More

    ಹಳ್ಳಿ ಸಮಸ್ಯೆ ಅರಿಯಲು ಶಿಬಿರ ಉಪಯುಕ್ತ

    ಸಂಡೂರು: ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಸಮಸ್ಯೆಗಳನ್ನು ಅರಿಯಲು ಸಮಾಜಕಾರ್ಯ ಅಧ್ಯಯನ ಶಿಬಿರ ಉಪಯುಕ್ತ ಎಂದು ಸಿಡಿಪಿಒ ಎಳೆ ನಾಗಪ್ಪ ತಿಳಿಸಿದರು.

    ಎಸ್.ಓಬಳಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ ಎಂಎಸ್‌ಡಬ್ಲುೃ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಮಾಜಕಾರ್ಯ ಅಧ್ಯಯನ ಶಿಬಿರದಲ್ಲಿ ಮಾತನಾಡಿದರು. ತರಗತಿಗಳಲ್ಲಿ ಕಲಿತ ವಿಷಯಗಳನ್ನು ಸಮಾಜದ ಜನರೊಂದಿಗೆ ಬೆರತು ಪ್ರಾತ್ಯಕ್ಷಿಕ ಮತ್ತು ಪ್ರಾಯೋಗಿಕವಾಗಿ ವಿಷಯಮಂಡನೆ ಮಾಡುವುದನ್ನು ಕಾರ್ಯ ರೂಪಕ್ಕೆ ತರುವುದು ಸವಾಲಿನ ಕೆಲಸವಾಗಿದೆ ಎಂದರು.

    ಇದನ್ನೂ ಓದಿ:
    ಸಂಜೆ ಊರಿನ ಪ್ರಮು https://www.vijayavani.net/chandrayaan-3-kottoor-source-scientist-vessel-message-carrier-ruwari-dr-darukesh

    ಬೀದಿಗಳಲ್ಲಿ ಎಂಎಸ್‌ಡಬ್ಲುೃ ವಿಭಾಗದ 2ನೇ ವರ್ಷದ ವಿದ್ಯಾರ್ಥಿಗಳು ಸಂಚರಿಸಿ ಜಾಗೃತಿ ಮೂಡಿಸಿದರು. ಜು.22ರವರೆಗೆ 23-34ನೇ ಶೈಕ್ಷಣಿಕ ಸಾಲಿನ ಕಾರ್ಯಕ್ರಮಗಳು ನಡೆಯಲಿವೆ.

    ಗ್ರಾಪಂ ಅಧ್ಯಕ್ಷ ಪಂಚಪ್ಪ, ಸಮಾಜ ಕಾರ್ಯ ಅಧ್ಯಯನ ಶಿಬಿರದ ಸಂಯೋಜಕಿ ಕೆ.ಜಿ.ಸುಮಾ, ಸದಸ್ಯರಾದ ಬಿ.ಹನುಮಂತಪ್ಪ, ಶಿವರುದ್ರಮ್ಮ ಅಂಜಿನಪ್ಪ, ಎಸ್ಡಿಎಂಸಿ ಅಧ್ಯಕ್ಷ ಓಬಯ್ಯ, ಸ್ನಾತಕೋತ್ತರ ಕೇಂದ್ರದ ಶಿಕ್ಷಕ ಹನುಮಂತಪ್ಪ, ತೋತ್ಯಾನಾಯ್ಕ, ಮುಖಂಡರಾದ ಜಗ್ಗು ಮುನಿಯಪ್ಪ, ಜಿ.ಬಸವರಾಜ, ಎ.ಪಿ.ಬೀಮಪ್ಪ, ಜಿನ್ನದ ಮಲಿಯಪ್ಪ, ಅಂಗನವಾಡಿ ಕಾರ್ಯಕರ್ತೆ ಎಂ.ಎಸ್.ಶಿವಮಾಲಾ, ಆಶಾ ಕಾರ್ಯಕರ್ತೆ ಅನಿತಮ್ಮ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts