More

    ಟಿ20 ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಟಾಪರ್: ಆಸೀಸ್‌ನ ರಿಕಿ ಪಾಂಟಿಂಗ್ ಹಿಂದಿಕ್ಕಿದ ಚೇಸ್ ಮಾಸ್ಟರ್

    ಮುಂಬೈ: ಕಳೆದ 10 ವರ್ಷಗಳ ಐಸಿಸಿ ಟ್ರೋಫಿ ಕೊರತೆ ನೀಗಿಸಲು ಟೀಮ್ ಇಂಡಿಯಾಗೆ ಇನ್ನೊಂದು ಗೆಲುವು ಮಾತ್ರ ಬಾಕಿ ಇದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (117 ರನ್, 113 ಎಸೆತ, 9 ಬೌಂಡರಿ, 2 ಸಿಕ್ಸರ್) ಏಕದಿನ ಕ್ರಿಕೆಟ್‌ನ 50ನೇ ಶತಕ ಹಾಗೂ ಶ್ರೇಯಸ್ ಅಯ್ಯರ್ (105 ರನ್, 70 ಎಸೆತ, 4 ಬೌಂಡರಿ, 8 ಸಿಕ್ಸರ್) ಸತತ 2ನೇ ಶತಕದ ಸಾಹಸ ಮತ್ತು ವೇಗಿ ಮೊಹಮದ್ ಶಮಿ (57ಕ್ಕೆ 7) ಮಾರಕ ದಾಳಿಯ ನೆರವಿನಿಂದ ಭಾರತ ತಂಡ ಏಕದಿನ ವಿಶ್ವಕಪ್‌ನ ಮೊದಲ ಸೆಮಿೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 70 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ರೋಹಿತ್ ಶರ್ಮ ಪಡೆ ಸತತ 10ನೇ ಜಯದೊಂದಿಗೆ ಅಜೇಯವಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಈ ಮೂಲಕ 3ನೇ ಮತ್ತು ತವರಿನಲ್ಲಿ 2ನೇ ಬಾರಿ ವಿಶ್ವವಿಕ್ರಮ ಸಾಧಿಸುವ ಸನಿಹದಲ್ಲಿದೆ.

    ಏಕದಿನದಲ್ಲಿ 3ನೇ ಟಾಪ್ ಸ್ಕೋರರ್
    ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ವಿಶ್ವದ ಮೂರನೇ ಬ್ಯಾಟರ್ ಎನಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ (13, 704) ಅವರನ್ನು ಹಿಂದಿಕ್ಕಿದ ಕೊಹ್ಲಿ 279 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು. ಸಚಿನ್ ತೆಂಡುಲ್ಕರ್ (18,426) ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕರ (14,234) ಮೊದಲೆರಡು ಸ್ಥಾನದಲ್ಲಿದ್ದಾರೆ.

    ವಿಶ್ವಕಪ್-ಟಿ20 ಆವೃತ್ತಿಯಲ್ಲಿ ಗರಿಷ್ಠ ಸ್ಕೋರರ್
    ವಿರಾಟ್ ಕೊಹ್ಲಿ (711) ಐಸಿಸಿ ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿಹೆಚ್ಚು ರನ್‌ಗಳಿಸಿ ಸಚಿನ್ ತೆಂಡುಲ್ಕರ್ (673) ದಾಖಲೆ ಮುರಿದರು. ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಗರಿಷ್ಠ ರನ್‌ಗಳಿಸಿದ ದಾಖಲೆಯನ್ನು ಕೊಹ್ಲಿ ಹೊಂದಿದ್ದು, 2014ರಲ್ಲಿ 319 ರನ್ ಕಲೆ ಹಾಕಿದ್ದರು. ಏಕದಿನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ (659), ರೋಹಿತ್ ಶರ್ಮ (648) ನಂತರದ ಸ್ಥಾನದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts