More

    VIDEO: ಹಕ್ಕಿಗಳು ಗಹಗಹಿಸಿ ನಗುವುದನ್ನು ಎಂದಾದರೂ ನೋಡಿದ್ದೀರಾ? ಕಿವಿಗೆ ಇಂಪು ಕೊಡದ ಪಕ್ಷಿನಗುವನ್ನೊಮ್ಮೆ ಕೇಳಿಬಿಡಿ….

    ಪಕ್ಷಿಗಳು ನಗುತ್ತವೆ ಎಂದರೆ ನಿಮಗೆ ನಂಬಲಾಗುತ್ತದೆಯಾ? ಅಥವಾ ಅಚ್ಚರಿಯಾಗುತ್ತಿದೆಯಾ? ಈ ವಿಡಿಯೋ ನೋಡಿದ ಮೇಲಾದರೂ ಹಕ್ಕಿಗಳು ನಗುತ್ತವೆ ಎಂಬುದನ್ನು ನಂಬಲೇಬೇಕು..!

    ಐಎಫ್​​ಎಸ್​ ಅಧಿಕಾರಿ ಸುಸಾಂತಾ ನಂದಾ ತಮ್ಮ ಟ್ವಿಟರ್​ನಲ್ಲಿ ಎರಡು ಹಕ್ಕಿಗಳು ನಗುತ್ತಿರುವ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ. ವಿಡಿಯೋ ಈಗ ಸಖತ್​​ ಟ್ರೆಂಡ್​ ಆಗಿದೆ. ಪಕ್ಷಿಗಳು ತಮ್ಮ ಕತ್ತನ್ನು ಮೇಲಕ್ಕೆತ್ತಿ ಅದೊಂಥರ ಗಹಗಹಿಸಿ ನಕ್ಕಂತೆ ಭಾಸವಾಗುತ್ತದೆ.

    15 ಸೆಕೆಂಡ್​​ಗಳ ವಿಡಿಯೋ ಕ್ಲಿಪ್​ ಇದು. ಪೋಸ್ಟ್​ ಮಾಡಿದ ಕೆಲವೇ ಕ್ಷಣಗಳಲ್ಲಿ ನೆಟ್ಟಿಗರನ್ನು ಆಕರ್ಷಿಸಿದೆ. ಈಗಾಗಲೇ 6ಸಾವಿರಕ್ಕೂ ಹೆಚ್ಚು ವೀವ್ಸ್​ ಪಡೆದಿದೆ. ಬಹುತೇಕರು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿಯೇ ಕಾಮೆಂಟ್​ ಬರೆದಿದ್ದಾರೆ.

    ವಿಡಿಯೋ ಪೋಸ್ಟ್ ಮಾಡಿರುವ ಸುಸಾಂತಾ ನಂದಾ, ನೋಡಿ ಈ ಕೂಕಬುರ್ರಾ ಹಕ್ಕಿಗಳು ಹೇಗೆ ನಗುತ್ತಿವೆ. ತಮ್ಮ ಕತ್ತುಗಳನ್ನು ನೇರವಾಗಿ ಇಟ್ಟು, ಸ್ವಲ್ಪ ಹಿಂದಕ್ಕೆ ಬಾಗಿಸಿ ತುಂಬ ಒರಟಾಗಿ ನಗುತ್ತಿವೆ. ತಾವು ವಾಸಿಸಬೇಕಾದ ಪ್ರದೇಶವನ್ನು ದೃಢಪಡಿಸಿಕೊಂಡ ಕಾರಣಕ್ಕೆ ಹೀಗೆ ಗಡುಸಾಗಿ ಗಹಗಹಿಸಿ ನಗುತ್ತಿವೆ ಎಂದು ಕ್ಯಾಪ್ಷನ್​ ಬರೆದಿದ್ದಾರೆ.

    ಹಕ್ಕಿಗಳು ನಗುವುದು ತೀರ ಅಚ್ಚರಿಯ ಸಂಗತಿಯಾದರೂ ಕಿವಿಗೆ ಅಷ್ಟೇನೂ ಮುದ ಕೊಡುವುದಿಲ್ಲ.  ಈ ಕೂಕಬುರ್ರಾ ಪಕ್ಷಿಗಳು ಹೆಚ್ಚಾಗಿ ಆಸ್ಟ್ರೇಲಿಯಾ ಮತ್ತು ನ್ಯೂ ಜಿನಿವಾದಲ್ಲಿ ಕಂಡುಬರುತ್ತವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts