More

    ವಿಜಯವಾಣಿ ವಿದ್ಯಾರ್ಥಿಮಿತ್ರ ಮಕ್ಕಳ ನಿಜ ಸ್ನೇಹಿತ

    ವಿಜಯಪುರ : ಕನ್ನಡಿಗರ ಹೆಮ್ಮೆಯ ನಂ.1 ದಿನಪತ್ರಿಕೆ ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿ ಮಿತ್ರ ವಿದ್ಯಾರ್ಥಿಗಳ ಜ್ಞಾನ ದಾಹವನ್ನು ತೀರಿಸಿಕೊಳ್ಳಲು ಅತಿ ಉಪಯುಕ್ತವಾದ ಕೈಪಿಡಿಯಾಗಿದೆ. ವಿಜಯವಾಣಿ ತಂಡ ಶಿಕ್ಷಣದತ್ತ ವಿಶೇಷ ಆಸಕ್ತಿ ವಹಿಸಿ ಶಿಕ್ಷಣಮೇಳದಂತಹ ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಖ್ಯಾತ ಗಾಯಕಿ ಸಾ ಹಿರೇಮಠ ಹೇಳಿದರು.

    ಗುರುವಾರ ನಗರದ ಕನಕದಾಸ ಬಡಾವಣೆಯ ಶ್ರೀ ಸಿದ್ಧೇಶ್ವರ ಕೋಚಿಂಗ್​ ಕ್ಲಾಸೆಸ್​ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಜಯವಾಣಿ ವಿದ್ಯಾರ್ಥಿಮಿತ್ರ ಪತ್ರಿಕೆ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಒಂದನೇ ತರಗತಿಯಿಂದ ಹಿಡಿದು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡಿಕೊಳ್ಳುವ ಸ್ಪರ್ಧಾರ್ಥಿಗಳವರೆಗೆ ಪ್ರತಿಯೊಬ್ಬರಿಗೂ ವಿದ್ಯಾರ್ಥಿ ಮಿತ್ರ ಅವಶ್ಯಕ.

    ಎಷ್ಟೋ ಜನ ಬಡ ವಿದ್ಯಾರ್ಥಿಗಳು ಕೋಚಿಂಗ್​ ತೆಗೆದುಕೊಳ್ಳಲು ಸಾಧ್ಯವಾಗದೇ ಕೇವಲ ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆಯನ್ನು ಓದಿ ಅಪಾರ ಜ್ಞಾನವನ್ನು ಬೆಳೆಸಿಕೊಳ್ಳುವುದರೊಂದಿಗೆ ಸರ್ಕಾರಿ ನೌಕರಿಗಳನ್ನು ಗಿಟ್ಟಿಸಿಕೊಂಡಿರುವುದು ಸಂತಸದ ಸಂಗತಿಯಾಗಿದೆ ಎಂದರು.


    ಸಮೂಹ ಸಂಪನ್ಮೂಲ ವ್ಯಕ್ತಿ ವೀರೇಶ ಮಾಶೆಟ್ಟಿ ಮಾತನಾಡಿ, ಶ್ರೀ ಸಿದ್ಧೇಶ್ವರ ಕೋಚಿಂಗ್​ನ ಶಿಕ ವೃಂದ ಮಕ್ಕಳಿಗೆ ಕಲಿಕೆಯ ಜೊತೆಗೆ ಆಟೋಟ ಸ್ಪರ್ಧೆ, ಸಂಗೀತ, ನೃತ್ಯ, ಏಕಪಾತ್ರಾಭಿನಯ, ಮೌಲ್ಯ ಶಿಣ, ಸಾಧಕರ ಜೀವನ ಚರಿತ್ರೆ, ಹೆಸರಾಂತ ಕಲಾವಿದರು ಹಾಗೂ ಸಾಧಕರ ಪರಿಚಯ ಮಾಡುತ್ತಾ ಪ್ರಥಮ ವರ್ಷದಲ್ಲಿ ನಾಡಿನಾದ್ಯಂತ ಖ್ಯಾತಿಪಡೆದು ವಿದ್ಯಾರ್ಥಿ ಸ್ನೇಹಿ ಹಾಗೂ ಪಾಲಕರ ಹೆಮ್ಮೆಯ ಸಂಸ್ಥೆಯಾಗಿ ಹೊರಹೊಮ್ಮಿರುವುದು ಸಂತಸ ತಂದಿದೆ ಎಂದರು.
    ಕರ್ನಾಟಕ ರಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಮುಳಜಿ, ಉಪನ್ಯಾಸಕಿ ಪರ್ವೀನ್​ ಸುಲ್ತಾನ್​ ಕೊಪ್ಪಲ್​, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನೀಲಾ ಜತ್ತಿ, ಶಾಂತಲಿಂಗ ಕಣ್ಣಿ ಮಾತನಾಡಿದರು. ಮುಖ್ಯ ಶಿಕಿ ಸುಚಿತ್ರಾ ಹೊಸಮನಿ, ವಿಠ್ಠಲ ಬಡಿಗೇರ, ಸೌಮ್ಯ ಗಲಗಲಿ, ರಾಜೇಶ್ವರಿ ಮುಳಜಿ, ಅಮೃತ ಗುಜಗೊಂಡ, ರೂಪ ಹಲಗಣಿ, ಶಿಕ ಶಿಕೇತರ ಸಿಬ್ಬಂದಿ, ಮಕ್ಕಳು ಭಾಗವಹಿಸಿದ್ದರು. ಶಿಕಿ ವೃಂದ ಕುಲಕರ್ಣಿ ನಿರೂಪಿಸಿ, ವಂದಿಸಿದರು.

    ಖ್ಯಾತ ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಚಲನಚಿತ್ರ “ವಿಜಯಾನಂದ’ ಚಿತ್ರದಿಂದ ಪ್ರಭಾವಿತನಾಗಿ ಶಿಣ ಸಂಸ್ಥೆ ಪ್ರಾರಂಭಮಾಡುವತ್ತ ಹೆಜ್ಜೆ ಹಾಕಿದೆ. ಪ್ರಥಮ ವರ್ಷದಲ್ಲಿಯೇ ನಮ್ಮ ಸಂಸ್ಥೆಯಲ್ಲಿ ನೂರಾರು ವಿದ್ಯಾರ್ಥಿಗಳು ಗುಣಮಟ್ಟದ ಶಿಣ ಪಡೆದು ಯಶಸ್ವಿಯಾಗಿದ್ದಾರೆ. ಸಂಸ್ಥೆಯ ಕೀರ್ತಿ ಪತಾಕೆಯನ್ನು ನಾಡಿನಾದ್ಯಂತ ಹಬ್ಬಿಸಲು ಸಹಕರಿಸಿದ ಕೀರ್ತಿ ವಿಜಯವಾಣಿ ಪತ್ರಿಕೆಗೆ ಸಲ್ಲುತ್ತದೆ. ಮಕ್ಕಳ ಜ್ಞಾನಾಭಿವೃದ್ಧಿಗಾಗಿ ವಿದ್ಯಾರ್ಥಿ ಮಿತ್ರವನ್ನು ಮಕ್ಕಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ.

    ಸುರೇಶ ಜತ್ತಿ ಸಂಸ್ಥಾಪಕ ಅಧ್ಯಕ್ಷ, ಶ್ರೀ ಸಿದ್ಧೇಶ್ವರ ಕೋಚಿಂಗ್​ ಕ್ಲಾಸೆಸ್​, ವಿಜಯಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts