More

    ವಿಜೃಂಭಣೆಯ ದೇವಿರಮ್ಮ ಜಾತ್ರೆ

    ಪಾಂಡವಪುರ: ತಾಲೂಕಿನ ಚಿಕ್ಕಾಡೆ ಗ್ರಾಮದ ಹೊರವಲಯದಲ್ಲಿರುವ ಕುಂತಿಬೆಟ್ಟದ ತಪ್ಪಲಿನಲ್ಲಿ ನೆಲೆಯಾಗಿರುವ ದೇವಿರಮ್ಮನ ಜಾತ್ರೆ ಅದ್ದೂರಿಯಾಗಿ ನಡೆಯಿತು.

    ತಾಲೂಕಿನ ಪಟ್ಟಸೋಮನಹಳ್ಳಿ, ಹಿರೇಮರಳಿ, ಚಿಕ್ಕಾಡೆ ಮತ್ತು ದೇವೇಗೌಡನಕೊಪ್ಪಲು ಗ್ರಾಮಗಳ ಎಲ್ಲ ಸಮುದಾಯದವರು ಒಗ್ಗೂಡಿ ದೇವಿರಮ್ಮ ಜಾತ್ರೆಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

    ಸೋಮವಾರ ಸಂಜೆ ಸಂಪ್ರದಾಯದಂತೆ ಪಟ್ಟಸೋಮನಹಳ್ಳಿ ಗ್ರಾಮದವರು ದೇವಿಯ ತಾಮ್ರದ ಎರಡು ಹೆಬ್ಬಾರೆ ಕಟ್ಟಿಕೊಂಡು ಗ್ರಾಮದಿಂದ ಕುಂತಿಬೆಟ್ಟಕ್ಕೆ ತಂದು ಹಿರೇಮರಳಿ ಗ್ರಾಮಸ್ಥರಿಗೆ ಒಪ್ಪಿಸಿದರು. ಬಳಿಕ ಕುಂತಿಬೆಟ್ಟದಲ್ಲಿ ಹಿರೇಮರಳಿ ಗ್ರಾಮಸ್ಥರು ಹೆಬ್ಬಾರೆಗೆ ಮೊದಲ ಪೂಜೆ ಸಲ್ಲಿಸಿದರು.

    ಬಳಿಕ ಕಾಚೇನಹಳ್ಳಿ ಮಾರಮ್ಮ ದೇವಸ್ಥಾನದಲ್ಲಿ ದೇವೇಗೌಡನಕೊಪ್ಪಲು ಗ್ರಾಮಸ್ಥರು ಹೆಬ್ಬಾರೆಯನ್ನು ಹೂವು, ಹಣ್ಣುಗಳಿಂದ ಅಲಂಕರಿಸಿ ಅಲ್ಲಿಂದ ಚಿಕ್ಕಾಡೆಗೆ ತಲುಪಿಸಿದರು. ಚಿಕ್ಕಾಡೆ ಗ್ರಾಮ ತಲುಪುತ್ತಿದ್ದಂತೆ ಗ್ರಾಮಸ್ಥರು ಹೆಬ್ಬಾರೆ ಹೊತ್ತು ಇಡೀ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು.

    ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಿ, ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಮಂಗಳವಾರ ಬೆಳಗ್ಗೆ ಹೆಬ್ಬಾರೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts