More

    ಪ್ರತಿವಾರ್ಡ್‌ಗೆ ಮಾರಾಟಗಾರರ ನಿಯೋಜನೆ, ಮನೆಮನೆಗೆ ಸರಕು ಪೂರೈಕೆಗೆ ಜಿಲ್ಲಾಡಳಿತ ಕ್ರಮ

    ಕೊಪ್ಪಳ: ಕರೊನಾ ತಡೆ ಹಿನ್ನೆಲೆಯಲ್ಲಿ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದ್ದು, ಜನರಿಗೆ ಅಗತ್ಯ ವಸ್ತುಗಳನ್ನು ಮನೆಮನೆಗೆ ಪೂರೈಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಡಿಸಿ ಪಿ.ಸುನಿಲ್‌ಕುಮಾರ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ನಗರ ಪ್ರದೇಶದಲ್ಲಿ ವಾರ್ಡ್‌ಗೆ ಒಬ್ಬೊಬ್ಬ ತರಕಾರಿ, ಹಾಲು ಹಾಗೂ ಕಿರಾಣಿ ಮಾರಾಟಗಾರರನ್ನು ನಿಯೋಜಿಸಲಾಗಿದ್ದು, ಅವರಿಗೆಲ್ಲ ಗುರುತಿನ ಚೀಟಿ ನೀಡಲಾಗಿದೆ. ಜತೆಗೆ ನಗರಸಭೆ ಅಧಿಕಾರಿಗಳನ್ನು ನಿಯೋಜಿಸಿ ಮೇಲುಸ್ತುವಾರಿ ನೋಡಿಕೊಳ್ಳಲಾಗುತ್ತಿದೆ.

    ರಸ್ತೆ ಕಡಿದ ಗ್ರಾಮಸ್ಥರು
    ಗ್ರಾಮೀಣ ಭಾಗಗಳಲ್ಲೂ ಜನರು ಜಾಗೃತಗೊಂಡಿದ್ದು, ತಮ್ಮ ಗ್ರಾಮದಲ್ಲಿ ಸ್ವಯಂ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದಾರೆ. ಕೊಪ್ಪಳ ತಾಲೂಕಿನ ಕಾಸನಕಂಡಿ ಗ್ರಾಮಸ್ಥರು ಗ್ರಾಮ ಸಂಪರ್ಕಿಸುವ ರಸ್ತೆಗಳನ್ನು ಕಡಿದು ಸಂಚಾರ ಬಂದ್ ಮಾಡಿದ್ದಾರೆ. ನಿಲೋಗಿಪುರ ಗ್ರಾಮಸ್ಥರು ಗ್ರಾಮದ ಸುತ್ತಲೂ ಮುಳ್ಳು ಬೇಲಿ ಹಾಕುವ ಮೂಲಕ ಅನಗತ್ಯವಾಗಿ ಓಡಾಡುವವರನ್ನು ಹಾಗೂ ಗ್ರಾಮಕ್ಕೆ ಹೊರಗಡೆಯಿಂದ ಬರುವವರನ್ನು ನಿಯಂತ್ರಿಸಲಾಗುತ್ತಿದೆ.

    ಸಂಸದರಿಂದ ಸಿಟಿ ರೌಂಡ್ಸ್
    ಕೊಪ್ಪಳ ಜಿಲ್ಲೆಯಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮಗಳನ್ನು ಗುರುವಾರ ಸಂಸದ ಸಂಗಣ್ಣ ಕರಡಿ ವೀಕ್ಷಿಸಿದರು. ನಗರದ ವಿಜ್ಞಾನ ಭವನದಲ್ಲಿ ಮಾಡಿರುವ ತಾತ್ಕಾಲಿಕ ಕರೊನಾ ಬೆಡ್‌ಗಳನ್ನು ವೀಕ್ಷಿಸಿದರು. ಜಿಲ್ಲೆಯಲ್ಲಿ ಮನೆಯಲ್ಲಿ ಕ್ವಾರಂಟೈನ್ ಮಾಡಿದವರು, ಅಗತ್ಯ ಔಷಧ, ಸಾಮಗ್ರಿಗಳ ಮಾಹಿತಿ ಪಡೆದರು. ಡಿಎಚ್‌ಒ ಡಾ.ಟಿ.ಲಿಂಗರಾಜು ಈವರೆಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

    ತುಂಗಾಪಡೆ ಗರ್ಜನೆ
    ಮನೆಬಿಟ್ಟು ಹೊರ ಓಡಾಡುವವರನ್ನು ನಿಯಂತ್ರಿಸಲು ತುಂಗಾಪಡೆ ಸಜ್ಜಾಗಿದ್ದು, ಅನಗತ್ಯ ಓಡಾಡುವವರಿಗೆ ಬಿಸಿ ಮುಟ್ಟಿಸುತ್ತಿದೆ. ಎಸ್ಪಿ ಜಿ.ಸಂಗೀತಾ ಗುರುವಾರ ತಮ್ಮ ಅಧಿಕಾರಿಗಳೊಂದಿಗೆ ರಸ್ತೆಯಲ್ಲಿ ಸಂಚರಿಸಿ, ಅನಗತ್ಯವಾಗಿ ಅಡ್ಡಾಡುತ್ತಿದ್ದವರನ್ನು ಬೈದು ಮನೆಗೆ ಕಳಿಸಿದರು. ಮಾತು ಕೇಳದವರಿಗೆ ಲಾಠಿ ಬೀಸಲಾಯಿತು. ಇನ್ನೂ ಕೆಲವರ ಬೈಕ್‌ಗಳನ್ನು ಪೋಲಿಸ್ ಠಾಣೆಗೆ ಕೊಂಡೊಯ್ಯಲಾಯಿತು. ಕೆಲವರಿಂದ ಬಸ್ತಿ ಹೊಡಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts