More

    ಸೌದೆಗಾಗಿ ಮರ ಕಡಿಯಲು ಬಿಡೋಲ್ಲ ಎಂದು ಗ್ರಾಮಸ್ಥರ ಪ್ರತಿಭಟನೆ

    ಬೆಂಗಳೂರು : ಸರ್ಕಾರಿ ಖರಾಬು ಜಮೀನಿನಲ್ಲಿ ಗ್ರಾಮಸ್ಥರು ಬೆಳೆಸಿರುವ ಮರಗಳನ್ನು ಕರೊನಾದಿಂದ ಮೃತಪಟ್ಟವರ ದೇಹಗಳನ್ನು ಸುಡಲು ಸೌದೆಗಾಗಿ ಅಧಿಕಾರಿಗಳು ಕಟಾವು ಮಾಡಲು ಹೊರಟಿದ್ದಾರೆ ಎಂದು ಚಿಕ್ಕತ್ತತ್ತಮಂಗಲ ಗ್ರಾಮಸ್ಥರು ಆರೋಪಿಸಿದ್ದಾರೆ. ಮರ ಕಡಿಯುವುದರೊಂದಿಗೆ ಸ್ಥಳವನ್ನು ಸ್ಮಶಾನ ಮಾಡ್ತಾರೆ ಎಂದು ದೂರಿರುವ ಗ್ರಾಮಸ್ಥರು, ಸ್ಥಳದಲ್ಲೇ ಮೊಕ್ಕಾಂ ಹೂಡಿ ಪ್ರತಿಭಟಿಸುತ್ತಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಚಿಕ್ಕತತ್ತಮಂಗಲ ಗ್ರಾಮದ ಸರ್ವೆ ನಂ 1 ರ ಬಳಿ ಇರುವ ಮರಗಳನ್ನು ಸೌದೆಗಾಗಿ ಕಡಿಯಲು ಕಂದಾಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ, ಮರಗಳನ್ನು ಕಡಿದು ಸೌದೆಗಳಿಗೆ ಬಳಸಿಕೊಳ್ಳುವುದಲ್ಲದೆ, ಗ್ರಾಮದ ಸ್ಥಳವನ್ನು ಸ್ಮಶಾನ ಮಾಡಲು ಹೊರಟಿದ್ದಾರೆ ಎಂದು ಹೇಳಲಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಜನರು ಜಮಾ ಆಗಿದ್ದಾರೆ.

    ಇದನ್ನೂ ಓದಿ: ಕರೊನಾ ರೂಲ್ಸ್​ ಬ್ರೇಕ್​: ಮದುವೆ ಮಾಡುವಂತಿಲ್ಲ ಎಂಬ ಆದೇಶ ಇದ್ದರೂ ಮಾಜಿ ಶಾಸಕರೇ ಭಾಗಿ!

    ಜನರೇ ಬೆಳೆಸಿರುವ ಮರಗಳನ್ನು ಯಾವುದೇ ಕಾರಣಕ್ಕೂ ಕಡಿಯಲು ಬಿಡೋದಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರ ಕಡಿಯಲು ಅಧಿಕಾರಿಗಳು ಬಾರದಂತೆ ಮೊಕ್ಕಾಂ ಹೂಡಿರುವ ಗ್ರಾಮಸ್ಥರು, ಪ್ರಾಣ ಬೇಕಾದ್ರೂ ಕೊಡ್ತೀವಿ, ಮರಗಳನ್ನು ಕಡಿಯಲು ಬಿಡೋದಿಲ್ಲ ಅಂತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

    ಕೆಲಸ ಮಾಡುವವರೇ ತಪ್ಪು ಮಾಡುವುದು : ಅನುಪಂ ಖೇರ್​ ಮಾರ್ಮಿಕ ನುಡಿ

    ಗೋವಾ ಆಕ್ಸಿಜನ್ ಗೊಂದಲ : ಒಂದೇ ಆಸ್ಪತ್ರೆಯಲ್ಲಿ 4 ದಿನಗಳಲ್ಲಿ 74 ಸಾವು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts