More

    ಜಿಲ್ಲಾಮಟ್ಟದಲ್ಲಿ ಶಿಕ್ಷಕರ ನೇಮಕ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ | ಸಚಿವ ಸುರೇಶ್​ಕುಮಾರ್ ಘೋಷಣೆ

    ಬೆಂಗಳೂರು: ಶಿಕ್ಷಣದಲ್ಲಿ ಉತ್ತಮ ಗುಣಮಟ್ಟ ಕಾಪಾಡುವುದರ ಜತೆಗೆ ಶಿಕ್ಷಕರ ಸೇವೆಯಲ್ಲಿನ ಸಮಸ್ಯೆ ಹಾಗೂ ವರ್ಗಾವಣೆ ಗೊಂದಲ ಪರಿಹರಿಸುವುದಕ್ಕಾಗಿ ಜಿಲ್ಲಾಮಟ್ಟದಲ್ಲೇ ಸರ್ಕಾರಿ ಶಾಲೆಗಳ ಶಿಕ್ಷಕರ ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.

    ವಿಜಯವಾಣಿ, ದಿಗ್ವಿಜಯ ನ್ಯೂಸ್ 24X7 ಸೋಮವಾರ ಆಯೋಜಿಸಿದ್ದ ಫೋನ್ ಇನ್ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಮಾಹಿತಿ ಹಂಚಿ ಕೊಂಡರು. ತಮ್ಮ ಈ ಚಿಂತನೆ ಜತೆಯಲ್ಲೇ ಶಿಕ್ಷಣ ವ್ಯವಸ್ಥೆಯ ಸುಧಾ ರಣೆಗೆ ಹಮ್ಮಿಕೊಂಡಿರುವ ಯೋಜನೆಗಳ ಕುರಿತು ಮಾಹಿತಿ ಬಿಚ್ಚಿಟ್ಟರು.

    ಶಿಕ್ಷಕ ಸ್ನೇಹಿ ವಾತಾವರಣ: ಕಡ್ಡಾಯ ವರ್ಗಾವಣೆಯಲ್ಲಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವರ್ಗಾವಣೆ ಮಾಡುತ್ತಿದ್ದರಿಂದಾಗಿ ಬಹುತೇಕ ಶಿಕ್ಷಕರು ಕಷ್ಟಪಟ್ಟು ಆ ಸ್ಥಳಕ್ಕೆ ಹೋದರೂ ಇಷ್ಟ ಇಲ್ಲದ ಮನಸ್ಸಿನಿಂದ ಪಾಠ ಮಾಡುತ್ತಿದ್ದರು. ಈ ಸಮಸ್ಯೆ ಬಗೆಹರಿಸುವ ಹಾಗೂ ಶಿಕ್ಷಕ ಸ್ನೇಹಿ ವಾತಾವರಣ ನಿರ್ವಿುಸುವ ಉದ್ದೇಶದಿಂದ ಮುಂದೆ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ತಾವು ಇರುವ ಜಿಲ್ಲೆಯಲ್ಲೇ ಖಾಲಿ ಇರುವ ಹುದ್ದೆ ಭರ್ತಿಗೆ ಅವಕಾಶ ಕಲ್ಪಿಸಲಾಗುವುದು. ಕಡ್ಡಾಯ ವರ್ಗಾವಣೆಯಲ್ಲಿ ಸಾಕಷ್ಟು ಬದಲಾವಣೆ ತರಲು ನಿರ್ಧರಿಸಲಾಗಿದೆ ಎಂದರು.

    ಸುಗಮ ಪರೀಕ್ಷೆಗೆ ಸಚಿವರ ಸೂತ್ರ
    1 ಪ್ರಶ್ನೆಪತ್ರಿಕೆ ಸೋರಿಕೆ ಆಗದಂತೆ ಮುನ್ನೆಚ್ಚರಿಕೆ ವಹಿಸುವುದು
    2 ಸಮೂಹ ಕಾಪಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವುದು
    3 ನಿಗದಿತ ಅವಧಿಯಲ್ಲಿ ಮೌಲ್ಯ ಮಾಪನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts