More

    ಶೇ. 100 ಫಿಟ್ ಇಲ್ಲದಿದ್ದರೂ ಸಿಡ್ನಿ ಟೆಸ್ಟ್ ಆಡಲಿದ್ದಾರೆ ಡೇವಿಡ್ ವಾರ್ನರ್!

    ಮೆಲ್ಬೋರ್ನ್: ಎಡಗೈ ಆರಂಭಿಕ ಡೇವಿಡ್ ವಾರ್ನರ್ ಶೇ. 100 ಫಿಟ್ ಆಗದಿದ್ದರೂ ಸಿಡ್ನಿ ಟೆಸ್ಟ್‌ನಲ್ಲಿ ಭಾರತ ವಿರುದ್ಧ ಅವರನ್ನು ಕಣಕ್ಕಿಳಿಸುವ ಅಪಾಯಕಾರಿ ಹೆಜ್ಜೆಯನ್ನು ಇಡಲು ಸಿದ್ಧರಾಗಿದ್ದೇವೆ ಎಂದು ಆಸೀಸ್ ತಂಡದ ಸಹಾಯಕ ಕೋಚ್ ಆಂಡ್ರ್ಯೋ ಮೆಕ್‌ಡೊನಾಲ್ಡ್ ಹೇಳಿದ್ದಾರೆ.

    2ನೇ ಏಕದಿನ ಪಂದ್ಯದಲ್ಲಿ ತೊಡೆಸಂದು ಗಾಯಕ್ಕೊಳಗಾಗಿದ್ದ ಕಾರಣ ವಾರ್ನರ್ ಮೊದಲೆರಡು ಟೆಸ್ಟ್‌ಗಳಲ್ಲಿ ಆಡಿರಲಿಲ್ಲ. ಇದು ಆಸೀಸ್ ಬ್ಯಾಟಿಂಗ್ ವಿಭಾಗಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ‘ವಾರ್ನರ್ ಶೇ. 90-95 ಫಿಟ್ ಆಗಿದ್ದರೂ ಆಡಿಸುವ ನಿರ್ಧಾರ ತೆಗೆದುಕೊಳ್ಳುವೆವು. ಅವರ ನಿರ್ವಹಣೆಯೇ ಮುಖ್ಯವಾಗುತ್ತದೆ. ವಾರ್ನರ್ ಕೂಡ ಪುನರಾಗಮನ ಕಾಣಲು ಉತ್ಸುಕರಾಗಿದ್ದಾರೆ’ ಎಂದು ಮೆಕ್‌ಡೊನಾಲ್ಡ್ ಹೇಳಿದ್ದಾರೆ.

    ಇದನ್ನೂ ಓದಿ: ಆಸೀಸ್ ವಿರುದ್ಧ ಟೆಸ್ಟ್ ಸರಣಿಯಿಂದ ಹೊರಬಿದ್ದ ಉಮೇಶ್ ಯಾದವ್

    ವಾರ್ನರ್ ಜತೆಗೆ ಆಸೀಸ್ ಟೆಸ್ಟ್ ತಂಡಕ್ಕೆ ಮರಳಿರುವ ಮತ್ತೋರ್ವ ಆರಂಭಿಕ ವಿಲ್ ಪುಕೊವ್‌ಸ್ಕಿ ಕೂಡ ಸಿಡ್ನಿಯಲ್ಲಿ ಆಡುವ ಸಾಧ್ಯತೆ ಇದ್ದು, ಈ ಮೂಲಕ ಅವರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಸ್ಟೀವನ್ ಸ್ಮಿತ್ ರನ್‌ಬರ ಎದುರಿಸುತ್ತಿರುವುದು ಆಸೀಸ್‌ಗೆ ಸರಣಿಯಲ್ಲಿ ದೊಡ್ಡ ಹಿನ್ನಡೆ ತಂದಿದೆ. ಆಡಿದ ಮೊದಲ 2 ಟೆಸ್ಟ್‌ಗಳಲ್ಲಿ ಸ್ಮಿತ್ ಒಟ್ಟು ಕೇವಲ 10 ರನ್ ಗಳಿಸಿದ್ದು, ಸರಣಿಯಲ್ಲಿ ಪುಟಿದೇಳಬೇಕಾದರೆ ಆಸೀಸ್ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸುವುದು ಅನಿವಾರ‌್ಯವಾಗಿದೆ.

    PHOTO| 2020ಕ್ಕೆ ಬೆನ್ನು ತೋರಿಸಿದ ಕ್ರಿಕೆಟರ್ ವೇದಾ, ಗಮನಸೆಳೆದ ಟ್ಯಾಟೂ!

    PHOTO | ಎಂಸಿಜಿಯಲ್ಲಿ ರೋಹಿತ್ ಶರ್ಮ ಅಭ್ಯಾಸ ಶುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts