More

    ಸಾವಿತ್ರಿ ಮಹಾಕಾವ್ಯದ ಮಹೋನ್ನತ ಅನುವಾದ

    ಮಹರ್ಷಿ ಅರವಿಂದರು ಭಾರತೀಯ ಮಹಾಯೋಗಿಗಳಲ್ಲಿ ಒಬ್ಬರು. ಅವರು ಕವಿ, ವಿದ್ವಾಂಸ, ಮಹಾಯೋಗಿ, ಸ್ವಾತಂತ್ರ್ಯ ಹೋರಾಟಗಾರ. ಬಂಗಾಲದಲ್ಲಿ ಜನಿಸಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ, ಅನಂತರ ಪಾಂಡಿಚೇರಿಯಲ್ಲಿ ಉಳಿದು ದಿವ್ಯದರ್ಶನ ಪಡೆದು ಸಾವಿತ್ರಿ ಮಹಾಕಾವ್ಯದ ಮಹೋನ್ನತ ಅನುವಾದಹತ್ತಾರು ಕೃತಿಗಳನ್ನು ರಚಿಸಿದರು. ಅವರ ಕೃತಿಗಳಲ್ಲಿ ‘ದಿ ಲೈಫ್’, ‘ಡಿವೈನ್’ ಮತ್ತು ‘ಸಾವಿತ್ರಿ’ ಆಧುನಿಕ ಭಾರತೀಯ ಸಾಹಿತ್ಯದ ಹಿಮಾಲಯ ಸದೃಶ ಅನುಪಮ ಕೃತಿಗಳು. ಮೊದಲನೆಯದು ಗದ್ಯಕಾವ್ಯ; ಎರಡನೆಯದು ಪದ್ಯಕಾವ್ಯ! ಕೊ. ಚೆನ್ನಬಸಪ್ಪ ಅವರು ಈ ಎರಡೂ ಕೃತಿಗಳನ್ನು ಅನುವಾದಿಸಿದ್ದರು. ಇದು ಕನ್ನಡದ ಭಾಗ್ಯ. ಇವರಿಗೂ ಮೊದಲು ‘ಸಾವಿತ್ರಿ’ ಮಹಾಕಾವ್ಯದ ಸಂಗ್ರಹ ಅನುವಾದ ಪೊ›. ರಂ. ಶ್ರೀ. ಮುಗಳಿ ಅವರು ಪ್ರಕಟಿಸಿದ್ದರು. ಇಷ್ಟು ಮಾತ್ರವಲ್ಲ, ಅನೇಕ ಅರವಿಂದ ಭಕ್ತರು ಕನ್ನಡಕ್ಕೆ ಅರವಿಂದರ ಇತರ ಕೃತಿಗಳನ್ನು ತಂದು ನೀಡಿದ್ದಾರೆ. ಸಾವಿತ್ರಿ-ಮಹಾಕಾವ್ಯವು ಅರವಿಂದರ ಸೃಜನಶೀಲ ಮಹೋನ್ನತ ಕೃತಿ! ಇದು ಮೂಲದಲ್ಲಿ 24 ಸಾವಿರ ಸಾಲುಗಳ ಮಹಾಕಾವ್ಯ. ಈ ಕಾವ್ಯದ ಓದು, ಅಧ್ಯಯನ, ಮನನಗಳು ಆಧುನಿಕ ಕನ್ನಡ ಸಾಹಿತ್ಯದ ಭಾಗಗಳೇ ಆಗಿವೆ. ಒಂದೆಡೆ ದ.ರಾ. ಬೇಂದ್ರೆ; ಮತ್ತೊಂದೆಡೆ ಕುವೆಂಪು ಈ ಮಹಾಕಾವ್ಯದ ಪ್ರಭಾವ-ಪ್ರೇರಣೆಗೆ ಒಳಗಾಗಿರುವುದು ಚಾರಿತ್ರಿಕ ಸಂಗತಿ.

    ಸಾವಿತ್ರಿ ಮಹಾಕಾವ್ಯದ ಮಹೋನ್ನತ ಅನುವಾದಇಂಥ ಮಹಾಕಾವ್ಯವನ್ನು 43 ವರ್ಷಗಳ ಹಿಂದೆ ಪೊ›. ಮಂದರ್ಕೆ ಮಾಧವ ಪೈ ಅವರು ಅನುವಾದಿಸಿದ್ದರೆಂಬುದು ಅಚ್ಚರಿಯ ಸಂಗತಿ. ಈವರೆಗೂ ಪ್ರಕಟವಾಗಿರುವ ರಂ. ಶ್ರೀ. ಮುಗಳಿ, ಕೋ.ಚೆ. ಅವರಿಗಿಂತ ಮೊದಲು ಅನುವಾದಿಸಿ ಪ್ರಕಟಣೆಯ ಸೌಭಾಗ್ಯ ಸಿಗದಿದ್ದದ್ದು ವಿಸ್ಮಯ. ಇದೀಗ ಅರವಿಂದೋ ಸೊಸೈಟಿಯ ಅಧ್ಯಕ್ಷ ಅಜಿತ್ ಸಬ್ನೀಸ್ ಪ್ರಕಟಣೆಯ ಸಾಹಸ ಮಾಡಿರುವುದು ಸೌಭಾಗ್ಯದ ವಿಷಯವೇ. ‘ಸಾವಿತ್ರಿ’ ಮಹಾಕಾವ್ಯವು ಇಂಗ್ಲಿಷಿನಲ್ಲಿ ಪ್ರಕಟವಾದ ಮೊತ್ತಮೊದಲ ದಾರ್ಶನಿಕ ಮಹಾಕಾವ್ಯ. ಆಧುನಿಕ ಇಂಗ್ಲಿಷ್ ಸಾಹಿತ್ಯ ಚರಿತ್ರೆಯಲ್ಲಿ ಇದೊಂದು ಅಸೀಮವಾದ ಮಹಾಕಾವ್ಯ ರಚನೆ ಎಂದು ಹೆಸರು ಗಳಿಸಿದೆ. ಇಂಥ ಕೃತಿಯು ಮೊದಲು ಬಂಗಾಲಿ ಭಾಷೆಯಲ್ಲಿ, ಅನಂತರ ಹಿಂದಿ ಹಾಗೂ ಇತರ ಭಾಷೆಗಳಲ್ಲಿ ಅನುವಾದಗೊಂಡು ಪ್ರಕಟವಾಗಿದೆ. ಕನ್ನಡದ ಅದೃಷ್ಟವೆಂಬಂತೆ ಸಂಪೂರ್ಣ ಹಾಗೂ ಸತ್ತ್ವಪೂರ್ಣವಾದ ಅನುವಾದವಾಗಿ ಸಹೃದಯರ ಮಡಿಲಿಗೆ ಇದೀಗ ಸಲ್ಲುತ್ತಿದೆ. ಈ ಹಿಂದಿನ ಎರಡು ಅನುವಾದಗಳು ಸರಳ ರಗಳೆಯಲ್ಲಿ ರಚಿತವಾಗಿದ್ದವು. ಆದರೆ, ಎಂ. ಮಾಧವ ಪೈ ಅವರು ‘ಗ್ರಾ್ಯಂಡ್​ಬ್ಲಾಂಕ್​ವರ್ಸ್’ ಛಂದಸ್ಸಿನಲ್ಲಿ ಅನುವಾದ ಮಾಡಿದ್ದಾರೆ. ಅನುವಾದಕ್ಕೆ ಬಳಸಿರುವ ಕಾವ್ಯಭಾಷೆ ಹಳಗನ್ನಡ, ನಡುಗನ್ನಡ ಎರಡರ ಸಮ್ಮಿಶ್ರವೆಂಬುದು ವಿಶೇಷ. ಶ್ರೀ ಅರವಿಂದ ಮಹರ್ಷಿಗಳು ಬಳಸಿರುವ ಕಾವ್ಯಭಾಷೆ ಅತ್ಯಂತ ಗಂಭೀರವೂ ಉದಾತ್ತವೂ ಧೀರರಮಣೀಯವೂ ಆದುದು. ಆ ಇಂಗ್ಲಿಷ್ ಕಾವ್ಯಭಾಷೆಯ ಓಘಕ್ಕೆ ಸಮನಾಗಿ, ಕನ್ನಡ ಕಾವ್ಯಭಾಷೆಯನ್ನು ಮಹಾಕಾವ್ಯಕ್ಕೆ ಬಳಸಿದ್ದಾರೆ.

    ಪೊ›. ಮಂದರ್ಕೆ ಮಾಧವ ಪೈ ಅವರು ಕೊಂಕಣಿ-ಸಂಸ್ಕೃತ- ಕನ್ನಡ ಈ ಮೂರೂ ಭಾಷೆಗಳಳ್ಲಿ ಸಮದಂಡಿಯಾದ ವಿದ್ವತ್ತನ್ನು ಪಡೆದವರು. ಮಹರ್ಷಿ ಅರವಿಂದರ ತತ್ತ್ವಜ್ಞಾನದ ಉದಧಿಯಲ್ಲಿ ಮಿಂದವರು. ಸಾವಿತ್ರ-ಸತ್ಯವಾನ್-ಅಶ್ವಪತಿ-ದ್ಯುಮತ್ಸೇನ ಈ ಪಾತ್ರಗಳು ಮರ್ತ್ಯಸ್ತರದಿಂದ ಅಮರತ್ವದ ದಿವ್ಯಚೇತನದತ್ತ ಹಾಗೂ ದಿವ್ಯಜೀವನದತ್ತ ಕರೆದೊಯ್ಯುವ ಕಾರಣಿಕರೆಂಬುದನ್ನು ಅರವಿಂದರು ತಮ್ಮ ಕಾವ್ಯದಲ್ಲಿ ಶ್ರುತಪಡಿಸಿದ್ದಾರೆ. ಅದು ಸಾವಿತ್ರಿ ಮಹಾಕಾವ್ಯದ ಅಖಂಡ ಆಶಯವೂ ಆಗಿದೆ. ಈ ಆಶಯವು ಅನುವಾದದಲ್ಲಿ ಧೀರಗಂಭೀರವಾದ ವಾಣಿಯಿಂದ ಅಲಂಕೃತವಾಗಿರುವುದು ಸೌಭಾಗ್ಯದ ಸಂಗತಿ. ಕಾವ್ಯತತ್ತ್ವ ಮತ್ತು ದರ್ಶನತತ್ತ್ವಗಳು ಒಂದರೊಡನೊಂದು ಕೈಹಿಡಿದು ಇಲ್ಲಿ ನಡೆದಿವೆ. ಮೂಲ ಇಂಗ್ಲಿಷ್ ಮಹಾಕಾವ್ಯದಲ್ಲಿ ಬರುವ ರೂಪಕ, ಪ್ರತಿಮೆ, ಸಂಕೇತಗಳು ಕನ್ನಡದಲ್ಲಿ ಸಮರ್ಥವಾಗಿ ಇಳಿದು ಬಂದಿವೆ. ಅಸಾಧಾರಣವಾದ ವ್ಯುತ್ಪತ್ತಿ, ಮೌಲಿಕ ಕಲ್ಪಕತೆ, ಸಾಂದ್ರವಾದ ವರ್ಣನೆ, ರಮ್ಯನೋಟ ಮತ್ತು ಅನಿತರ ಸಾಧಾರಣವಾದ ದರ್ಶನದೃಷ್ಟಿಯಿಂದ ಶ್ರೀ ಅರವಿಂದರ ಸಾವಿತ್ರಿಯ ಓದು ಅನನ್ಯವಾದ ಅನುಭವವನ್ನು ಸಹೃದಯರಿಗೆ ನೀಡುತ್ತದೆ. ಅದೇ ಅನುಭವ ಕನ್ನಡಾನುವಾದದಲ್ಲಿ ನಮಗೆ ಆಗುತ್ತದೆ.

    ಇಂಥದೊಂದು ಮಹತ್ತ್ವದ ಮಹಾಕಾವ್ಯವನ್ನು ಡಾ. ಅಜಿತ್ ಸಬ್ನೀಸ್ ಅವರು ಹೊರತಂದು ಕನ್ನಡಿಗರಿಗೆ ನೀಡಿದ್ದಾರೆ. ಇಂಗ್ಲಿಷಿನಿಂದ ಕನ್ನಡಕ್ಕೆ ಸಮರ್ಥವಾಗಿ ಅನುವಾದಗೊಂಡ ಮಹಾಕಾವ್ಯಗಳ ಪಂಕ್ತಿಯಲ್ಲಿ ‘ಸಾವಿತ್ರಿ’ ಕಾವ್ಯಕ್ಕೆ ಮೇಲಾದ ಸ್ಥಾನವುಂಟು; ಮಾನ್ಯವುಂಟು! ಪೊ›. ಮಂದರ್ಕೆ ಮಾಧವ ಪೈ ಅವರ ಅತುಲ ಶ್ರಮವನ್ನು ಪ್ರತಿಯೊಬ್ಬ ಕಾವ್ಯಾಸಕ್ತರು ಅಭಿನಂದಿಸಬೇಕು.

    ಸಾವಿತ್ರಿ ಮಹಾಕಾವ್ಯದ ಮಹೋನ್ನತ ಅನುವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts