More

    ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ವಿತರಣೆ

    ಕೊಡೇಕಲ್: ಕರೊನಾ ತಡೆಗಟ್ಟಲು ವಿವಿಧ ತಂಡಗಳೊಂದಿಗೆ ಶ್ರಮಿಸುತ್ತಿರುವ ಕೊಡೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕೊನೆಗೂ ಆರೋಗ್ಯ ಇಲಾಖೆ ಮಾಸ್ಕ್ ನೀಡುವ ಮೂಲಕ ಸ್ಪಂದಿಸಿದೆ.

    ಗ್ರಾಮೀಣ ಕಾರ್ಯ ಪಡೆ ಸೇರಿ ಜಿಲ್ಲಾಡಳಿತದ ವಿವಿಧ ತಂಡಗಳೊಂದಿಗೆ ಕಾರ್ಯನಿರ್ವಹಿಸುತ್ತಾ ಕೋವಿಡ್-19 ತಡೆಗೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಸರ ನೀಡದ ಹಿನ್ನೆಲೆಯಲ್ಲಿ ತೊಂದರೆ ಅನುಭವಿಸುವಂತಾಗಿತ್ತು. ಈ ಕುರಿತು ಸೋಮವಾರ ವಿಜಯವಾಣಿ ಸಂಚಿಕೆಯಲ್ಲಿ `ಆಶಾ ಕಾರ್ಯಕರ್ತೆಯರಿಗಿಲ್ಲ ಮಾಸ್ಕ್’ ಎಂಬ ಶೀಷರ್ಿಕೆಯಡಿ ಪ್ರಕಟಗೊಂಡ ವರದಿಗೆ ಸ್ಪಂದಿಸಿರುವ ಕೊಡೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪವನರಾವ ಅವರು ಕಾರ್ಯನಿರ್ವಹಿಸುತ್ತಿರುವ 49 ಜನ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ಒದಗಿಸಿದ್ದಾರೆ.

    ನಂತರ ಮಾತನಾಡಿದ ಡಾ. ಪವನರಾವ ಆಶಾ ಕಾರ್ಯಕರ್ತೆಯರು ಕೆಲಸ ಮಾಡುವ ಪರಿ ನಿಜಕ್ಕೂ ಶ್ಲಾಘನೀಯ. ಮಾಸ್ಕ್ಗಳ ಕೊರತೆಯಿಂದ ನಮ್ಮ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ನೀಡಿರಲಿಲ್ಲ . ಸದ್ಯ 50 ಮಾಸ್ಕ್ಗಳನ್ನು ತರಿಸಿ ಮೊದಲು ಆಶಾ ಕಾರ್ಯಕರ್ತೆಯರಿಗೆ ನೀಡಲಾಗಿದೆ ಎಂದು ಹೇಳಿದರು. ಆಯುಷ್ ವೈದ್ಯೆ ಡಾ.ಸೀಮಾ ಕೋರಿ, ಮಹಿಬೂಬ್ ನಾಲತವಾಡ, ಚನ್ನಬಸ್ಸು ನಾಲತವಾಡ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts