More

    ಇವರಿಬ್ಬರನ್ನು ತಂಡದಿಂದ ಕೈಬಿಡಲು ಯಾವುದೇ ಕಾರಣವಿಲ್ಲ: ಸುನೀಲ್​ ಗಾವಸ್ಕರ್

    ನವದೆಹಲಿ: ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್​ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಹಾಗೂ ರನ್​​ ಮೆಷಿನ್​ ವಿರಾಟ್​ ಕೊಹ್ಲಿ ಕಣಕ್ಕಿಳಿಯಲಿದ್ದಾರ ಎಂಬ ಬಗ್ಗೆ ಅನುಮಾನಗಳು ನಡುವೆಯೇ ಇವರಿಬ್ಬರನ್ನು ತಂಡದಿಂದ ಕೈಬಿಡಲು ಯಾವುದೇ ಕಾರಣವಿಲ್ಲ ಎಂದು ಮಾಜಿ ಕ್ರಿಕೆಟಿಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಏಕೆಂದರೆ ಈ ಇಬ್ಬರು ಆಟಗಾರರು ಟಿ-20 ವಿಶ್ವಕಪ್​ ಹೊರತುಪಡಿಸಿ ಬೇರೆ ಯಾವ ಚುಟುಕು ಟೂರ್ನಿಗಳಲ್ಲಿ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಹೀಗಾಗಿಯೇ ರೋಹಿತ್ ಶರ್ಮಾ ಹಾಗೂ ಕೊಹ್ಲಿಯನ್ನು ಟಿ20 ವಿಶ್ವಕಪ್​ ಆಯ್ಕೆಗೆ ಪರಿಗಣಿಸುವುದು ಡೌಟ್​ ಎಂದು ಹೇಳಲಾಗುತ್ತಿದೆ.

    ಇತ್ತೀಚಿನ ಬೆಳವಣಿಗೆ ಪ್ರಕಾರ, ಹಿಟ್​ಮ್ಯಾನ್ ಹಾಗೂ ಕಿಂಗ್ ಕೊಹ್ಲಿ ಟಿ20 ಕ್ರಿಕೆಟ್​ಗೆ ಮರಳುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಇಬ್ಬರು ದಿಗ್ಗಜರೊಂದಿಗೆ ಮಾತುಕತೆ ನಡೆಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಮತ್ತೆ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

    ಇದನ್ನೂ ಓದಿ: ದೇಶದಲ್ಲಿ ಎಂಬಿಬಿಎಸ್​ ಸೀಟುಗಳು ಸಂಖ್ಯೆ ಶೇ.112 ಹೆಚ್ಚಳ: ಕೇಂದ್ರ ಸಚಿವ ಮಾಂಡವಿಯಾ

    ಇದರ ಬೆನ್ನಲ್ಲೇ ಟಿ20 ವಿಶ್ವಕಪ್​ಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಪರಿಗಣಿಸಬೇಕೆಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಇಬ್ಬರನ್ನು ಕೈ ಬಿಡಲು ಯಾವುದೇ ಆಯ್ಕೆಗಳಿಲಿಲ್ಲ. ನೀವು ಕೆಲವೊಮ್ಮೆ 35-36 ವರ್ಷ ವಯಸ್ಸಿನವರಾಗಿದ್ದಾಗ, ನಿಮ್ಮ ಕಾರ್ಯಗಳು ನಿಧಾನವಾಗುತ್ತವೆ. ನಿಮ್ಮ ಥ್ರೋ ಕೂಡ ಉತ್ಸಾಹಭರಿತವಾಗಿಲ್ಲ.

    ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಷಯದಲ್ಲಿ ಅಂತಹ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ. ಏಕೆಂದರೆ ಇಬ್ಬರೂ ಈ ವಯಸ್ಸಿನಲ್ಲೂ ಅತ್ಯುತ್ತಮ ಫೀಲ್ಡಿಂಗ್ ಮಾಡುತ್ತಿದ್ದಾರೆ. ಇನ್ನು ಏಕದಿನ ವಿಶ್ವಕಪ್​ ಮೂಲಕ ತಮ್ಮ ಫಾರ್ಮ್​ ಅನ್ನು ಕೂಡ ಪ್ರದರ್ಶಿಸಿದ್ದಾರೆ. ಹೀಗಾಗಿ ಇಬ್ಬರು ಟಿ20 ವಿಶ್ವಕಪ್​ ತಂಡಕ್ಕೆ ಆಯ್ಕೆಗೆ ಅರ್ಹರು ಎಂದು ಸುನೀಲ್​ ಗಾವಸ್ಕರ್​ ಇಬ್ಬರು ಆಟಗಾರರ ಪರ ಬ್ಯಾಟ್​ ಬೀಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts