More

    ಸಪ್ತಗಿರಿ ಬಡಾವಣೆಯಲ್ಲಿ ನೀರಿನ ಬವಣೆ; ಬತ್ತಿಹೋದ ಜಲಮೂಲಗಳು

    ಬೆಂಗಳೂರು: ರಾಜಧಾನಿಯ ವಿವಿಧ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ನಿವಾಸಿಗಳು ಹೈರಾಣಾಗಿದ್ದಾರೆ. ಅದರಲ್ಲೂ ಯಶವಂತಪುರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಜನರು ಟ್ಯಾಂಕರ್​ ನೀರು ತರಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

    ಯಶವಂತಪುರದ ಸಪ್ತಗಿರಿ ಬಡಾವಣೆಯ ವಾರ್ಡ್​ ಸಂಖ್ಯೆ 40 ವ್ಯಾಪ್ತಿಯಲ್ಲಿ ಕೊರೆಯಿಸಲಾಗಿದ್ದ 18 ಕೊಳವೆಬಾವಿಗಳಲ್ಲಿ 10ರಲ್ಲಿ ನೀರು ಸಿಕ್ಕಿರಲಿಲ್ಲ. ಅಂತರ್ಜಲ ಮಟ್ಟ ಕುಸಿತದಿಂದ 8 ಕೊಳವೆಬಾವಿಗಳು ಸಂಪೂರ್ಣ ಬತ್ತಿಹೋಗಿವೆ. ಪರಿಣಾಮ, ಕಳೆದ ಐದು ತಿಂಗಳಿನಿಂದ ನೀರಿಲ್ಲದಂತಾಗಿದೆ ಎಂದು ಸ್ಥಳಿಯರು ಅಳಲು ತೋಡಿಕೊಂಡಿದ್ದಾರೆ.

    ಸಪ್ತಗಿರಿ ಬಡಾವಣೆಗೆ ಬೋರ್​ವೆಲ್​ನಿಂದ ನೀರು ಪೂರೈಕೆಯಾಗುತ್ತಿತ್ತು. ಬೇಸಿಗೆಗೂ ಮುನ್ನವೇ ಕೊಳವೆಬಾವಿಗಳು ಬತ್ತಿ ಹೋಗಿರುವುದರಿಂದ ನಿವಾಸಿಗಳು ಸಂಕಷ್ಟು ಅನುಭವಿಸುತ್ತಿದ್ದಾರೆ. ಹನಿ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಬೋರ್​ವೆಲ್​ಗಳಲ್ಲಿ ನೀರು ಬತ್ತಿಹೋದ ಬಳಿಕ 600-800 ರೂ. ನೀಡಿ ಟ್ಯಾಂಕರ್​ ನೀರು ತರಿಸಿಕೊಳ್ಳುತ್ತಿದ್ದೇವೆ. ಫೋನ್​ ಮಾಡಿ ತಿಳಿಸಿದರೆ, ಮೂರ್ನಾಲ್ಕು ದಿನ ಬಿಟ್ಟು ನೀರು ಸರಬರಾಜು ಮಾಡುತ್ತಿದ್ದಾರೆ ಎಂದು ಸ್ಥಳಿಯ ನಿವಾಸಿಗಳು ಅಲವತ್ತುಕೊಂಡಿದ್ದಾರೆ.

    ನೀರಿನ ಘಟಕದಲ್ಲೂ ಇಲ್ಲ

    ಸುವರ್ಣನಗರ, ಎಚ್​ಎಂಟಿ ಬಡವಾಣೆ, ನಾಗಸಂದ್ರ ಭಾಗದಲ್ಲಿ ಕೆಲವು ಕುಡಿಯುವ ನೀರಿನ ಟಕಗಳಿವೆ. ನೀರು ತರೋಣವೆಂದು ಹೋದರೆ ಅಲ್ಲೂ ನೀರಿಲ್ಲ ಎಂಬ ಬೋರ್ಡ್​ ಕಾಣಿಸುತ್ತಿದೆ. ತಾಸುಗಟ್ಟಲೆ ಸರತಿ ಸಾಲಲ್ಲಿ ನಿಂತರೂ ನೀರು ಸಿಗದ ಪರಿಸ್ಥಿತಿ ಎದುರಾಗಿದೆ ಎಂದು ಜನರು ಸಮಸ್ಯೆ ಹೇಳಿಕೊಂಡಿದ್ದಾರೆ.

    ಕೊಳವೆಬಾವಿ ಬತ್ತಿ ಹೋದ ಪರಿಣಾಮ ಕಳೆದ ಐದು ತಿಂಗಳಿನಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ನಮ್ಮ ವಾರ್ಡ್​ಗೆ ಕಾವೇರಿ ನೀರು ಸರಬರಾಜಿಗೆ ಬೇಕಾದ ಪೈಪ್​ಲೈನ್​ ಅಳವಡಿಕೆ ಕಾಮಗಾರಿ ಸಂಪೂರ್ಣವಾಗಿದೆ. ಆದಷ್ಟು ಬೇಗ ನೀರು ಪೂರೈಕೆಯಾದರೆ ಟ್ಯಾಂಕರ್​ ನೀರಿನ ಮೊರೆ ಹೋಗುವುದು ತಪ್ಪುತ್ತದೆ.
    -ಎಚ್​.ರುದ್ರೇಶ್​, ಸಪ್ತಗಿರಿ ಬಡಾವಣೆ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts