More

    ನರೇಗಾ ಅನುಷ್ಠಾನದಲ್ಲಿ ಮಾರ್ಗಸೂಚಿ ಉಲ್ಲಂಘನೆ

    ಕೋಲಾರ: ಕರ್ತವ್ಯ ಲೋಪದ ಆರೋಪದಡಿ ಗ್ರಾಮ ಪಂಚಾಯಿತಿ ಅಧಿಕಾರಿಯನ್ನು ಅಮಾನತು ಮಾಡಿ ಜಿಪಂ ಉಪ ಕಾರ್ಯದರ್ಶಿ ಆದೇಶಿಸಿದ್ದಾರೆ.

    ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬೈರಗಾನಹಳ್ಳಿ ಗ್ರಾಪಂ ಪ್ರಭಾರ ಪಿಡಿಒ ಎಂ.ಎಸ್​.ಶ್ರೀನಿವಾಸರೆಡ್ಡಿ ನರೇಗಾ ಕಾಮಗಾರಿಗಳ ನಿರ್ವಹಣೆಯಲ್ಲಿ ವಿಲರಾಗಿದ್ದಾರೆ. ನರೇಗಾ ಯೋಜನೆಯಡಿ ಕೊತ್ತಹುಡ್ಯ ಗ್ರಾಮದಲ್ಲಿ ಗೋಕುಂಟೆ ನಿಮಾರ್ಣ ಮಾಡಿದ್ದು ಕಾಮಗಾರಿಗಳಲ್ಲಿ ನ್ಯೂನತೆಗಳು ಕಂಡುಬಂದಿವೆ.
    ಗ್ರಾಪಂ ವ್ಯಾಪ್ತಿಯ ಹೊಸಹುಡ್ಯ, ಮರಸನಹಳ್ಳಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ಮಾಡಿರುವ ಬಗ್ಗೆ ಯಾವುದೇ ರೀತಿ ದಾಖಲೆಗಳು ಲಭ್ಯವಿಲ್ಲ. ಕೂಲಿ ಕಾರ್ಮಿಕರಿಂದ ಕೆಲಸ ಮಾಡಿಸಿಲ್ಲ. ದಾಖಲೆಗಳಲ್ಲಿ ನಮೂದು ಮಾಡಿರುವಂತೆ ವಿವಿಧ ಕಾಮಗಾರಿಗಳ ಅಳತೆಗಳ ಪ್ರಕಾರ ಪ್ರಾಯೋಗಿಕವಾಗಿ ಕಾಣುತ್ತಿಲ್ಲ. ಪಂಚಾಯಿತಿ ಅಧಿಕಾರಿ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಿಂದ ಜಿಪಂ ಅಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿತ್ತು. ದೂರಿನಲ್ಲಿ ಆರೋಪಿಸಿರುವ ಅಂಶಗಳನ್ನು ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಜಿ.ಪಂ ಉಪ ಕಾರ್ಯದರ್ಶಿಗೆ ಸೂಚಿಸಿದ್ದರು.
    ಲೋಪಗಳು:
    ಅನುಷ್ಠಾನಗೊಂಡಿರುವ ಕಾಮಗಾರಿಯ ಅಳತೆಗಳನ್ನು ಪರಿಶೀಲಿಸಲಾಗಿ ಸದರಿ ಕಾಮಗಾರಿಯನ್ನು 23232.5 ಮೀಟರ್​ ಉದ್ದ, ಅಗಲ, ಎತ್ತರ ಎಂದು ನಮೂದು ಮಾಡಲಾಗಿದೆ. ಆದರೆ 14141.5 ಅಳತೆಗೆ ಕಾಮಗಾರಿ ಮಾಡಿ, 90,692 ರೂ.ಕೂಲಿ ವೆಚ್ಚ ಪಾವತಿ ಮಾಡಿರುವುದು ಕಂಡುಬಂದಿದೆ. ಕಾಮಗಾರಿಯ ಅಂದಾಜು ಪಟ್ಟಿಗೂ ಕಾಮಗಾರಿ ಅನುಷ್ಠಾನ್ಕೂ ಮತ್ತು ಅಳತೆ ಪುಸ್ತಕಕ್ಕೂ ಯಾವುದೇ ರೀತಿಯ ತಾಳೆಯಾಗಿಲ್ಲ. ಎನ್​ಎಂಆರ್​ ಸಂಖ್ಯೆ 10648ರಲ್ಲಿ ವಿ.ಗೀತಾ ಎಂಬ ಕೂಲಿ ಕಾರ್ಮಿಕರಿಗೆ ಹಾಜರಾತಿಯನ್ನು ನೀಡಿರುವುದಿಲ್ಲ. ಆದರೆ ಎಂಐಎಸ್​ನಲ್ಲಿ ಹಾಜರಾತಿ ನೀಡಿ ಕೂಲಿ ಪಾವತಿ ಮಾಡಲಾಗಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ. ಕಾಮಗಾರಿಯ ಅಳತೆಗಳನ್ನು ಪರಿಶೀಲಿಸಲಾಗಿ ಕಾಮಗಾರಿಯನ್ನು 600291 ಪಟ್ಟಿಯನ್ನು ತಯಾರಿಸಲಾಗಿದೆ. ಆದರೆ ಕಾಲುವೆ ಅಭಿವೃದ್ಧಿಗೆ 1842.5 ಮೀಟರ್​ನಷ್ಟು ಕಾಮಗಾರಿಗೆ ಅಂದಾಜು ಪಟ್ಟಿ ತಯಾರಿ ಎಂದು ಅಳತೆ ಪುಸ್ತಕದಲ್ಲಿ ನಮೂದು ಮಾಡಲಾಗಿದೆ. ಆದರೆ ನಮೂದು ಮಾಡಿರುವ ಅಳತೆ ಮಾಡುವುದನ್ನು ಬಿಟ್ಟು, ಕೇವಲ 100*25.1 ಮೀ. ಹೂಳು ತೆಗೆದಿರುತ್ತಾರೆ. ಈ ಕಾಮಗಾರಿಯಲ್ಲಿ ಅಕ್ರಮ ಎಸಗಿರುವುದು ಸಾಬೀತಾಗಿದೆ. ಕಾಮಗಾರಿಗಳ ಅನುಷ್ಠಾನದಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸದೇ ಬೇಜಾವಾಬ್ದಾರಿತನ ಮತ್ತು ರ್ನಿಲಕ್ಷ$್ಯ ತೋರಿರುವುದು ಕಂಡುಬಂದಿದೆ.
    ನ್ಯೂನತೆಗಳ ಸಂಬಂಧ ಕಾರಣ ಕೇಳಿ ನೋಟಿಸ್​ನ್ನು ಎಸ್​.ಎಂ.ಶ್ರೀನಿವಾಸರೆಡ್ಡಿಗೆ ಜಾರಿ ಮಾಡಿ ಪೂರಕ ದಾಖಲೆಗಳೊಂದಿಗೆ ಸಮಜಾಯಿಷಿ ಸಲ್ಲಿಸಲು ಸೂಚಿಸಲಾಗಿತ್ತು. ಶ್ರೀನಿವಾಸರೆಡ್ಡಿ ಸಲ್ಲಿಸಿರುವ ಸಮಜಾಯಿಷಿ ಪರಿಶೀಲಿಸಿದಾಗ ಯಾವುದೇ ಪೂರಕ ದಾಖಲೆಗಳೊಂದಿಗೆ ಸಲ್ಲಿಸದೇ ಇರುವುದರಿಂದ ಒಪ್ಪಲು ಸಾಧ್ಯವಿಲ್ಲ. ಸಮರ್ಪಕವಾಗಿ ಕಾಮಗಾರಿಗಳನ್ನು ನಿರ್ವಹಿಸದೇ ಮಾರ್ಗಸೂಚಿಯನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಆದ್ದರಿಂದ ಸದರಿ ನೌಕರರ ವಿರುದ್ಧ ಇರುವ ಆರೋಪಗಳ ಸಂಬಂಧ ಇಲಾಖೆ ವಿಚಾರಣೆ ಬಾಕಿ ಇರಿಸಿ ಸರ್ಕಾರಿ ಸೇವೆಯಿಂದ ಅಮಾನತುಪಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts