More

    ಅ.1ರಿಂದ ನಮ್ಮ ಮತಗಳು ಮಾರಾಟಕ್ಕೆ ಇಲ್ಲ ಆಂದೋಲನ

    ಚಿತ್ರದುರ್ಗ: ರಾಜ್ಯಾದ್ಯಂತ ನಮ್ಮ ಮತಗಳು ಮಾರಾಟಕ್ಕೆ ಇಲ್ಲ ಎಂಬ ಆಂದೋಲನ ನಡೆಸುವುದಾಗಿ ರಾಜ್ಯಜೆಡಿಯು ಅಧ್ಯಕ್ಷ ಮಹಿಮಾ ಪಟೇಲ್ ಹೇಳಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಜನ್ಮದಿನ ಅಕ್ಟೋ ಬರ್ 1ರಂದು ಆಂದೋಲನಕ್ಕೆ ಚಾಲನೆ ನೀಡಲಾಗುವುದು. ಮೊದಲ ಹಂತದಲ್ಲಿ ಚಿತ್ರದುರ್ಗ,ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳ ಬಳಿಕ ರಾಜ್ಯದ ಇತರೆ ಜಿಲ್ಲೆಗಳಲ್ಲಿ ನಡೆಯಲಿದೆ ಎಂದರು.

    ದೇಶವಿಂದು ಪರ್ಯಾಯ ರಾಜಕಾರಣದೆಡೆ ಮುಖಮಾಡಿದೆ,1975-77ರಲ್ಲಿ ಇಂದಿರಾಗಾಂಧಿ ಅವರು ಪ್ರತಿಪಕ್ಷ ನಾಯಕರೆಲ್ಲರ ಒಗ್ಗೂಡಿಕೆಗೆ ಕಾರಣರಾದರು. ಅವರಿಂದಾಗಿ ಜನತಾಪಕ್ಷ ಉದಯವಾಯಿತು ಹಾಗೂ ಕಾಂಗ್ರೆಸೇತರ ಸರ್ಕಾರ ದೇಶದಲ್ಲಿ ರಚನೆ ಆಗಿತ್ತು ಈಗ ಬಿಜೆಪಿ ಸರ್ಕಾರ,ದೇಶದಲ್ಲಿ ಪರ್ಯಾಯ ಶಕ್ತಿ ರಚನೆಗೆ ಕಾರಣವಾಗಲಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ನೇತೃತ್ವದಲ್ಲಿ ಸಮಾನ ಮನಸ್ಕ ಪಕ್ಷಗಳೊಂದಿಗೆ ಮಾತುಕತೆ ನಡೆದಿದೆ.

    ಪ್ರತಿಪಕ್ಷ ನಾಯಕರ ವಿರುದ್ಧ ಇಡಿ,ಸಿಬಿಐ ಮತ್ತಿತರ ಕೇಂದ್ರ ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪಟೇಲ್,ಜನಾದೇಶದವಿರುವ ರಾಜ್ಯಸರ್ಕಾರಗಳನ್ನು ಉರುಳಿಸಿ,ತಮ್ಮ ಸರ್ಕಾರಗಳನ್ನು ಅಸ್ತಿತ್ವಕ್ಕೆ ತರಲು ಮುಂದಾಗುತ್ತಿರುವ ಬಿಜೆಪಿ ಹುನ್ನಾರು ನಡೆಸಿದೆ. ಕರ್ನಾಟಕ,ಮಹಾರಾಷ್ಟ್ರವಾಯಿತು. ಬಿಹಾರದಲ್ಲಿ ವಿಫಲವಾಗಿದ್ದು,ಈಗ ಹೊಸದಿಲ್ಲಿ ಇಂಥದೊಂದು ಪ್ರಯತ್ನಕ್ಕೆ ಮುಂದಾಗಿದೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.

    ನಮ್ಮ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಯು ಅನ್ಯಪಕ್ಷ,ಸಂಘಟನೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಆಸಕ್ತಿ ವಹಿಸಿದೆ. ಇದಕ್ಕಾಗಿ ಆಮ್‌ಆದ್ಮಿ ಮತ್ತಿತರ ಪಕ್ಷಗಳು,ಕನ್ನಡ ಪರ ಹಾಗೂ ರೈತ ಸಂಘಗಳ ಮುಖಂಡರ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದರು.

    ಪಕ್ಷದ ಮುಖಂಡರಾದ ಕೆಜಿಎಲ್ ರವಿಪ್ರಕಾಶ್,ಕಾರ‌್ಯದರ್ಶಿ ಕಾರ್ತಿಕ್,ಶಿವರಾಂ,ಶಿವಮೂರ್ತಿ, ರಮೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts