More

    VIDEO: ಆರ್‌ಸಿಬಿ ಪರ ನಾಯಕ ವಿರಾಟ್ ಕೊಹ್ಲಿ ದ್ವಿಶತಕದ ಮೈಲುಗಲ್ಲು..!

    ಅಬುಧಾಬಿ: ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 200ನೇ ಪಂದ್ಯವಾಡಿದ ಮೊದಲ ಆಟಗಾರ ಎನಿಸಿಕೊಂಡರು. ಅದರಲ್ಲೂ ಒಂದೇ ತಂಡದ ಪರ ಈ ಸಾಧನೆ ಮಾಡಿದರು. 2008ರ ಮೊದಲ ಆವೃತ್ತಿಯಲ್ಲಿ 19 ವಯೋಮಿತಿ ಕೋಟಾದಡಿ ಆರ್‌ಸಿಬಿ ಸೇರ್ಪಡೆಗೊಂಡ ಕೊಹ್ಲಿ, 2011ರ ಐಪಿಎಲ್ ಆಟಗಾರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ತಂಡ ದುಬಾರಿ ಮೊತ್ತಕ್ಕೆ ಉಳಿಸಿಕೊಂಡಿತ್ತು. 2013ರಿಂದ ತಂಡದ ಪೂರ್ಣ ಪ್ರಮಾಣದ ನಾಯಕನಾಗಿದ್ದಾರೆ. ಕೊಹ್ಲಿ ಆರ್‌ಸಿಬಿಯ ದುಬಾರಿ ಆಟಗಾರ ಎನಿಸಿದ್ದಾರೆ. ಕೊಹ್ಲಿ ವರ್ಷಕ್ಕೆ 17 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

    ಐಪಿಎಲ್‌ನಲ್ಲಿ 6 ಸಾವಿರ ರನ್ ಪೂರೈಸಿರುವ ಏಕೈಕ ಆಟಗಾರ ಎನಿಸಿಕೊಂಡಿದ್ದು, 5 ಶತಕ ಸಿಡಿಸಿದ್ದಾರೆ. ಆದರೆ, ನಾಯಕನಾಗಿ ಅಷ್ಟೊಂದು ಯಶಸ್ವಿಯಾಗಿಲ್ಲ. ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಇದುವರೆಗೂ ಆಡಿದ 132 ಪಂದ್ಯಗಳಲ್ಲಿ 60ರಲ್ಲಿ ಜಯ ದಾಖಲಿಸಿದ್ದು, 2016ರಲ್ಲಿ ಫೈನಲ್‌ನಲ್ಲಿ ಸೋತಿತ್ತು. ಮತ್ತೊಂದೆಡೆ, ಕೆಕೆಆರ್ ತಂಡಕ್ಕೆ 200ನೇ ಪಂದ್ಯ ಇದಾಗಿದೆ. ಐಪಿಎಲ್‌ನಲ್ಲಿ 200ನೇ ಪಂದ್ಯವಾಡಿದ 3ನೇ ತಂಡ ಎನಿಸಿಕೊಂಡಿತು. ಆರ್‌ಸಿಬಿ (204) ಹಾಗೂ ಮುಂಬೈ ಇಂಡಿಯನ್ಸ್ (211) ಮೊದಲ ಎರಡು ಸ್ಥಾನದಲ್ಲಿವೆ.

    ಹಾಲಿ ಆವೃತ್ತಿಯ ಐಪಿಎಲ್ ಟೂರ್ನಿಯ ಬಳಿಕ ಆರ್‌ಸಿಬಿ ತಂಡದ ನಾಯಕತ್ವ ತ್ಯಜಿಸುವುದಾಗಿ ವಿರಾಟ್ ಕೊಹ್ಲಿ ಭಾನುವಾರ ಪ್ರಕಟಿಸಿದರು. ಮುಂಬರುವ ಟಿ20 ವಿಶ್ವಕಪ್ ಬಳಿಕ ಭಾರತ ಟಿ20 ತಂಡದ ನಾಯಕತ್ವ ತ್ಯಜಿಸುವುದಾಗಿ ಅವರು ಇತ್ತೀಚೆಗಷ್ಟೇ ಹೇಳಿದ್ದರು. ಇದೀಗ ಆರ್‌ಸಿಬಿ ನಾಯಕತ್ವದಿಂದಲೂ ನಿರ್ಗಮಿಸುವುದರಿಂದ ಅವರು, ಚುಟುಕು ಕ್ರಿಕೆಟ್ ತಂಡಗಳ ಸಾರಥ್ಯದಿಂದ ಸಂಪೂರ್ಣ ದೂರ ಉಳಿದಂತಾಗಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts