More

    ರಾಷ್ಟ್ರೀಯತೆ, ವಿಚಾರಗಳಿಗೆ ಮತ ನೀಡಿ: ಚಕ್ರವರ್ತಿ ಸೂಲಿಬೆಲೆ

    ಶಿವಮೊಗ್ಗ: ಜಾತಿ, ಧರ್ಮಗಳನ್ನು ಬದಿಗಿಟ್ಟು ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ವಿಚಾರವಾದಗಳಿಗೆ ಜನರು ಮತ ನೀಡಬೇಕಿದೆ. ಆಗ ಮಾತ್ರ ರಾಜ್ಯ ಮತ್ತು ದೇಶದಲ್ಲಿ ಸದೃಢ ಸರ್ಕಾರಗಳನ್ನು ತರಲು ಸಾಧ್ಯ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

    ಶುಭಮಂಗಳ ಸಮುದಾಯ ಭವನದಲ್ಲಿ ಸೋಮವಾರ ಜನಹಿತ ಟ್ರಸ್ಟ್ ಮತ್ತು ಮತದಾರ ಜಾಗೃತ ವೇದಿಕೆ ಸಹಯೋಗದಲ್ಲಿ ಮಾತೃಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಬಿಟ್ಟಿ ಭಾಗ್ಯಗಳಿಂದ ಜನರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ, ದೇಶಭಕ್ತಿಯಿಂದ ಮಾತ್ರ ಸಾಧ್ಯವಿದೆ ಎಂಬುದನ್ನು ಮನವರಿಕೆ ಮಾಡಬೇಕಿದೆ ಎಂದರು.
    ಡಬಲ್ ಇಂಜಿನ್ ಸರ್ಕಾರವನ್ನು ಜನರು ಬೆಂಬಲಿಸಬೇಕು. ಅರ್ಧಂಬರ್ಧ, ಕಿಚಿಡಿ ಸರ್ಕಾರವನ್ನು ಕೊಟ್ಟರೆ ಅಭಿವೃದ್ಧಿ ಸಾಧ್ಯವಿಲ್ಲ. ಆಗ ಸರ್ಕಾರ ರಚನೆಗೆ ಪಕ್ಷದ ವಿಚಾರ, ಸಿದ್ಧಾಂತರ ಅರಿವು ಇಲ್ಲದವರನ್ನೂ ಕರೆತರಬೇಕಾಗುತ್ತದೆ. ಆ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಮತದಾರರು ಬೆಂಬಲಿಸಬೇಕು. ಒಬ್ಬರು ಕನಿಷ್ಠ ಐವರನ್ನು ಬಿಜೆಪಿ ಅಭ್ಯರ್ಥಿಗಳ ಪರ ಮತ ಹಾಕುವಂತೆ ಮನವರಿಕೆ ಮಾಡಬೇಕು ಎಂದರು.
    ಜನ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಹೆಚ್ಚಳದ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಈ ಬಗ್ಗೆ ಅರಿವಿಲ್ಲ. ಬಿಜೆಪಿ ಸರ್ಕಾರ ಇಲ್ಲದ ರಾಜ್ಯಗಳಲ್ಲಿನ ಪೆಟ್ರೋಲ್, ಡೀಸೆಲ್ ದರವನ್ನು ಒಮ್ಮೆ ಕಣ್ಣು ಬಿಟ್ಟು ನೀಡಬೇಕಿದೆ. ಅದು ಕರ್ನಾಟಕಕ್ಕಿಂತ ದುಬಾರಿಯಾಗಿದೆ ಎಂದರು.
    ಕರ್ನಾಟಕಕ್ಕೆ ಈ ಬಾರಿ ಬಹುಮತದ ಸರ್ಕಾರ ಕೊಡಬೇಕು. ಈ ಬಾರಿ ನಮಗೆ ಬೇಕಾಗಿರುವ, ಪ್ರಧಾನಿ ನರೇಂದ್ರ ಮೋದಿಗೆ ಪೂರಕವಾಗಿರುವ ನಾಯಕರನ್ನು ಆಯ್ಕೆ ಮಾಡಬೇಕು. ಸಮಸ್ಯೆಗಳಿಗೆ ಸ್ಪಂದಿಸುವವರನ್ನು ಬೆಂಬಲಿಸಬೇಕು ಎಂದ ಅವರು, ಶಿವಮೊಗ್ಗದಲ್ಲಿ ಸ್ವಲ್ಪ ಎಡವಟ್ಟಾದರೂ ಮುಂದೆ ಪರಿಸ್ಥಿತಿ ನಿಭಾಯಿಸುವುದು ಕಷ್ಟಕರವಾಗಲಿದೆ. ಹಾಗಾಗಿ ಶಿವಮೊಗ್ಗವನ್ನು ಉಳಿಸಿಕೊಳ್ಳದಿದ್ದರೆ ಮುಂದೆ ಕಷ್ಟ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
    ಟ್ರಸ್ಟ್‌ನ ಕಾರ್ಯವಾಹಕಿ ವಿಜಯಾ ಮಾಧವಪ್ರಸಾದ್ ಮಾತನಾಡಿ, ದೇಶ, ಧರ್ಮ ಮತ್ತು ಸಂಸ್ಕೃತಿ ಉಳಿವಿಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಕೇವಲ ಹಕ್ಕಿಗಾಗಿ ಹೋರಾಟ ಮಾಡದೇ ದೇಶಕ್ಕೆ ಉತ್ತಮ ಆಡಳಿತ ಸಿಗಬೇಕಾದರೆ ತಮ್ಮ ಕರ್ತವ್ಯ ನಿರ್ವಹಣೆಯನ್ನೂ ಮಾಡಬೇಕಿದೆ. ಸಂಘಟನೆ ಎನ್ನುವುದು ಕೇವಲ ಅಧಿಕಾರವ್ಲ. ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts