More

    ಮೂರು ವರ್ಷಗಳಲ್ಲಿ ಹಳ್ಳಿಗಳು ಹೈಸ್ಪೀಡ್​ ಇಂಟರ್ನೆಟ್​ ಹೊಂದಿರುತ್ತವೆ: ಪ್ರಧಾನಿ ಮೋದಿ

    ನವದೆಹಲಿ: ಭವಿಷ್ಯದಲ್ಲಿ ಕೋಟ್ಯಾಂತರ ಭಾರತೀಯರನ್ನು ಮತ್ತಷ್ಟು ಸಶಕ್ತಗೊಳಿಸಲು 5ಜಿ ಸಾಧನವನ್ನು ಸಮಯೋಚಿತವಾಗಿ ಪರಿಚಯಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ಭಾರತೀಯ ದೂರ ಸಂಪರ್ಕ ಇಲಾಖೆ ಮತ್ತು ಸೆಲ್ಯುಲರ್​ ಆಪರೇಟರ್ಸ್​ ಅಸೋಸಿಯೇಷನ್ ಆಫ್​ ಇಂಡಿಯಾ (ಸಿಒಎಐ) ಆಯೋಜಿಸಿರುವ ಇಂಡಿಯಾ ಮೊಬೈಲ್​ ಕಾಂಗ್ರೆಸ್​ (ಐಎಂಸಿ) 2020 ವರ್ಟುವಲ್​ ಸಮಾರಂಭವನ್ನು ಉದ್ಘಾಟಿಸಿ ಪ್ರಧಾನಿ ಮೋದಿ ಮಾತನಾಡಿದರು. ​

    ನಿಮ್ಮ ಸಂಶೋಧನೆ ಮತ್ತು ಸಾಮರ್ಥ್ಯದಿಂದಲೇ ಕರೊನಾ ಸಾಂಕ್ರಮಿಕ ಕಾಲದಲ್ಲೂ ವಿಶ್ವ ಎಂದಿನಂತೆಯೇ ಕಾರ್ಯನಿರ್ವಹಿಸುತ್ತಿದೆ. ತಾಯಿ ಮತ್ತು ಮಗ ಬೇರೆ ಬೇರೆ ನಗರಗಳಲ್ಲಿದ್ದರೂ ಒಬ್ಬರನೊಬ್ಬರು ಸಂಪರ್ಕಿಸಲು ನಿಮ್ಮ ಶ್ರಮವೇ ಕಾರಣ. ಹಾಗೇ ಓರ್ವ ವಿದ್ಯಾರ್ಥಿ ತರಗತಿಗೆ ಹೋಗದೆ ಶಿಕ್ಷಕರಿಂದ ಕಲಿಯುತ್ತಿರುವುದು ಕೂಡ ನಿಮ್ಮ ಶ್ರಮದಿಂದಲೇ ಎಂದು ಸಮಾರಂಭದಲ್ಲಿ ಟೆಕ್ಕಿಗಳನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರಧಾನಿ ಮಾತನಾಡಿದರು.

    ಇದನ್ನೂ ಓದಿ: ಅಮೆರಿಕದಲ್ಲಿರೋ ತೆಲುಗು ದಂಪತಿ ನಂಬಿದ ವಿದ್ಯಾರ್ಥಿಗಳಿಗೆ 10 ಕೋಟಿ ರೂ. ಪಂಗನಾಮ..!

    ತಾಂತ್ರಿಕ ಉನ್ನತೀಕರಣದಿಂದಾಗಿ ಹ್ಯಾಂಡ್​ಸೆಟ್​ ಮತ್ತು ಗಾಡ್ಜೆಟ್​ಗಳನ್ನು ಆಗಾಗ ಬದಲಿಸುವ ಸಂಸ್ಕೃತಿಯನ್ನು ನಾವಿಂದು ಹೊಂದಿದ್ದೇವೆ. ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ನಿಭಾಯಿಸುವ ಮತ್ತು ವೃತ್ತಾಕಾರದ ಆರ್ಥಿಕತೆಯನ್ನು ಸೃಷ್ಟಿಸುವ ಉತ್ತಮ ಮಾರ್ಗವನ್ನು ಯೋಚಿಸಲು ಉದ್ಯಮವು ಕಾರ್ಯಪಡೆ ರಚಿಸಬಹುದೇ? ಎಂದು ಪ್ರಶ್ನಿಸಿದರು.

    ಕರೊನಾ ಸಾಂಕ್ರಮಿಕ ಸಮಯದಲ್ಲೂ ತ್ವರಿತವಾಗಿ ಬಡವರಿಗೆ ಸಹಾಯ ಮಾಡಿರುವುದು ಮತ್ತು ಕೋಟ್ಯಾಂತರ ಭಾರತೀಯರಿಗೆ ಬಿಲಿಯನ್ಸ್​ ಡಾಲರ್​ ಸೌಲಭ್ಯವನ್ನು ಇಂದು ಒದಗಿಸಿದ್ದೇವೆ ಅಂದರೆ ಅದಕ್ಕೆ ಕಾರಣ ಮೊಬೈಲ್​ ತಂತ್ರಜ್ಞಾನ. ಪ್ರತಿಯೊಂದು ಹಳ್ಳಿಯು ಇನ್ನು ಮೂರು ವರ್ಷಗಳಲ್ಲಿ ಹೈಸ್ಪೀಡ್​ ಫೈಬರ್​ ಆಪ್ಟಿಕ್​ ಡಾಟಾ ಸಂಪರ್ಕವನ್ನು ಹೊಂದಿರುತ್ತದೆ ಎಂದು ಪ್ರಧಾನಿ ಹೇಳಿದರು. (ಏಜೆನ್ಸೀಸ್​)

    ಡಿಟಿಎಚ್​ ಸೇವೆಗಳನ್ನು ನಿಯಮದ ಚೌಕಟ್ಟಿಗೆ ತರುವ ಉದ್ದೇಶದ ಕನ್ಸಲ್ಟೇಶನ್ ಪೇಪರ್​ ಪ್ರಕಟಿಸಿದೆ ಟ್ರಾಯ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts