More

    ಕಾಂಗ್ರೆಸ್ ಗೆ ನೀಡುವ ವೋಟು ದೇಶದ ಅರಾಜಕತೆ ಕಾರಣ: ಮಾಜಿ ಸಿಎಂ ಯಡಿಯೂರಪ್ಪ ಎಚ್ಚರಿಕೆ

    ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನೀಡುವ ವೋಟು ದೇಶದಲ್ಲಿ ಅರಾಜಕತೆ, ಭ್ರಷ್ಟಾಚಾರ, ಆರ್ಥಿಕ ದಿವಾಳಿತನ ಸೃಷ್ಟಿಸಲಿದೆ. ದೇಶವನ್ನು ಬಾಹ್ಯ, ಆಂತರಿಕ ಅಭದ್ರತೆಯ ಅಪಾಯಕ್ಕೆ ದೂಡಲಿದೆ ಎಂದು ಜನರಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದರು.

    ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ನಡೆಯುತ್ತಿದೆ ಅನ್ನೋದನ್ನು ಕಾಂಗ್ರೆಸ್ ನಾಯಕರು ಮರೆತುಹೋಗಿದ್ದಾರೆ ಅನಿಸುತ್ತಿದೆ. ರಾಹುಲ್ ಗಾಂಧಿ ನಾಯಕತ್ವ ವಿಫಲ‌ವಾಗಿದೆ ಎಂದು ಗೊತ್ತಾಗಿ ರಾಹುಲ್ ಹೆಸರು ಹೇಳುತ್ತಿಲ್ಲ. ಅವರ ನಾಯಕತ್ವದಲ್ಲಿ ಅವರಿಗೇ ವಿಶ್ವಾಸವಿಲ್ಲದಂತಾಗಿದೆ. ಹಾಗಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಚಾಟಿ ಬೀಸಿದರು.

    ಆದರೆ ನಾವು ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳು, ದಶಕದ ಸಾಧನೆಗಳ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ. ಉದ್ಯೋಗ ಸೃಷ್ಟಿ, ಬಡವರಿಗೆ, 25 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಿರುವುದು, ಮೂಲ ಸವಲತ್ತುಗಳ ಅಭಿವೃದ್ಧಿಯಲ್ಲಿ ಅಗಾಧ ಬದಲಾವಣೆ ಆಗಿರುವುದನ್ನು ಜನ ಗುರುತಿಸಿದ್ದಾರೆ. ಮೋದಿ ಗ್ಯಾರಂಟಿಯೇ ನಿಜವಾದ ಗ್ಯಾರಂಟಿ ಎಂದು ನಂಬಿದ್ದಾರೆ ಎಂದರು.

    ಟೀಕೆಗೆ ಉತ್ತರಿಸಲ್ಲ

    ಡಿ.ಕೆ.ಶಿವಕುಮಾರ್, ಕೆ.ಎಸ್.ಈಶ್ವರಪ್ಪ ಸೇರಿ ಯಾರೊಬ್ಬರ ವೈಯಕ್ತಿಕ ಟೀಕೆ- ಟಿಪ್ಪಣಿಗೆ ಉತ್ತರಿಸುವುದಿಲ್ಲ. ಡಿ.ಕೆ.ಶಿವಕುಮಾರ್ ಬಹಳ ಪ್ರವೀಣರು. ಒಕ್ಕಲಿಗ ಸರ್ಕಾರ ಬೀಳಿಸಿದ್ದರ ಬಗ್ಗೆ ಸ್ವಾಮೀಜಿಯವರನ್ನು ಅವರೇ ಕೇಳಲಿ. ಈಶ್ವರಪ್ಪ ನಾಮಪತ್ರ ಸಲ್ಲಿಕೆ ನಿರ್ಧಾರದ ಬಗ್ಗೆ ನಾನೇ‌ನೂ ಹೇಳುವುದಿಲ್ಲ ಎಂದು ಯಡಿಯೂರಪ್ಪ ಜಾರಿಕೊಂಡರು.

    ವಿಧಾನಸಭೆ ಚುನಾವಣೆಯಲ್ಲಿ  ಆದದ್ದಾಯಿತು. ಇದು ದೇಶದ ಚುನಾವಣೆ. ರಾಜ್ಯಾದ್ಯಂತ ಮೋದಿ ಅಲೆಯಿದೆ. ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿರುವ ಕಾರಣ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಕೆಲವರ ವೈಯಕ್ತಿಕ ಅಸಮಾಧಾನ ಪರಿಣಾಮಬೀರುವುದಿಲ್ಲ. ರಾಜ್ಯಾದ್ಯಂತ ಇಂದಿನಿಂದ ಪ್ರವಾಸ ಮಾಡುವೆ. ನನ್ನೊಂದಿಗೆ ನೀವು (ಪತ್ರಕರ್ತರು) ಬನ್ನಿ, ಜನಸ್ಪಂದನೆ ಹೇಗಿದೆ ಎನ್ನುವುದು ಗೊತ್ತಾಗಲಿದೆ ಎಂದ ಯಡಿಯೂರಪ್ಪ ತಮ್ಮ ನಿಲುವು ಸಮರ್ಥಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts