More

    ವಿಜಯವಾಣಿ ವಿದ್ಯಾರ್ಥಿಮಿತ್ರದಿಂದ ಉದ್ಯೋಗಾವಕಾಶ

    ಸರ್ಜಾಪುರ: ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಆರ್ಥಿಕ, ರಾಜಕೀಯ, ಆಡಳಿತಾತ್ಮಕವಾಗಿ ಉನ್ನತ ಹುದ್ದೆ ಪಡೆಯಲು ವಿಜಯವಾಣಿಯ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ಸಹಕಾರಿಯಾಗಿದೆ ಎಂದು ಗ್ರಾಪಂ ಅಧ್ಯಕ್ಷ ಎಸ್.ವಿ ಶ್ರೀನಿವಾಸ್ ಬುಡಗಪ್ಪ ಹೇಳಿದರು.


    ಪಟ್ಟಣದ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರೌಢಶಾಲೆಯಲ್ಲಿ ಶುಕ್ರವಾರ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ವಿತರಿಸಿ ಮಾತನಾಡಿದರು.


    ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಮುಂದಾಗಬೇಕು. ಬಡ ಮಕ್ಕಳಿಗೆ ವಿದ್ಯಾಭ್ಯಾಸ ಸಹಕಾರ ನೀಡುವ ದೃಷ್ಟಿಯಿಂದ ಅಧಿಕಾರಾವಧಿಯಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಎಂದರು.


    ಪಿಡಿಒ ಸುಭಾನ್‌ಖಾನ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಬಹುತೇಕ ವಿದ್ಯಾರ್ಥಿಗಳು ಆರ್ಥಿಕವಾಗಿ ಸದೃಢವಾಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಜಾಪುರ ಗ್ರಾಪಂನಿಂದ ಪ್ರತಿ ವಿದ್ಯಾರ್ಥಿಗೂ ಉಚಿತವಾಗಿ ಸಂಚಿಕೆ ವಿತರಿಸಲು ತೀರ್ಮಾನಿಸಲಾಗಿದೆ ಎಂದರು.


    ಮುಖ್ಯಶಿಕ್ಷಕ ಡಾ.ಎಂ.ರವೀಂದ್ರರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಲು ದೈನಂದಿನ ಪಾಠದ ಜತೆಗೆ ವಿದ್ಯಾರ್ಥಿ ಮಿತ್ರ ಸಹಕಾರಿಯಾಗಿದೆ. ಈ ಹಿಂದೆ ಶಾಲೆಯ ವಿದ್ಯಾರ್ಥಿ ಆದಿತ್ಯ ಎಂಬುವ ವಿದ್ಯಾರ್ಥಿ ನಿತ್ಯ ಪಾಠದ ಜತೆಗೆ ವಿದ್ಯಾರ್ಥಿ ಮಿತ್ರ ಅಭ್ಯಾಸ ಮಾಡಿದ ಪರಿಣಾಮವಾಗಿ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನಕ್ಕೆ ಗಳಿಸಿದ್ದಾನೆ. ಇದಕ್ಕೆ ಗ್ರಾಪಂನ ಮುಂದಾಲೋಚನೆಗಳು ಕಾರಣವಾಗಿದೆ. ಗ್ರಾಪಂ ಸಹಕಾರಿ ಹೀಗೆ ಮುಂದುವರಿಯಲಿ ಎಂದು ಹಾರೈಸಿದರು.
    ಸದಸ್ಯರಾದ ಕಲಾವತಿ ಮೂರ್ತಿಕುಮಾರ್, ರೇಣುಕಮ್ಮ, ಲಲಿತಮ್ಮ, ಸಿಬ್ಬಂದಿ ಸೋಮಶೇಖರ್, ಮುನಿರಾಜು, ಲಕ್ಷ್ಮಣ್, ಅಬ್ಬಯ್ಯ, ಶಿಕ್ಷಕರಾದ ಬಿ.ಎನ್ ಮಂಜುಳಾ, ಜ್ಯೋತಿ, ಬಿ.ಎಂ ಹರೀಶ್, ಪಾಪಣ್ಣ, ರಮಾಮಣಿ, ಕೆ.ಶೈಲಾಜ, ಜಗದೀಶ್, ಶೈಲಜಾ, ಮದುಮಾಲ, ಸರಸ್ವತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts