More

    ಡಿಜಿಟಲ್ ವೋಟರ್ ಕಾರ್ಡ್​ಗೆ ಚುನಾವಣಾ ಆಯೋಗ ಒಲವು

    ನವದೆಹಲಿ: ಮತದಾರರ ಡಿಜಿಟಲ್ ಗುರುತು ಚೀಟಿ (ಎಪಿಕ್ ಕಾರ್ಡ್) ಸೇರಿದಂತೆ ಮತದಾನ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಿಸುವ ಬಗ್ಗೆ ಚುನಾವಣೆ ಆಯೋಗದ ತಜ್ಞರ ವಿವಿಧ ಸಮಿತಿಗಳು ಶಿಫಾರಸು ಮಾಡಿವೆೆೆ. ನಾಮಪತ್ರಗಳ ಸಲ್ಲಿಕೆಯನ್ನು ಕೂಡ ಡಿಜಿಟಲೀಕರಿಸಬೇಕೆನ್ನುವುದು (ಇ-ಫೈಲಿಂಗ್) ಸಮಿತಿಯ ಉದ್ದೇಶವಾಗಿದೆ.

    ವಲಸೆ ಹೋದ ಮತದಾರರು ಪ್ರಜಾಪ್ರಭುತ್ವದ ಮಹತ್ವದ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ಖಾತರಿಪಡಿಸಲು ಹೊಸ ರೀತಿಯ ಮತದಾನ ವಿಧಾನಗಳನ್ನು ಕಂಡುಕೊಳ್ಳುವುದು ಆಯೋಗದ ಇನ್ನೊಂದು ಮುಖ್ಯ ಆಶಯವಾಗಿದೆ. ಮತದಾನಕ್ಕೆ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಮುದ್ರಣ ಮತ್ತು ಸಾಮಾಜಿಕ ಮಾಧ್ಯಮವನ್ನು ‘ಮೌನ ಅವಧಿ’ಗೆ (ಸೈಲಂಟ್ ಟೈಮ್ ಒಳಪಡಿಸುವ ಯೋಚನೆಯನ್ನೂ ಮಂಡಿಸಲಾಗಿದೆ. ಸದ್ಯ ಇದು ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಮಾತ್ರ ಅನ್ವಯವಾಗುತ್ತಿದೆ.

    ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ಸಲಹೆ ನೀಡುವಂತೆ ಆಯೋಗ 2019ರ ಲೋಕಸಭಾ ಚುನಾವಣೆಗಳ ನಂತರ ಒಂಬತ್ತು ಸಮಿತಿಗಳನ್ನು ರಚಿಸಿತ್ತು. ಆಯೋಗದ ಹಿರಿಯ ಅಧಿಕಾರಿಗಳು ಮತ್ತು ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು ಸಮಿತಿ ಗಳಲ್ಲಿದ್ದರು. ಈ ಸಮಿತಿ ನೀಡಿದ ವರದಿಯ ಆಧಾರದಲ್ಲಿ ಆಯೋಗ 25 ಪ್ರಮುಖ ಶಿಫಾರಸುಗಳನ್ನು ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದ್ದು ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ. ಮಾರ್ಚ್ 31ರವರೆಗೆ ಸಲಹೆಗೆ ಅವಕಾಶವಿದೆ. ಡಿಜಿಟಲ್ ವಾತಾವರಣದಲ್ಲಿ ಪ್ರತಿಯೊಬ್ಬ ಮತದಾರನಿಗೂ ಡಿಜಿಟಲ್ ಎಪಿಕ್ ಕಾರ್ಡ್ ನೀಡುವುದು ಅಗತ್ಯ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

    ಶಿಫಾರಸುಗಳು

    • ಭಾವಿ ಮತದಾರರನ್ನು 17ನೇ ವಯಸ್ಸಿನಲ್ಲೇ ಶಾಲಾ-ಕಾಲೇಜುಗಳಲ್ಲಿ ಆನ್​ಲೈನ್​ನಲ್ಲಿ ನೋಂದಣಿ.
    • ಮತದಾರರಾಗಿ ನೋಂದಾಯಿಸುವ ಅವಧಿಯನ್ನು ಸದ್ಯ ವರ್ಷದಲ್ಲಿ ನಾಲ್ಕು ಬಾರಿ ನೀಡಲಾಗುತ್ತಿದೆ. ಎರಡು ಬಾರಿಗೆ (ಜನವರಿ 1 ಮತ್ತು ಜುಲೈ 1) ಇಳಿಕೆ.
    • ಮತದಾರರ ನೋಂದಣಿ, ವಿಳಾಸ ಬದಲಾವಣೆ, ಹೆಸರು ತೆಗೆದು ಹಾಕುವುದು ಮೊದಲಾದವಕ್ಕೆ ಈಗ ಬೇರೆ ಬೇರೆ ಅರ್ಜಿಗಳ ಬಳಕೆಯಾಗುತ್ತಿದೆ. ಅದರ ಬದಲಿಗೆ ಒಂದೇ ಸರಳೀಕೃತ ಅರ್ಜಿ ಇರಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts