More

    ಮೇಲ್ಮನೆಯಲ್ಲಿ 3 ವಿಜಯವಾಣಿ ವರದಿಗಳ ಪ್ರತಿಧ್ವನಿ

    ಬೆಂಗಳೂರು:
    ಬರದ ತೀವ್ರತೆ ಬಗ್ಗೆ ವಿಜಯವಾಣಿ ಪ್ರಕಟಿಸಿದ್ದ ವರದಿ ಮೇಲ್ಮನೆಯಲ್ಲಿ ಪ್ರತಿಧ್ವನಿಸಿತು.
    ಶೂನ್ಯ ವೇಳೆಯಲ್ಲಿ ಪಿ.ಎಚ್.ಪೂಜಾರ್ ಬರದ ವಿಷಯ ಪ್ರಸ್ತಾಪಿಸಿ, ವಿಜಯವಾಣಿ ವರದಿಯನ್ನು ಉಲ್ಲೇಖಿಸಿ ಮಾತನಾಡಿದರು. ಈ ಬಗ್ಗೆ ಉತ್ತರ ಕೊಡಿಸುವ ಭರವಸೆಯನ್ನು ಸಭಾನಾಯಕ ಬೋಸರಾಜು ನೀಡಿದರು.

    ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಾತಿಗೆ ಗರ, ಪಿಡಿಒಗಳ ಮೇಲೆ ಗದಾ ಪ್ರಹಾರ ಎಂದು ಪ್ರಕಟವಾಗಿದ್ದ ವಿಜಯವಾಣಿ ವರದಿಯನ್ನು ಪ್ರಸ್ತಾಪಿಸಿದ ಮಂಜುನಾಥ ಭಂಡಾರಿ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು. ಈ ಬಗ್ಗೆ ಸಭಾನಾಯಕರಿಂದ ಉತ್ತರ ಕೊಡಿಸುವುದಾಗಿ ಸಭಾನಾಯಕರು ಭರವಸೆ ನೀಡಿದರು.

    ಹಸಿವಿನಿಂದ ಮೃತಪಟ್ಟ ಯುವಕ
    ಪ್ರಕರಣವೂ ಮೇಲ್ಮನೆಯಲ್ಲಿ ಪ್ರಸ್ತಾಪ
    ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನಲ್ಲಿ ಯುವಕ ಬಸವರಾಜು ವೆಂಕಟನ ಆತ್ಮಹತ್ಯೆಯು ಹಸಿವಿನಿಂದ ತುತ್ತು ಅನ್ನವು ಸಿಗದೆ ಮೃತ ಪಟ್ಟಿರುವುದಾಗಿ ಮಾಧ್ಯಮದಲ್ಲಿ ವರದಿಯಾಗಿದೆ ಎಂದು ಪರಿಷತ್ ವಿಪಕ್ಷ ಮುಖ್ಯ ಸಚೇತಕ ರವಿಕುಮಾರ್ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು.
    ಹೊಟ್ಟೆಗೆ ತುತ್ತು ಅನ್ನವೂ ಸಿಗದೆ ಉಸಿರು ಚೆಲ್ಲುವ ಸ್ಥಿತಿ 21ನೇ ಶತಮಾನದಲ್ಲೂ ಈ ಸಮಾಜದಲ್ಲಿ ಇದೆ ಎಂಬುದು ಇಂದಿನ ಸರಕಾರವು ಬಡವರನ್ನು ಯಾವ ರೀತಿ ಪರಿಗಣಿಸುತ್ತಿದೆ ಎಂಬುದು ಉದಾರಣೆಯಾಗಿದೆ ಎಂದರು.
    ಬೆಂಗಳೂರಿನಲ್ಲಿ ಡಿಸಿಎಂ ಎದುರು ಒಬ್ಬ ಮಹಿಳೆಯು ಅನ್ನ ಬಾಗ್ಯ ಯೋಜನೆ ಅನ್ವಯ ಕೇವಲ 3 ಕೆ.ಜಿ ಅಕ್ಕಿ ನೀಡಲಾಗುತ್ತಿದ್ದು ಹೋಸ ರೇಶನ ಕಾರ್ಡ ಮಾಡಲು ರೂ.7 ಸಾವಿರ ರೂಳನ್ನು ಕೇಳುತ್ತಿರುವುಗಾಗಿ ಹೇಳಿದ್ದಾರೆ. ಈ ಸರಕಾರವು ರಾಜ್ಯದ ಬಡವರ ಹಸಿವು ನೀಗಿಸಲು 10 ಕೆ.ಜಿ ಅಕ್ಕಿ ನೀಡುವುದಾಗಿ ಪೊಳ್ಳು ಭರವಸೆ ನೀಡಿರುವುದು ಮೇಲಿನ ಎರಡು ಪ್ರಕರಣದಲ್ಲಿ ಸಾಬಿತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಹಸಿವಿನಿಂದ ಸತ್ತಿಲ್ಲ: ಮುನಿಯಪ್ಪ
    ರಾಜ್ಯದಲ್ಲಿ ಯಾರು ಹಸಿವಿನಿಂದ ಸತ್ತಿಲ್ಲ, ಅದು ತಪ್ಪು ಮಾಹಿತಿ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಉತ್ತರಿಸಿದ್ದಾರೆ.
    ರಾಜ್ಯ ಸರ್ಕಾರದ ಗ್ಯಾರಂಟಿ ಅನ್ನಭಾಗ್ಯ ಯೋಜನೆಗೆ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದ ಸಿಗಲಿಲ್ಲ ಎಂದಿದ್ದಾರೆ.
    ಹೀಗಾಗಿ ಅಕ್ಕಿ ಬದಲು ಪ್ರತಿ ಕೆಜಿಗೆ 34 ರೂ ಹಣ ಡಿಬಿಟಿ ಮೂಲಕ ಜನರ ಖಾತೆಗೆ ಹಾಕ್ತಿದ್ದೇವೆ.
    ಆದರೆ ಕೇಂದ್ರ ಸರ್ಕಾರ 29 ರೂಗೆ ಭಾರತ್ ರೈಸ್ ಯೋಜನೆ ಮೂಲಕ ಅಕ್ಕಿ ವಿತರಣೆ ಮಾಡುತ್ತಿದೆ.
    ಕೇಂದ್ರ ಸರ್ಕಾರ ನಷ್ಟವನ್ನ ಮಾಡಿಕೊಂಡು ಅಕ್ಕಿ ವಿತರಣೆ ಮಾಡುತ್ತಿದೆ. ದೇಶವನ್ನ ಆರ್ಥಿಕ ದಿವಾಳಿಗೆ ತೆಗೆದುಕೊಂಡು ಹೋಗುವ ಕೆಲಸ ಆಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts