More

    ಮತ ಎಣಿಕೆ ಕೇಂದ್ರದಲ್ಲಿ ಗೊಂದಲಕ್ಕೆ ಅವಕಾಶ ಬೇಡ

    ಕನಕಗಿರಿ: ಯಾವುದೇ ಕಾರಣಕ್ಕೂ ಮತ ಎಣಿಕೆ ಕೇಂದ್ರದಲ್ಲಿ ಗೊಂದಲಕ್ಕೆ ಅವಕಾಶ ನೀಡದೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಮತ ಎಣಿಕೆ ಮಾಡಬೇಕು ಎಂದು ತಾಲೂಕು ನೋಡಲ್ ಅಧಿಕಾರಿ ಕೃಷ್ಣ ಉಕ್ಕುಂದ ಹೇಳಿದರು.

    ಪಟ್ಟಣದ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ಮೇಲ್ವಿಚಾರಕರು ಹಾಗೂ ಸಹಾಯಕರಿಗೆ ಗುರುವಾರ ಹಮ್ಮಿಕೊಳ್ಳಲಾಗಿದ್ದ ತರಬೇತಿಯಲ್ಲಿ ಮಾತನಾಡಿದರು. ಚುನಾವಣಾ ಇಲಾಖೆಯ ಆದೇಶದಂತೆ ಮತ ಎಣಿಕೆ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಚುನಾವಣಾಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಒಂದು ವೇಳೆ ಗೊಂದಲಕ್ಕೊಳಗಾಗಿ ತಪ್ಪಾಗಿ ನಿರ್ಧಾರ ಕೈಗೊಂಡರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದರು.

    ತಹಸೀಲ್ದಾರ್ ರವಿ ಅಂಗಡಿ ಮಾತನಾಡಿ, ಮತ ಪತ್ರಗಳು ಎಣಿಕೆ ಮಾಡುವಾಗ ಪತ್ರಗಳು ಕೆಳಗೆ ಬಿದ್ದರೆ ಎಲ್ಲ ಏಜೆಂಟರ ಗಮನಕ್ಕೆ ತಂದು ಮೇಲೆತ್ತಿಡಬೇಕು ಹಾಗೂ ಎಣಿಕೆ ಮಾಡುವಾಗ ಯಾವುದೇ ಅನುಮಾನಗಳು ವ್ಯಕ್ತವಾದರೆ ಅಲ್ಲೇ ಇರುವ ಮೇಲಧಿಕಾರಿಗಳ ಸಲಹೆ ಪಡೆದು ಮತ ಎಣಿಕೆ ಮಾಡಿ ವಿಜೇತರ ಹೆಸರನ್ನು ಘೋಷಿಸಬೇಕು ಎಂದು ತಿಳಿಸಿದರು. ತಾಪಂ ಇಒ ಡಾ.ಡಿ.ಮೋಹನ್, ಎಂಸಿಸಿ ಸಮಿತಿ ಅಧ್ಯಕ್ಷ ಸೋಮಶೇಖರಗೌಡ, ಪಿಎಸ್‌ಐ ಡಿ.ಸುರೇಶ, ತರಬೇತುದಾರರಾದ ಸರ್ಫ್‌ರಾಜ್ ಅಹ್ಮದ್, ಬಸವರಾಜ ಬಡಿಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts