತ ಚಂದ್ರಶೇಖರ, ಅಥಣಿ ಡಿವೈಎಸ್‌ಪಿ ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ, ಅರವಿಂದ ಕಣಗಲ್ಲ, ಅರುಣ ಯಲಗುದ್ರಿ, ತಾಪಂ ಇಒ ರವೀಂದ್ರ ಬಂಗಾರೆಪ್ಪನವರ, ಪ್ರವೀಣ ಹುಣಸಿಕಟ್ಟಿ, ಅಮೂಲ್ ನಾಯಿಕ, ಗ್ರಾಪಂ ಅಧ್ಯಕ್ಷ ದಶರಥ ತಳವಾರ, ಈರಗೌಡ ಪಾಟೀಲ, ಜಿನಗೌಡ ಪಾಟೀಲ, ಎ.ಸಿ. ಪಾಟೀಲ, ಶ್ರೀಮಂತ ನೇಮಗೌಡ, ಶೀತಲಗೌಡ ಪಾಟೀಲ, ಮುತ್ತಣ್ಣ ಹಿಡಕಲ್ಲ, ಬಾಹುಬಲಿ ಪಾಟೀಲ, ಗಿರೀಶ ಹಳಿಂಗಳಿ, ಸದಾಶಿವ ಸವದಿ, ರವೀಂದ್ರ ಕಿತ್ತೂರ, ಕೆ.ಕೆ. ಜಾಲಿಬೇರಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

    ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಕಾಮಗಾರಿ ವೀಕ್ಷಣೆ

    ಅಥಣಿ ತಾಲೂಕಿನ ಝಂಜುರವಾಡದಲ್ಲಿ ನಿರ್ಮಾಣ ಹಂತದಲ್ಲಿರುವ 8.90 ಕೋಟಿ ರೂ. ವೆಚ್ಚದ ಬ್ಯಾರೇಜ್ ಕಾಮಗಾರಿಯನ್ನು ಸಚಿವ ರಮೇಶ ಜಾರಕಿಹೊಳಿ ವೀಕ್ಷಿಸಿದರು. ಗುಣಮಟ್ಟದಿಂದ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಬಳಿಕ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿ ವೀಕ್ಷಿಸಿ, ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು. ಇದರಿಂದ ಕಾಗವಾಡ ಮತಕ್ಷೇತ್ರವು ನೀರಾವರಿ ಸೌಲಭ್ಯ ಹೊಂದಲಿದೆ. ಈ ಭಾಗದ ರೈತರ ಕನಸು ನನಸಾಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts