More

    ವಿಜಯವಾಣಿ ವಿಜಯೋತ್ಸವ ಶಾಪಿಂಗ್ ಉತ್ಸವ: ಬಂಪರ್ ಬಹುಮಾನ ಲಕ್ಕಿ ಡ್ರಾ

    ಮಂಗಳೂರು: ದಸರಾ ಹಾಗೂ ದೀಪಾವಳಿ ಹಬ್ಬ ಅಂಗವಾಗಿ ವಿಜಯವಾಣಿ ಆಯೋಜಿಸಿದ 10ನೇ ವರ್ಷದ ‘ವಿಜಯೋತ್ಸವ- 2021’ ಶಾಪಿಂಗ್ ಉತ್ಸವದ ಲಕ್ಕಿ ಡ್ರಾ ನಗರದ ಕೂಳೂರಿನಲ್ಲಿರುವ ‘ವಿಜಯವಾಣಿ’ ಮಂಗಳೂರು ಬ್ಯೂರೋ ಮುಖ್ಯ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿತು.

    ಡ್ರಾ ನೆರವೇರಿಸಿ ಮಾತನಾಡಿದ ಮುಖ್ಯ ಅತಿಥಿ, ಅರುಣಾ ಮಸಾಲ ಕಂಪನಿಯ ವ್ಯವಸ್ಥಾಪಕ ಪಾಲುದಾರ ಅನಂತೇಶ್ ವಿ.ಪ್ರಭು, ಡಾ.ವಿಜಯ ಸಂಕೇಶ್ವರ ಅವರ ನೇತೃತ್ವದ ವಿಆರ್‌ಎಲ್ ಸಾರಿಗೆ ಸಂಸ್ಥೆ ದೇಶದಲ್ಲೇ ಅಗ್ರ ಸ್ಥಾನದಲ್ಲಿ ಮುಂದುವರಿಯುತ್ತಿರುವಂತೆ ‘ವಿಜಯವಾಣಿ’ ಪತ್ರಿಕೆ ಹಾಗೂ ‘ದಿಗ್ವಿಜಯ’ ಚಾನೆಲ್ ಕೂಡ ಮಾಧ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿವೆ. ಸಮಗ್ರ ಹಾಗೂ ಸಮೃದ್ಧ ಮಾಹಿತಿ, ಮನರಂಜನೆಯನ್ನು ಜನರಿಗೆ ಒದಗಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ‘ವಿಜಯೋತ್ಸವ- 2021’ದಂತಹ ಕಾರ್ಯಕ್ರಮಗಳು ಸಾರ್ವಜನಿಕರು ಮತ್ತು ಓದುಗರು- ವೀಕ್ಷಕರ ನಡುವೆ ನಿರಂತರ ಸಂಪರ್ಕ-ಸಂವಹನ ಉಳಿಸಿಕೊಳ್ಳಲು ಸಹಕಾರಿ. ವಿಆರ್‌ಎಲ್ ಸಮೂಹ ಸಂಸ್ಥೆಯ ಯಶಸ್ಸಿನ ಪ್ರಯಾಣ ಮುಂದುವರಿಯಲಿ ಎಂದು ಹಾರೈಸಿದರು.

    ಪತ್ರಿಕೆ ಮೂಲಕ ವೃತ್ತಿ ಜೀವನ: ಮುಖ್ಯ ಅತಿಥಿ ಚಿತ್ರನಟಿ ಚಿರಶ್ರೀ ಅಂಚನ್ ಮಾತನಾಡಿ, ನಾಡಿನ ಜನರ ವಿಶೇಷ ಪ್ರೀತಿಯ ಬೆಂಬಲದಿಂದ ಇಂದು ತುಳು, ಕನ್ನಡ, ತಮಿಳು, ತೆಲುಗು ಸಹಿತ ವಿವಿಧ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ನನ್ನ ವೃತ್ತಿ ಜೀವನ ವಿಜಯವಾಣಿ ಜತೆ ಆರಂಭವಾಯಿತು ಎಂದು ಹೇಳಲು ಅಭಿಮಾನ ಪಡುತ್ತೇನೆ. ಆರಂಭದ ದಿನಗಳಲ್ಲಿ ನನ್ನಲ್ಲಿರುವ ಪ್ರತಿಭೆ ಗುರುತಿಸಿ ಚಿತ್ರರಂಗ ಹಾಗೂ ಜನರ ಗಮನ ಸೆಳೆದ ಈ ಪತ್ರಿಕೆಗೆ ಋಣಿ ಎಂದರು.

    ವಿಜಯವಾಣಿ ಮಂಗಳೂರು ಬ್ಯೂರೋ ಮುಖ್ಯಸ್ಥ ಸುರೇಂದ್ರ ಎಸ್.ವಾಗ್ಳೆ, ಮಾರುಕಟ್ಟೆ ವಿಭಾಗ ಮುಖ್ಯಸ್ಥ ನವೀನ್ ಶೆಟ್ಟಿ ಉಪಸ್ಥಿತರಿದ್ದರು. ವಿಜಯವಾಣಿ ಹಿರಿಯ ವರದಿಗಾರ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ನಿರ್ವಹಿಸಿದರು.

    2,500 ಬಹುಮಾನ!: ಲಕ್ಕಿ ಡ್ರಾದಲ್ಲಿ ರಾಜ್ಯಮಟ್ಟದಲ್ಲಿ 10 ರೆಫ್ರಿಜರೇಟರ್, 10 ಟಿವಿ, 10 ದ್ವಿಚಕ್ರವಾಹನ, ಮೂರು ಗ್ರಾಂ ತೂಕದ 10 ಚಿನ್ನದ ನಾಣ್ಯಗಳು, 10 ಸೈಕಲ್ ಸಹಿತ ಒಟ್ಟು 2,500 ಬಹುಮಾನಗಳಿವೆ. ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳು ಒಳಗೊಂಡಿರುವ ಮಂಗಳೂರು ಬ್ಯೂರೋ ಮಟ್ಟದಲ್ಲಿ 169 ಬಹುಮಾನಗಳಿವೆ. ರಾಜ್ಯ ಮಟ್ಟದಲ್ಲಿ 7 ಕಾರು ಬಂಪರ್ ಬಹುಮಾನಗಳಿದ್ದು, ಮಂಗಳೂರಿಗೆ ಸಂಬಂಧಿಸಿದ ಕಾರಿನ ಡ್ರಾ ಮೈಸೂರಿನಲ್ಲಿ ಡಿ.6ರಂದು ನಡೆಯಲಿದೆ. ಬಹುಮಾನ ಯೋಜನೆ ಫಲಿತಾಂಶ ಡಿ.10ರಂದು ‘ವಿಜಯವಾಣಿ’ಯಲ್ಲಿ ಪ್ರಕಟವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts