More

    ‘ಲಂಕಾಸುರ’ನಾದ ವಿನೋದ್ ಪ್ರಭಾಕರ್ …

    ಬೆಂಗಳೂರು: ವಿನೋದ್​ ಪ್ರಭಾಕರ್​ ಅಭಿನಯದ ‘ಫೈಟರ್​’, ‘ಶ್ಯಾಡೋ’, ‘ರಾಬರ್ಟ್​​’ ಮುಂತಾದ ಚಿತ್ರಗಳು ಬಿಡುಗಡೆಯಾಗಬೇಕಿದೆ. ಈ ಮಧ್ಯೆ, ವಿನೋದ್​ ಇನ್ನೊಂದು ಹೊಸ ಚಿತ್ರವನ್ನು ಸದ್ದಿಲ್ಲದೆ ಅಭಿನಯಿಸಿದ್ದು, ಈ ಚಿತ್ರ ಸಂಕ್ರಾಂತ್ರಿಗೆ ಪ್ರಾರಂಭವಾಗಲಿದೆ.

    ಇದನ್ನೂ ಓದಿ: ಹನಿಮೂನ್​ ಪ್ರವಾಸಕ್ಕೆ 1 ರೂಪಾಯಿ ಖರ್ಚು ಮಾಡಿಲ್ವಂತೆ ಕಾಜಲ್​ ದಂಪತಿ: ಐಷಾರಾಮಿ ಸೌಲಭ್ಯ ಫ್ರೀ ಸಿಕ್ಕಿದ್ಹೇಗೆ?

    ವಿನೋದ್​ ಅಭಿನಯದ ಹೊಸ ಚಿತ್ರದ ಹೆಸರು ‘ಲಂಕಾಸುರ’. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಲಾಕ್​ಡೌನ್​ಗೂ ಮುನ್ನವೇ ಈ ಚಿತ್ರ ಪ್ರಾರಂಭವಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದ ತಡವಾದ ಈ ಚಿತ್ರ ಇದೀಗ ಸೆಟ್ಟೇರುವುದಕ್ಕೆ ಸಜ್ಜಾಗಿದೆ. ಮುಂದಿನ ವರ್ಷ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಚಿತ್ರ ಪ್ರಾರಂಭವಾಗಲಿದೆ.

    ‘ಲಂಕಾಸುರ’ ಚಿತ್ರವನ್ನು ಎ.ಎಂ.ಎಸ್​. ಪ್ರೊಡಕ್ಷನ್ಸ್​ ಸಂಸ್ಥೆಯಡಿ ಹೇಮಾವತಿ ಮುನಿಸ್ವಾಮಿ ಎನ್ನುವವರು ನಿರ್ಮಿಸುತ್ತಿದ್ದಾರೆ. ಇನ್ನು, ಈ ಹಿಂದೆ ‘ಮೂರ್ಕಲ್​ ಎಸ್ಟೇಟ್​’ ಎಂಬ ಚಿತ್ರವನ್ನು ನಿರ್ದೇಶಿಸದ್ದ ಪ್ರಮೋದ್​ ಕುಮಾರ್, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಇದು ಇವರ ನಿರ್ದೇಶನದ ಎರಡನೆಯ ಚಿತ್ರ.

    ಇದನ್ನೂ ಓದಿ: ಒನ್ ಟೇಕ್ ಸಿನಿಮಾ; ಹೊಸ ದಾಖಲೆ ಬರೆದ ರಕ್ತಗುಲಾಬಿ…

    ಪಾರ್ವತಿ ಅರುಣ್​ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದ ಟೈಟಲ್​ ಇತ್ತೀಚೆಗೆ ಎ2 ಮ್ಯೂಸಿಕ್​ ಚಾನಲ್​ನಲ್ಲಿ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ಮೂರು ದಿನಗಳಲ್ಲಿ ಅತೀ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ. ಈ ಚಿತ್ರಕ್ಕೆ ವಿಜೇತ್​ ಕೃಷ್ಣ ಸಂಗೀತ ಸಂಯೋಜಿಸಿದ್ದು, ಸುಜ್ನಾನ್​ ಛಾಯಾಗ್ರಹಣ ಮಾಡಲಿದ್ದಾರೆ. ಚಿತ್ರದ ಇನ್ನುಳಿದ ಕಲಾವಿದರು ಆಯ್ಕೆ ಸದ್ಯದಲ್ಲೇ ಆಗಲಿದೆ.

    ಮೇಘನಾ ರಾಜ್​ ಮತ್ತು ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts