More

    ಶಾಹೀನ್​ಬಾಘ್ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದ ಸಂಧಾನಕಾರರು: ಪರ್ಯಾಯ ಸ್ಥಳದಲ್ಲಿ ಪ್ರತಿಭಟಿಸುವಂತೆ ಮನವಿ

    ನವದೆಹಲಿ: ಸುಪ್ರೀಂಕೋರ್ಟ್​ ನೇಮಕ ಮಾಡಿದ ಇಬ್ಬರು ಸಂಧಾನಕಾರರು ಇದೇ ಮೊದಲ ಬಾರಿಗೆ ಶಾಹೀನ್​ಬಾಘ್​ಗೆ ತೆರಳಿ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದರು.

    ವಕೀಲ ಸಂಜಯ್​ ಹೆಗ್ಡೆ ಹಾಗೂ ಸಾಧನಾ ರಾಮಚಂದ್ರನ್​ ಅವರನ್ನು ಸುಪ್ರೀಂಕೋರ್ಟ್​ ಸಂಧಾನಕಾರರನ್ನಾಗಿ ನೇಮಕ ಮಾಡಿ ಪ್ರತಿಭಟನಾಕಾರರ ಜತೆ ಚರ್ಚೆ ನಡೆಸುವಂತೆ ಸೂಚಿಸಿದೆ.

    ಸಾಧನಾ ರಾಮಚಂದ್ರನ್​ ಅವರು ಮಾತನಾಡಿ, ಕಾಯ್ದೆ ಜಾರಿ ವಿರೋಧಿಸಿ ಪ್ರತಿಭಟನೆ ನಡೆಸುವ ಹಕ್ಕು ನಿಮಗೆ ಇದೆ. ಅಲ್ಲದೆ ಈ ಕಾಯ್ದೆ ಜಾರಿ ವಿರೋಧಿಸಿ ಹಲವರು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್​ ವಿಚಾರಣೆ ನಡೆಸುತ್ತಿದೆ. ನಮ್ಮಂತೆಯೇ ಇತರರಿಗೂ ರಸ್ತೆ ಬಳಸುವ ಹಕ್ಕು ಇದೆ. ಅವರಿಗೆ ರಸ್ತೆ ಬಳಸಲು ಅವಕಾಶ ಕಲ್ಪಿಸಿಕೊಡಿ. ಅಲ್ಲದೆ ಅಂಗಡಿಗಳನ್ನು ತೆರೆಯಲು ಅನುಕೂಲ ಮಾಡಿಕೊಡಿ ಎಂದು ಪ್ರತಿಭಟನಾಕಾರರನ್ನು ಕೋರಿದರು.

    “ನಾವು ಸುಪ್ರೀಂ ಕೋರ್ಟ್ ಆದೇಶದಂತೆ ಇಲ್ಲಿಗೆ ಬಂದಿದ್ದೇವೆ. ಎಲ್ಲರೊಂದಿಗೆ ಮಾತನಾಡಬೇಕೆಂದು ನಾವು ಭಾವಿಸುತ್ತೇವೆ. ಎಲ್ಲರ ಸಹಕಾರದಿಂದ ಈ ವಿಷಯವನ್ನು ಪರಿಹರಿಸುತ್ತೇವೆ ಎಂದು ನಾವು ಭಾವಿಸುತ್ತೇವೆ” ಹೀಗಾಗಿ ಪ್ರತಿಭಟನಾಕಾರರು ಸಹಕರಿಸಬೇಕು ಎಂದು ಸಂಜಯ್ ಹೆಗ್ಡೆ ಹೇಳಿದರು.

    ಶಾಂತಿಯುತವಾಗಿ ಮತ್ತು ಕಾನೂನುಬದ್ಧವಾಗಿ ಪ್ರತಿಭಟಿಸುವುದು ಜನರ ಮೂಲಭೂತ ಹಕ್ಕು. ಆದರೆ ಸಾರ್ವಜನಿಕ ರಸ್ತೆಗಳು ಮತ್ತು ಸ್ಥಳಗಳನ್ನು ನಿರ್ಬಂಧಿಸುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ. ಹೀಗಾಗಿ ಪರ್ಯಾಯ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಮನಸ್ಸು ಮಾಡಬೇಕು ಎಂದು ಅವರು ಹೇಳಿದರು.

    ಶಾಹೀನ್​ಬಾಘ್​​ನಲ್ಲಿ 2 ತಿಂಗಳಿಂದ ಪ್ರತಿಭಟನೆ ನಡೆಯುತ್ತಿದ್ದು ಆಗ್ನೇಯ ದೆಹಲಿಯ ಶಾಹೀನ್​ಬಾಘ್​-ಕಾಲಿಂಡಿ ಕುಂಜ್ ರಸ್ತೆಯನ್ನು ಎರಡು ತಿಂಗಳಿನಿಂದ ನಿರ್ಬಂಧಿಸಲಾಗಿದೆ. ಈ ರಸ್ತೆಯನ್ನು ಹೆಚ್ಚಾಗಿ ಪ್ರಯಾಣಿಕರು ಮಾತ್ರ ಬಳಸುತ್ತಾರೆ. ಜಾಮಿಯಾ ನಗರ ಮತ್ತು ಓಖ್ಲಾ ಸುತ್ತಮುತ್ತಲಿನ ಜನರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಅಂದಾಜು ಎರಡು ಮೂರು ಕಿಲೋಮೀಟರ್ ದೂರದಲ್ಲಿರುವ ಶಾಹೀನ್​ಬಾಘ್​ನಿಂದ ಕಾಲಿಂಡಿ ಕುಂಜ್ ರಸ್ತೆಯವರೆಗೆ ವಾಣಿಜ್ಯ ಕೇಂದ್ರಗಳು ವಸತಿ ಅಂಗಡಿಗಳು ಮತ್ತು ರೆಸ್ಟೋರೆಂಟ್‌ ಇವೆ. ಈ ರಸ್ತೆ ಅಟ್ಲಾಂಟಾ ವಾಟರ್ ಪಾರ್ಕ್‌ನಲ್ಲಿ ಕೊನೆಗೊಳ್ಳುತ್ತದೆ. ಶಾಹೀನ್​ಬಾಘ್​-ಕಲಿಂಡಿ ಕುಂಜ್ ರಸ್ತೆ ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್ ವೇಗೆ ಸಮಾನಾಂತರವಾಗಿದೆ. ಇದನ್ನು ದೆಹಲಿ ಮತ್ತು ನೋಯ್ಡಾ ನಡುವೆ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಬಳಸುತ್ತಾರೆ. ಹೀಗಾಗಿ ತೊಂದರೆ ಎದುರಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts