More

    VIDEO: ಪಾಂಡ್ಯ ಬೌಲಿಂಗ್ ಮಾಡದಿದ್ದರೇನಂತೆ? ಭಾರತಕ್ಕೆ ಸಿಕ್ಕರು 6ನೇ ಬೌಲರ್!

    ದುಬೈ: ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಾರೋ, ಇಲ್ಲವೋ ಎಂಬ ಗೊಂದಲದ ನಡುವೆ ಟೀಮ್ ಇಂಡಿಯಾಗೆ ಹೊಸ ಬೌಲರ್ ಒಬ್ಬರು ದೊರೆತಿದ್ದಾರೆ. ಅವರೇ ವಿರಾಟ್ ಕೊಹ್ಲಿ!

    ಆಸೀಸ್ ವಿರುದ್ಧ 2ನೇ ಅಭ್ಯಾಸ ಪಂದ್ಯದ ನಾಯಕತ್ವ ಮತ್ತು ಬ್ಯಾಟಿಂಗ್‌ನಿಂದ ವಿಶ್ರಾಂತಿ ಪಡೆದ ಅವರು, 2 ಓವರ್ ಬೌಲಿಂಗ್ ಮಾಡಿ ಮಿಂಚಿದರು. ಕೊಹ್ಲಿ ಹಲವು ಪಂದ್ಯಗಳ ಬಳಿಕ ಬೌಲಿಂಗ್ ಮಾಡಿದರು. ಪವರ್‌ಪ್ಲೇ ಮುಕ್ತಾಯದ ಬೆನ್ನಲ್ಲೇ ಮಧ್ಯಮ ವೇಗಿಯಾಗಿ ಮೊದಲ ಓವರ್ ಎಸೆದ ಕೊಹ್ಲಿ, 4 ಸಿಂಗಲ್ಸ್ ಬಿಟ್ಟುಕೊಟ್ಟರು. ಬಳಿಕ ಇನಿಂಗ್ಸ್‌ನ 13ನೇ ಓವರ್ ಎಸೆದು ಬೌಂಡರಿ ಸಹಿತ 8 ರನ್ ಬಿಟ್ಟುಕೊಟ್ಟರು. ಕೊಹ್ಲಿ ಅರೆಕಾಲಿಕ ಬೌಲರ್ ಆಗಿ ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ. ಅವರು ಏಕದಿನ ಮತ್ತು ಟಿ20ಯಲ್ಲಿ ತಲಾ 4 ವಿಕೆಟ್ ಕೂಡ ಕಬಳಿಸಿದ್ದಾರೆ.

    ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಬೌಲಿಂಗ್ ನಿರೀಕ್ಷೆ
    ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್‌ನಲ್ಲಿ ಬೌಲಿಂಗ್ ಮಾಡುವ ನಿರೀಕ್ಷೆ ಇದೆ ಎಂದು ರೋಹಿತ್ ಶರ್ಮ ಆಸೀಸ್ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಮುನ್ನ ಹೇಳಿದರು. ನಮ್ಮ ತಂಡ ಗುಣಮಟ್ಟದ ಬೌಲರ್‌ಗಳನ್ನು ಹೊಂದಿದೆ. ಆದರೂ 6ನೇ ಬೌಲಿಂಗ್ ಆಯ್ಕೆಯ ಅಗತ್ಯವಿದೆ. ವಿಶ್ವಕಪ್ ಪಂದ್ಯಗಳು ಆರಂಭಗೊಂಡಾಗ ಬೌಲಿಂಗ್ ಆರಂಭಿಸಬಹುದು. ಸದ್ಯಕ್ಕೆ ಅವರಿನ್ನೂ ಬೌಲಿಂಗ್ ಆರಂಭಿಸಿಲ್ಲ ಎಂದು ರೋಹಿತ್ ಹೇಳಿದರು. ಹಾರ್ದಿಕ್ ಕಳೆದ ಐಪಿಎಲ್‌ನಲ್ಲೂ ಮುಂಬೈ ಇಂಡಿಯನ್ಸ್ ಪರ ಬೌಲಿಂಗ್ ಮಾಡಿರಲಿಲ್ಲ. ಆದರೆ ಟಿ20 ವಿಶ್ವಕಪ್‌ನಲ್ಲಿ ಅವರು ಕೇವಲ ಬ್ಯಾಟ್ಸ್‌ಮನ್ ಆಡದೆ, ಬೌಲಿಂಗ್ ಕೂಡ ಮಾಡುವುದು ನಿರ್ಣಾಯಕವೆನಿಸಿದೆ.

    ಆಸೀಸ್ ವಿರುದ್ಧ ಅಭ್ಯಾಸ ಪಂದ್ಯದಲ್ಲೂ ಜಯ, ಟಿ20 ವಿಶ್ವಕಪ್‌ಗೆ ಭಾರತ ಭರ್ಜರಿ ಸಿದ್ಧತೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts