More

    ಪಾಕ್ ಎದುರು ಕ್ಲೀನ್‌ಸ್ವೀಪ್ ಸಾಧಿಸಿದ ಆಸ್ಟ್ರೇಲಿಯಾ: ವಾರ್ನರ್‌ಗೆ ಭಾವನಾತ್ಮಕ ಬೀಳ್ಕೊಡುಗೆ

    ಸಿಡ್ನಿ: ಟೆಸ್ಟ್ ಕ್ರಿಕೆಟ್‌ನ ಕೊನೇ ಇನಿಂಗ್ಸ್‌ನಲ್ಲಿ ಬ್ಯಾಟರ್ ಡೇವಿಡ್ ವಾರ್ನರ್ (57 ರನ್, 75 ಎಸೆತ, 7 ಬೌಂಡರಿ) ಸಿಡಿಸಿದ ಅರ್ಧಶತಕದ ನೆರವಿನಿಂದ ಆತಿಥೇಯ ಆಸ್ಟ್ರೇಲಿಯಾ ತಂಡ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಎದುರು 8 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಪ್ಯಾಟ್ ಕಮ್ಮಿನ್ಸ್ ಪಡೆ ಸರಣಿಯಲ್ಲಿ 3-0 ಕ್ಲೀನ್‌ಸ್ವೀಪ್ ಸಾಧಿಸಿದೆ. ಮೊದಲ ಇನಿಂಗ್ಸ್ ಮುನ್ನಡೆ ನಡುವೆಯೂ ಮುಗ್ಗರಿಸಿದ ಪಾಕ್, ಆಸೀಸ್ ನೆಲದಲ್ಲಿ ಸತತ 17ನೇ ಟೆಸ್ಟ್ ಸೋಲು ಎದುರಿಸಿದೆ.

    ಎಸ್‌ಸಿಜಿ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯಗೊಂಡ ಪಂದ್ಯದಲ್ಲಿ 7 ವಿಕೆಟ್‌ಗೆ 68 ರನ್‌ಗಳಿಂದ ದಿನದ ಆಟ ಆರಂಭಿಸಿದ ಪಾಕಿಸ್ತಾನ, 43.1 ಓವರ್‌ಗಳಲ್ಲಿ 115 ರನ್‌ಗಳಿಗೆ ದ್ವಿತೀಯ ಇನಿಂಗ್ಸ್ ಮುಗಿಸಿತು. 130 ರನ್ ಗುರಿ ಪಡೆದ ಆಸೀಸ್, ಆರಂಭಿಕ ಉಸ್ಮಾನ್ ಖವಾಜ (0) ವಿಕೆಟ್ ಬೇಗನೆ ಕಳೆದುಕೊಂಡರೂ, ವಾರ್ನರ್ ಹಾಗೂ ಮಾರ್ನಸ್ ಲಬುಶೇನ್ (62* ರನ್, 73 ಎಸೆತ, 9 ಬೌಂಡರಿ) ಜೋಡಿ 2ನೇ ವಿಕೆಟ್‌ಗೆ 119 ರನ್ ಸೇರಿಸಿದ ಬಲದೊಂದಿಗೆ ಜಯದತ್ತ ಸಾಗಿತು. 37ನೇ ಅರ್ಧಶತಕ ಗಳಿಸಿದ ವಾರ್ನರ್, ಸಾಜೀದ್ ಖಾನ್‌ಗೆ ವಿಕೆಟ್ ನೀಡಿದರು. ಅಂತಿಮವಾಗಿ 25.5 ಓವರ್‌ಗಳಲ್ಲಿ 2 ವಿಕೆಟ್‌ಗೆ 130 ರನ್‌ಗಳಿಸಿದ ಆಸೀಸ್, ಇನ್ನೂ ಒಂದು ದಿನ ಬಾಕಿಯಿರುವಂತೆಯೇ ಸುಲಭ ಗೆಲುವು ದಾಖಲಿಸಿತು .

    https://x.com/CricketAus/status/1743496199616049212?s=20

    ಪಾಕಿಸ್ತಾನ: 313 ಮತ್ತು 115 (ರಿಜ್ವಾನ್ 28, ಜಮಾಲ್ 18, ಹಸನ್ 5, ಲ್ಯಾನ್ 36ಕ್ಕೆ3, ಹ್ಯಾಸಲ್‌ವುಡ್ 16ಕ್ಕೆ4).
    ಆಸ್ಟ್ರೇಲಿಯಾ: 299 ಮತ್ತು 2 ವಿಕೆಟ್‌ಗೆ 130 (ವಾರ್ನರ್ 57, ಲಬುಶೇನ್ 62*, ಸ್ಮಿತ್ 4*, ಸಾಜೀದ್ 42ಕ್ಕೆ2). ಪಂದ್ಯಶ್ರೇಷ್ಠ: ಆಮಿರ್ ಜಮಾಲ್. ಸರಣಿಶ್ರೇಷ್ಠ: ಪ್ಯಾಟ್ ಕಮ್ಮಿನ್ಸ್.

    ವಾರ್ನರ್‌ಗೆ ಭಾವನಾತ್ಮಕ ಬೀಳ್ಕೊಡುಗೆ: 2011ರಲ್ಲಿ ಪದಾರ್ಪಣೆ ಮಾಡಿದ ವಾರ್ನರ್, 112 ಪಂದ್ಯಗಳ ಸುದೀರ್ಘ ಟೆಸ್ಟ್ ಕ್ರಿಕೆಟ್ ಬದುಕಿಗೆ, ಬಾಲ್ಯದಿಂದಲೂ ಆಡಿ ಬೆಳೆದ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾವನಾತ್ಮಕ ವಿದಾಯ ಹೇಳಿದರು. ಸ್ಫೋಟಕ ಬ್ಯಾಟರ್ ವಾರ್ನರ್ ವಿದಾಯಕ್ಕೆ ಪಂದ್ಯದ 4ನೇ ಸೇರಿದ್ದ 24,220 ಪ್ರೇಕ್ಷಕರು ಸಾಕ್ಷಿಯಾದರು. ಪಂದ್ಯ ಮುಗಿದ ಬಳಿಕ ಅಭಿಮಾನಿಗಳಿಗೂ ಮೈದಾನದೊಳಗೆ ಪ್ರವೇಶ ಕಲ್ಪಿಸುವ ಮೂಲಕ ನಿವೃತ್ತಿಯನ್ನು ಸ್ಮರಣೀಯಗೊಳಿಸಲಾಯಿತು. ವಾರ್ನರ್ ಪತ್ನಿ ಕ್ಯಾಂಡಿಸ್ ಮತ್ತು ಮೂವರು ಪುತ್ರಿಯರನ್ನು ಸೇರಿ ಕುಟುಂಬಸ್ಥರು ಹಾಜರಿದ್ದರು. ಆಸೀಸ್‌ನ 2ನೇ ಸರದಿಯಲ್ಲಿ ಬ್ಯಾಟಿಂಗ್‌ಗೆ ವಾರ್ನರ್ ಆಗಮಿಸಿದಾಗ ಪಾಕಿಸ್ತಾನ ಆಟಗಾರರಿಂದ ‘ಗಾರ್ಡ್ ಆ್ ಆನರ್’ ಗೌರವ ದೊರೆಯಿತು. ನಂತರ ಪಾಕ್ ಆಟಗಾರರ ಹಸ್ತಾಕ್ಷರವುಳ್ಳ ಬಾಬರ್ ಅಜಮ್ ಜೆರ್ಸಿಯನ್ನು ನಾಯಕ ಶಾನ್ ಮಸೂದ್ ಉಡುಗೋರೆಯಾಗಿ ನೀಡಿದರು.

    https://x.com/CricketAus/status/1743501775544651927?s=20

    ಕನಸು ನನಸಾಗಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡ 18 ತಿಂಗಳಿಂದ ಉತ್ತಮ ಆಟ ಪ್ರದರ್ಶಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಗೆಲುವು, ಆಶಸ್ ಸರಣಿ ನಂತರ ಏಕದಿನ ವಿಶ್ವಕಪ್ ಪ್ರಶಸ್ತಿ ಜಯಿಸಿದೆ. ಪಾಲಕರಿಗೆ ಎಲ್ಲ ಕ್ರೆಡಿಟ್ ಸಲ್ಲಬೇಕು. ನಾನು ಸುಂದರವಾದ ಕುಟುಂಬವನ್ನು ಹೊಂದಿದ್ದೇನೆ. ಅವರೊಂದಿಗಿನ ಪ್ರತಿ ಕ್ಷಣವನ್ನು ಪ್ರೀತಿಸುತ್ತೇನೆ.
    > ಡೇವಿಡ್ ವಾರ್ನರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts