More

    ಭಾರತದಲ್ಲಿ ಕಂಡುಬಂತಾ ಮಾನವ ಮುಖ ಹೋಲುವ ವಿಚಿತ್ರ ಪ್ರಾಣಿ? ಫ್ಯಾಕ್ಟ್​ಚೆಕ್​ನಲ್ಲಿ ಬಯಲಾದ ಸತ್ಯವೇನು?

    ನವದೆಹಲಿ: ಮಾನವನ ಮುಖ ಹೋಲುವ ನಾಲ್ಕು ಕಾಲುಗಳ ವಿಚಿತ್ರ ಜೀವಿಯೊಂದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದೊಂದು ಅಪಾಯಕಾರಿ ಪ್ರಾಣಿ ಎಂದು ಹೇಳಲಾಗಿದೆ. ಕೆಲ ನೆಟ್ಟಿಗರು ಇದೊಂದು ಏಲಿಯನ್​ ಇರಬಹುದು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಹಿತೇಶ್​ ಭಟಿ ಎಂಬ ಟ್ವಿಟರ್​​ ಬಳಕೆದಾರರು ವಿಚಿತ್ರ ಜೀವಿಯ ಫೋಟೋವನ್ನು ಪೋಸ್ಟ್​ ಮಾಡಿಕೊಂಡು, ಯಾರಿಗಾದರೂ ಈ ಪ್ರಾಣಿಯ ಬಗ್ಗೆ ಗೊತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ. ಇದೇ ಫೋಟೋವನ್ನು ದೀಪಕ್​ ಅಶರ್​ ಎಂಬ ಫೇಸ್​ಬುಕ್​ ಬಳಕೆದಾರ ಶೇರ್​ ಮಾಡಿಕೊಂಡಿದ್ದು, ಸೆಪ್ಟೆಂಬರ್ 2ರಂದು ಈ ಪ್ರಾಣಿ ಕಾಣಿಸಿಕೊಂಡಿತು. ಇದು ಏಲಿಯನಾ? ಎಂದು ಪ್ರಶ್ನಿಸಿದ್ದಾರೆ. ಇದೀಗ ಪೋಸ್ಟ್​ ಡಿಲೀಟ್​ ಮಾಡಲಾಗಿದೆ.

    ಭಾರತದಲ್ಲಿ ಕಂಡುಬಂತಾ ಮಾನವ ಮುಖ ಹೋಲುವ ವಿಚಿತ್ರ ಪ್ರಾಣಿ? ಫ್ಯಾಕ್ಟ್​ಚೆಕ್​ನಲ್ಲಿ ಬಯಲಾದ ಸತ್ಯವೇನು?

    ತೆಲುಗು ಮಾಧ್ಯಮವೊಂದು ಸಹ ಸುಳ್ಳು ವರದಿಯನ್ನು ಮಾಡಿ, ತೆಲಂಗಾಣದ ಜಗತಿಯಲ್ ಜಿಲ್ಲೆಯ ಗೊಲ್ಲಪಲ್ಲಿ ಗ್ರಾಮದ ಸುತ್ತಲೂ ಈ ವಿಚಿತ್ರ ಪ್ರಾಣಿ ತಿರುಗಾಡುತ್ತಿದೆ ಎಂದು ಹೇಳಿದೆ.

    ಫ್ಯಾಕ್ಟ್​ಚೆಕ್​ ಹೇಳಿದ್ದೇನು?
    ವೈರಲ್​ ಫೋಟೋ ಹಿಂದಿನ ಅಸಲಿಯತ್ತು ಏನೆಂಬುದನ್ನು ತಿಳಿಯಲು ನ್ಯೂಸ್​ ಮೀಟರ್​ ವೆಬ್​ಸೈಟ್​ ಫ್ಯಾಕ್ಟ್​ಚೆಕ್​ ನಡೆಸಿದಾಗ ಪ್ರಾಣಿ ಕುರಿತು ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂಬುದು ಬಯಲಾಗಿದೆ. ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ ಸಹಾಯದಿಂದ ಫೋಟೋವನ್ನು ಹುಡುಕಾಡಿದಾಗ “ಲೈರಾ ಮಾಗನುಕೊ ಅವರಿಂದ ನಂಬಲಾಗದ ತೆವಳುವ ಹೈಪರ್ ರಿಯಲಿಸ್ಟಿಕ್ ಕ್ರಿಯೇಚರ್ಸ್” ಎಂಬ ಬ್ಲಾಗ್​ನಲ್ಲಿ ಇದೇ ಪ್ರಾಣಿಯ ಫೋಟೋವನ್ನು ಬಳಸಿಕೊಳ್ಳಲಾಗಿದೆ.

    ಅಂದಹಾಗೆ ಲೈರಾ ಮಾಗನುಕೊ ಅವರು ಇಟಲಿಯ ಮಿಲನ್ ನಗರದ ಹೈಪರ್-ರಿಯಲಿಸ್ಟಿಕ್​ ಸಿಲಿಕಾನ್ ಶಿಲ್ಪಿಯಾಗಿದ್ದಾರೆ. ತಮ್ಮ ಜೀವನಚರಿತ್ರೆಯಲ್ಲಿ ಹೇಳಿರುವ ಪ್ರಕಾರ ಹಲವಾರು ಪ್ರಯೋಗಗಳ ಬಳಿಕ ನನ್ನ ಶಿಲ್ಪಗಳನ್ನು ದೃಷ್ಟಿಗೋಚರವಾಗಿ ಮತ್ತು ಸ್ಪರ್ಶಕ್ಕೆ ಹೆಚ್ಚು ನೈಜವಾಗಿಸುವ ಸಾಮರ್ಥ್ಯ ಸಿಲಿಕಾನ್​ಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಹೀಗಾಗಿ ವೈರಲ್​ ಆಗಿರುವ ಚಿತ್ರವು ನೈಜವಾದುದ್ದಲ್ಲ. ಅದನ್ನು ಸಿಲಿಕಾನ್​ನಿಂದ ಮಾಡಲಾಗಿದೆ. ಲೈರಾ ಮಾಗನುಕೊ ಅವರು ತಮ್ಮ ಶಿಲ್ಪಗಳಿಗೆ ಸಿಲಿಕಾನ್​ ಮೂಲಕ ಹೆಚ್ಚು ರಿಲಯಲಿಸ್ಟಿಕ್​ ಲುಕ್​ ನೀಡುತ್ತಾರೆ. ಅಂದಹಾಗೆ ವೈರಲ್​ ಆಗಿರುವ ಶಿಲ್ಪಕಲೆಯನ್ನು ಅಮೆರಿಕ ಎಟ್ಸಿಯಲ್ಲಿ 8,088.64 ಡಾಲರ್​ ಮಾರಾಟಕ್ಕೆ ಇಡಲಾಗಿದೆ ಮತ್ತು ಶಿಲ್ಪಕ್ಕೆ ‘ಅರ್ಮಡಿಲೊ’ ಎಂದು ಹೆಸರಿಸಲಾಗಿದೆ.

    ಇನ್ನು ಲೈರಾ ಮಾಗನುಕೊ ಅವರ ಇನ್​ಸ್ಟಾಗ್ರಾಂ ಖಾತೆಯಲ್ಲೂ ಇದೇ ಫೋಟೋವನ್ನು ಜುಲೈ 2019ರಲ್ಲಿ ಪೋಸ್ಟ್​ ಮಾಡಲಾಗಿದೆ. ಹೀಗಾಗಿ ಸದ್ಯ ಹರಿದಾಡುತ್ತಿರುವ ಸುದ್ದಿಗೂ ಫೋಟೋಗೂ ಯಾವುದೇ ಸಂಬಂಧವಿಲ್ಲ ಎಂಬುದು ಇದರಿಂದಲೇ ಗೊತ್ತಾಗುತ್ತದೆ. (ಏಜೆನ್ಸೀಸ್​)

    ಈ ಮೂವರು ಐಪಿಎಸ್​ ಅಧಿಕಾರಿಗಳು ಒಡಹುಟ್ಟಿದವರಾ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಹಿರಂಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts