More

    ನಕಲಿ ಕೇಸ್​ ಹಾಕಲು ಡ್ರಗ್ಸ್​ ಪ್ಲಾಂಟ್​ ಮಾಡುತ್ತೆ ‘ವಾಂಖೇಡೆ ಗ್ಯಾಂಗ್​’: ಮಹಾ ಸಚಿವ

    ಮುಂಬೈ: ಮಹಾರಾಷ್ಟ್ರ ಸಚಿವರಾದ ನವಾಬ್​ ಮಲಿಕ್​ ಮತ್ತೆ ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯೂರೋ(ಎನ್​ಸಿಬಿ) ಮುಂಬೈ ವಲಯ ನಿರ್ದೇಶಕ ಸಮೀರ್​ ವಾಂಖೆಡೆ ವಿರುದ್ಧ ಹೊಸ ಆರೋಪಗಳನ್ನು ಮಾಡಿದ್ದಾರೆ. ಜನರನ್ನು ನಕಲಿ ಕೇಸುಗಳಲ್ಲಿ ಸಿಕ್ಕಿಹಾಕಿಸುವುದಕ್ಕಾಗಿ ಅವರ ಮನೆಗಳಲ್ಲಿ ಡ್ರಗ್ಸ್​ ಪ್ಲಾಂಟ್​ ಮಾಡಲು ಅವರದ್ದೇ ಆದ ಖಾಸಗಿ ಪಡೆಯನ್ನು ವಾಂಖೆಡೆ ಹೊಂದಿದ್ದಾರೆ ಎಂದಿದ್ದಾರೆ.

    ಫ್ಲೆಚ್ಚರ್ ಪಟೇಲ್, ಕೆ.ಪಿ.ಗೋಸಾವಿ, ಆದಿಲ್ ಉಸ್ಮಾನಿ ಈ ‘ವಾಂಖೆಡೆ ಗ್ಯಾಂಗ್​’ನ ಭಾಗವಾಗಿದ್ದಾರೆ ಎಂದಿರುವ ಮಲಿಕ್​, ಶಾರುಖ್ ಪುತ್ರ ಆರ್ಯನ್​ ಖಾನ್​ ಆರೋಪಿಯಾಗಿರುವ ಕ್ರೂಸ್​ ಶಿಪ್​ ದಾಳಿಯಲ್ಲಿ ಯಾವುದೇ ಡ್ರಗ್ಸ್​ ಸಿಕ್ಕಿರಲಿಲ್ಲ. ನಂತರದಲ್ಲಿ ವಾಂಖೆಡೆ ಕಚೇರಿಯಲ್ಲಿ ಡ್ರಗ್ಸ್​ ಚಿತ್ರಗಳನ್ನು ತೆಗೆದು ಸೇರಿಸಲಾಗಿದೆ ಎಂದು ಆಪಾದಿಸಿದ್ದಾರೆ. ಕ್ರೂಸ್​ ಶಿಪ್​​ಗೆ ರೆಸ್ಟೊರೆಂಟ್​ ಒಂದರ ಕೇಟರಿಂಗ್​ ಸರ್ವೀಸ್​ ಮೂಲಕ ಡ್ರಗ್ಸ್​ ಕಳುಹಿಸಲಾಗಿತ್ತು ಎಂದು ಆರೋಪಿಸಿರುವ ಮಲಿಕ್​​, ವಾಂಖೆಡೆ ವಿರುದ್ಧದ ತಮ್ಮ ಹೇಳಿಕೆಗಳನ್ನು ಸಮರ್ಥಿಸಲು ಶೀಘ್ರವೇ ಪುರಾವೆಗಳನ್ನು ಒದಗಿಸಿ, ಅವರನ್ನು ಎಕ್ಸ್​ಪೋಸ್​ ಮಾಡುವುದಾಗಿ ಹೇಳಿದ್ದಾರೆ.

    ಇದನ್ನೂ ಓದಿ: ಎನ್​​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಜಾತಿ ತನಿಖೆಗೆ ಸಿದ್ಧ ಎಂದ ಮಹಾ ಸರ್ಕಾರ

    ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿ, ಡ್ರಗ್​ ಪೆಡ್ಲರ್​ಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವುದರಿಂದ ವಾಂಖೆಡೆಯನ್ನು ಟಾರ್ಗೆಟ್​ ಮಾಡಲಾಗುತ್ತಿದೆ ಎಂದಿದೆ. ನ್ಯಾಷನಲಿಸ್ಟ್​ ಕಾಂಗ್ರೆಸ್ ಪಾರ್ಟಿ(ಎನ್​ಸಿಪಿ)ಯ ನಾಯಕರೂ ಆದ ಮಲಿಕ್​ರ ಅಳಿಯ ಸಮೀರ್​ ಖಾನ್​ರ ಮೇಲೂ ಮುಂಬೈ ಎನ್​ಸಿಬಿ ಜನವರಿಯಲ್ಲಿ ಡ್ರಗ್​ ಪೆಡ್ಲಿಂಗ್ ಕೇಸು ದಾಖಲಿಸಿತ್ತು ಎನ್ನಲಾಗಿದೆ. (ಏಜೆನ್ಸೀಸ್)

    ಪವರ್​ ಸ್ಟಾರ್​ ಪುನೀತ್​ ನಿಧನಕ್ಕೆ ಪುಟಾಣಿ ಅಭಿಮಾನಿ ಕಣ್ಣೀರು

    ವರದಕ್ಷಿಣೆ ಕೇಸು ಹಾಕಿದ ಮಹಿಳೆಯನ್ನು ಹಾಡುಹಗಲೇ ಗುಂಡಿಕ್ಕಿ ಕೊಂದರು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts