More

    ಮನೆಯಿಂದಲೆ ಮತದಾನ: ಶೇ.೪೧ ರಷ್ಟು ಸಾಧನೆ

    ಮಡಿಕೇರಿ: ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಪೈಕಿ ಗುರುತಿಸಲಾದ ೫೬೮೯ ಹಿರಿಯ ನಾಗರೀಕರ ಪೈಕಿ ೧೪೭೪ ಮತದಾರರು ೧೨ಡಿ ನಮೂನೆಯಲ್ಲಿ ಮನೆ ಮತದಾನಕ್ಕೆ ಆಯ್ಕೆ ಮಾಡಿಕೊಂಡಿದ್ದು, ಈ ಪೈಕಿ ೬೦೧ ಮತ ಚಲಾವಣೆ ಮೂಲಕ ಶೇ.೪೦.೭೭ ರಷ್ಟು ಮತದಾನವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    ವಿಕಲಚೇತನ ಮತದಾರರ ಪೈಕಿ ಗುರುತಿಸಲಾದ ೪೩೮೩ ಮತದಾರರಲ್ಲಿ ೬೪೩ ಮತದಾರರು ೧೨ಡಿ ನಮೂನೆಯಲ್ಲಿ ಹೋಮ್ ವೋಟಿಂಗ್‌ಗೆ ಆಯ್ಕೆ ಮಾಡಿಕೊಂಡಿದ್ದು, ಈ ಪೈಕಿ ೨೬೪ ಮತ ಚಲಾವಣೆ ಆಗಿದ್ದು, ಶೇ. ೪೧.೦೬ ರಷ್ಟು ಮತದಾನವಾಗಿರುತ್ತದೆ ಅವರು ತಿಳಿಸಿದ್ದಾರೆ.


    ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ಸಂಬಂಧ ವಯಸ್ಸು ೮೫ ಮೀರಿರುವ ಹಿರಿಯ ನಾಗರೀಕರು(ಎವಿಎಸ್‌ಸಿ), ವಿಕಲಚೇತನರು(ಎವಿಪಿಡಿ) ಮತ್ತು ಕೋವಿಡ್ ಶಂಕಿತ, ಬಾಧಿತ ವ್ಯಕ್ತಿಗಳನ್ನು(ಎವಿಸಿಒ) ಮತ್ತು ಅಗತ್ಯ ಸೇವೆಗಳ ಮೇರೆ ನಿಯೋಜನೆಗೊಂಡಿರುವ(ಎವಿಇಎಸ್) ವ್ಯಕ್ತಿಗಳನ್ನು ಗೈರು ಹಾಜರಿ ಮತದಾರರು ಎಂದು ಪರಿಗಣಿಸಲಾಗುತ್ತದೆ.


    ಈ ಗೈರು ಹಾಜರಿ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದೆಂಬುದನ್ನು ಗಮನದಲ್ಲಿರಿಸಿ ಇವರುಗಳಿಗೆ ಮನೆಯಿಂದಲೆ ಮತದಾನ (ಹೋಮ್ ವೋಟಿಂಗ್) ಮಾಡುವ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಅದರಂತೆ ಮನೆಯಿಂದಲೆ ಮತದಾನ(ಹೋಮ್ ವೋಟಿಂಗ್) ಕಾರ್ಯಕ್ಕೆ ಇಬ್ಬರು ಮತಗಟ್ಟೆ ಅಧಿಕಾರಿಗಳು, ಒಬ್ಬರು ಮೈಕ್ರೋ ಅಬ್ಸರ್ವರ್, ಬಿಎಲ್‌ಓ, ವಿಡಿಯೋ ಗ್ರಾಫರ್ ಹಾಗೂ ಸೆಕ್ಟರ್ ಅಧಿಕಾರಿಗಳನ್ನೊಳಗೊಂಡ ತಂಡಗಳು ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೨೨ ಮಾರ್ಗಗಳಲ್ಲಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ೨೧ ಮಾರ್ಗಗಳಲ್ಲಿ ಏ.೧೫, ಏ.೧೬ ಮತ್ತು ಏ.೧೭ ರಂದು ಮನೆ ಮನೆಗೆ ತೆರಳಿ ಗೈರು ಹಾಜರಿ ಮತದಾರರಿಂದ ಮತದಾನ ಮಾಡಿಸುವ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts