ಚಾಲಕನ ನಿಯಂತ್ರಣ ಕಳೆದುಕೊಂಡು ಕಾಲುವೆ ಬಿದ್ದ ಕಾರು: ಇಬ್ಬರ ಮೃತದೇಹ ಪತ್ತೆ, ಮೂವರು ನಾಪತ್ತೆ!

Car
Published on

ವಾರಂಗಲ್​: ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಕಾಲುವೆ ಬಿದ್ದು, ಕಾರಿನಲ್ಲಿದ್ದ ಐವರಲ್ಲಿ ಮೂವರು ಕೊಚ್ಚಿ ಹೋಗಿದ್ದರೆ, ಇಬ್ಬರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ತೆಲಂಗಾಣದ ವಾರಂಗಲ್​ನಲ್ಲಿ ನಡೆದಿದೆ.

ವಾರಂಗಲ್​ ಗ್ರಾಮಾಂತರ ಜಿಲ್ಲೆಯ ಪರ್ವತಗಿರಿ ವಲಯದ ಕೊಂಕಪಕ್ಕ ಉಪನಗರದ ಎಸ್ಸರಪ್ಪೆ ಕಾಲುವೆಗೆ ಕಾರು ಬಿದ್ದಿದೆ. ಚಾಲಕನ ಅತಿಯಾದ ವೇಗದಿಂದ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಐವರಲ್ಲಿ ಇಬ್ಬರು ಮೃತಪಟ್ಟಿದ್ದರೆ, ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಮೃತರಲ್ಲಿ ಒಬ್ಬರು ಸರ್ಕಾರಿ ಶಾಲಾ ಶಿಕ್ಷಕ ಎಂದು ತಿಳಿದುಬಂದಿದೆ. ಉಳಿದವರ ಮಾಹಿತಿ ತಿಳಿದುಬಂದಿಲ್ಲ. ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ರಕ್ಷಣಾ ಕ್ರಮಗಳನ್ನು ತೆಗೆದುಕೊಂಡಿದ್ದು, ಕಾರನ್ನು ಕಾಲುವೆಯಿಂದ ಹೊರಕ್ಕೆ ತೆಗೆದಿದ್ದಾರೆ. ಮೂವರು ಕೊಚ್ಚಿ ಹೋಗಿದ್ದು, ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೆ, ಕಾರಿನಲ್ಲಿದ್ದವರ ಮಾಹಿತಿ ಪತ್ತೆ ಕಾರ್ಯ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net