More

    ಝೆಲೆನ್ಸ್​ಕಿ ಮರುಳೋ, ಜಗತ್ತು ಮರುಳೋ!

    ಅಧ್ಯಕ್ಷ ವ್ಲಾದಿಮಿರ್​ ಪೂತಿನ್​ರ ಆರೋಗ್ಯ ಹದಗೆಡುತ್ತಿರುವ ಸೂಚನೆ ಎರಡು ವರ್ಷಗಳ ಹಿಂದೆಯೇ ಕಂಡುಬಂದಿತ್ತು. ಫೆಬ್ರವರಿ 2020ರಲ್ಲಿ ಅವರು ಕ್ಯಾನ್ಸರ್​ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಪೂರ್ಣವಾಗಿ ಗುಣಮುಖರಾದಂತಿಲ್ಲ. ಅವರ ದೇಹಸ್ಥಿತಿ ಬಗ್ಗೆ ಕ್ರೆಮ್ಲಿನ್​ನಿಂದ ಯಾವುದೇ ವಿವರಗಳು ಹೊರಬರುವುದಿಲ್ಲ.

    ಝೆಲೆನ್ಸ್​ಕಿ ಮರುಳೋ, ಜಗತ್ತು ಮರುಳೋ!ರಷ್ಯಾ & ಯೂಕ್ರೇನ್​ ಯುದ್ಧ ಆರಂಭವಾಗಿ ಒಂಬತ್ತು ವಾರಗಳಾಗಿವೆ. ರಷ್ಯನ್​ ಜನಾಂಗ ಅಧಿಕವಾಗಿರುವ ಪೂರ್ವದ ದನ್​ಬಾಸ್​ ಪ್ರದೇಶದ ದೊನೆತ್ಸ್​ಕ್​ ಮತ್ತು ಲುಹಾನ್ಸ್​ಕ್​ಗಳನ್ನು ರಷ್ಯಾ ವಶಕ್ಕೆ ತೆಗೆದುಕೊಂಡಾಗಿದೆ. ಅದರಿಂದಾಗಿ ರಷ್ಯಾಗೆ ಎರಡು ಅನುಕೂಲಗಳಾಗಿವೆ. ಒಂದು& ಮೊಬೈಲ್​ ಫೋನ್​, ಲ್ಯಾಪ್​ಟಾಪ್​ಗಳಿಂದ ಹಿಡಿದು ಎಲೆಕ್ಟ್ರಿಕ್​ ವಾಹನಗಳವರೆಗೆ ಎಲ್ಲ ಬ್ಯಾಟರಿ & ಚಾಲಿತ ಎಲೆಕ್ಟ್ರಾನಿಕ್​ ವಸ್ತುಗಳಿಗೆ ಅತ್ಯಗತ್ಯವಾಗಿ ಬೇಕಾಗಿರುವ, ಆ ಕಾರಣದಿಂದಲೇ “ಬಿಳಿ ಚಿನ್ನ’ ಎಂದು ಹೆಸರಾಗಿರುವ ಲಿಥಿಯಂಗಾಗಿ ಈಗ ಮುಂದುವರಿದ ದೇಶಗಳಲ್ಲಿ ಪೈಪೋಟಿ ಆರಂಭವಾಗಿದೆ. ಬೊಲಿವಿಯಾ, ಚಿಲಿ ಮತ್ತು ಅರ್ಜೆಂಟೈನಾಗಳಲ್ಲಿರುವ ನಿೇಪಗಳ ಮೇಲೆ ಪಶ್ಚಿಮದ ದೇಶಗಳು ಕಣ್ಣುಹಾಕಿದ್ದರೆ ಅ್ಘಾನಿಸ್ತಾನದಲ್ಲಿರುವ ನಿೇಪಗಳನ್ನು ಕೈವಶ ಮಾಡಿಕೊಳ್ಳಲು ಚೀನಾ ತಂತ್ರ ರೂಪಿಸುತ್ತಿದೆ. ದನ್​ಬಾಸ್​ನಲ್ಲಿರುವ ಲಿಥಿಯಂ ನಿೇಪಗಳು ಗಾತ್ರದಲ್ಲಿ ಜಾಗತಿಕವಾಗಿ ಆರನೆಯ ಸ್ಥಾನದಲ್ಲಿವೆ. ಅವುಗಳನ್ನೀಗ ತನ್ನದಾಗಿಸಿಕೊಂಡು ರಷ್ಯಾ ಆ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಬಹುದಾಗಿದೆ. ಎರಡು& 2014ರಲ್ಲಿ ರಷ್ಯಾ ವಶಪಡಿಸಿಕೊಂಡ ಕ್ರಿಮಿಯಾ ಪರ್ಯಾಯದ್ವೀಪಕ್ಕಿದ್ದ ಏಕೈಕ ಜಲಮೂಲವಾದ ನೀಪರ್​ ನದಿಯ ಕಾಲುವೆಯನ್ನು ಯೂಕ್ರೇನಿಯನ್ನರು ಮುಚ್ಚಿಬಿಟ್ಟಿದ್ದರಿಂದಾಗಿ ಕ್ರಿಮಿಯಾದಲ್ಲಿ ನೀರಿಗಾಗಿ ಹಾಹಾಕಾರವೆದ್ದು 2020ರಲ್ಲಿ ಅಶಾಂತಿ ಉಲ್ಬಣಗೊಂಡಿತ್ತು. ಸಾಮರಿಕವಾಗಿ ತನಗೆ ಬಹು ಮಹತ್ವವಾದ ಕ್ರಿಮಿಯಾವನ್ನು ಶಾಂತವಾಗಿರಿಸುವುದು ರಷ್ಯಾಗೆ ಮುಖ್ಯ. ಈಗ ದನ್​ಬಾಸ್​ ಪ್ರದೇಶದ ಮೂಲಕ ಸಾಗಿ ಅಜೋವ್​ ಸಮುದ್ರತಿರವನ್ನು ವಶಕ್ಕೆ ತೆಗೆದುಕೊಳ್ಳುವುದು, ಆ ಮೂಲಕ ಕ್ರಿಮಿಯಾಗೆ ಭೂಸಂಪರ್ಕ ಹೊಂದುವುದು ಮತ್ತು ಮುಚ್ಚಲ್ಪಟ್ಟಿರುವ ನೀಪರ್​ ನದಿಯ ಕಾಲುವೆಗಳನ್ನು ತೆರೆಯುವುದು ರಷ್ಯಾಗೆ ಸಾಧ್ಯವಾಗಿದೆ. ಅಷ್ಟೂ ಪ್ರದೇಶಗಳನ್ನು ಶಾಶ್ವತವಾಗಿ ತನ್ನ ಹಿಡಿತದಲ್ಲೆ ಇಟ್ಟುಕೊಳ್ಳುವುದಾದರೆ ಕ್ರಿಮಿಯಾ ಇನ್ನೆಂದೂ ಅಶಾಂತಿಗೆ ಬೀಳದಂತೆ ನೋಡಿಕೊಳ್ಳುವುದು ಮಾಸ್ಕೋಗೆ ಸಾಧ್ಯವಾಗುತ್ತದೆ.

    ಈಗ ರಷ್ಯಾ ತನ್ನ ಮೂರನೆಯ ಗುರಿಯತ್ತ ನಿಧಾನವಾಗಿ ಸಾಗಿದೆ. ಸಮುದ್ರತಿರದಲ್ಲೆ ಇನ್ನೂ ಪಶ್ಚಿಮಕ್ಕೆ ಮುಂದುವರಿದು ಒದೆಸ್ಸಾ ಬಂದರನ್ನು ವಶಮಾಡಿಕೊಳ್ಳುವುದು ಕ್ರೆಮ್ಲಿನ್​ನ ಗುರಿ, ಕಪ್ಪು ಸಮುದ್ರದ ಮೂಲಕ ಮೆಡಿಟರೇನಿಯನ್​ ಸಮುದ್ರ ಮತ್ತು ಅದರಾಚೆಯ ಅಟ್ಲಾಂಟಿಕ್​ ಸಾಗರಕ್ಕೆ ಸರ್ವಋತು ಹೆಬ್ಬಾಗಿಲಾಗಲೆಂದು ಎರಡೂಕಾಲು ಶತಮಾನಗಳ ಹಿಂದೆ ತಮ್ಮ ಮಹಾನ್​ ಸಾಮ್ರಾ ಕ್ಯಾಥರೀನ್​ ದ ಗ್ರೇಟ್​ ಸ್ಥಾಪಿಸಿದ ಒದೆಸ್ಸಾ ಬಂದರು ಮೂರು ದಶಕಗಳ ಹಿಂದೆ ಕೈತಪ್ಪಿಹೋದದ್ದು ರಷ್ಯನ್ನರಿಗೆ ಆರ್ಥಿಕವಾಗಿ ದೊಡ್ಡ ಪೆಟ್ಟು ನೀಡಿತ್ತು. ಈಗ ಆ ಬಂದರನ್ನು ಮತ್ತೆ ಕೈಗೆ ತೆಗೆದುಕೊಂಡು ಜಗತ್ತಿನೊಡನೆ ತಮ್ಮ ಹೆಬ್ಬಾಗಿಲನ್ನು ಮತ್ತೊಮ್ಮೆ ತೆರೆಯುವುದರ ಜತೆಗೆ ಯೂಕ್ರೇನನ್ನು ಸಮುದ್ರತಿರವೇ ಇಲ್ಲದ ದೇಶವನ್ನಾಗಿ ಮಾಡಿ, ಆ ದೇಶ ತಾನು ಹೇಳಿದಂತೆ ಕೇಳಿಕೊಂಡು ಬಿದ್ದಿರುವಂತೆ ಮಾಡುವುದು ಸದ್ಯಕ್ಕೆ ಕಾಣುತ್ತಿರುವ ರಷ್ಯಾದ ಗುರಿ.
    ಕೇವಲ ಶಸ್ತ್ರಾಸ್ತ್ರಗಳ ಪೂರೈಕೆ ಮತ್ತು ರಾಜತಾಂತ್ರಿಕ ಕೂಗಾಟಗಳ ಹೊರತಾಗಿ ಅಮೆರಿಕದಿಂದ ಇನ್ನಾವ ಸಹಾಯವೂ ಯೂಕ್ರೇನ್​ಗೆ ಸಿಗುತ್ತಿಲ್ಲ ಮತ್ತು ಅಮೆರಿಕನ್​ ಸೇನೆಯೆಂದೂ ತನ್ನ ವಿರುದ್ಧ ಹೋರಾಡಲು ಯೂಕ್ರೇನ್​ ನೆಲಕ್ಕೆ ಬರಲಾರದು ಎಂದು ಸ್ಪಷ್ಟವಾಗಿ ಅರಿತಿರುವ ರಷ್ಯಾ ತನ್ನ ಗುರಿಯತ್ತ ತನಗನುಕೂಲವಾದ ಗತಿಯಲ್ಲೆ ಮುಂದುವರಿಯುತ್ತಿದೆ. ಯುದ್ಧವನ್ನು ಮುಂದುವರಿಸಲು ಅದಕ್ಕೆ ಹಣದ ಕೊರತೆಯೇನೂ ಇಲ್ಲ. ಅದು ಪಶ್ಚಿಮ ಯೂರೋಪ್​ನಿಂದಲೇ ಧಾರಾಳವಾಗಿ ಬರುತ್ತಿದೆ. ರಷ್ಯಾ ಮೇಲೆ ಆರ್ಥಿಕ ರ್ನಿಬಂಧಗಳನ್ನು ಹೇರಿರುವ ಯೂರೋಪಿಯನ್​ ಯೂನಿಯನ್​ ಅವೇ ರ್ನಿಬಂಧಗಳನ್ನು ಉಲ್ಲಂಘಿಸುವ ಅವಕಾಶಗಳನ್ನೂ ಸದಸ್ಯ ದೇಶಗಳಿಗೆ ನೀಡಿದೆ. ಆ ಪ್ರಕಾರ ರಷ್ಯಾದ ನೈಸರ್ಗಿಕ ಅನಿಲ ಮತ್ತು ತೈಲ ಇಂದಿಗೂ ಆ ದೇಶಗಳಿಗೆ ಹರಿದುಹೋಗುತ್ತಿವೆ. ಯುದ್ಧ ಆರಂಭವಾದ ನಂತರ ರಷ್ಯಾದಿಂದ ಯೂರೋಪ್​ 15% ಹೆಚ್ಚಿನ ಅನಿಲ ಮತ್ತು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ! ಇದರಿಂದಾಗಿ ರಷ್ಯಾಗೆ ಪ್ರತಿದಿನ 650ರಿಂದ 800 ಮಿಲಿಯನ್​ ಡಾಲರ್​ಗಳಷ್ಟು ಹಣ ಬರುತ್ತಿದೆ. ಯೂರೋಪಿಯನ್​ ಯೂನಿಯನ್​ನ ಪ್ರಮುಖ ದೇಶಗಳಾದ ಜರ್ಮನಿ ಮತ್ತು ಇಟಲಿಯ ಜತೆ ಆಸ್ಟ್ರಿಯಾ, ನೆದರ್​ಲ್ಯಾಂಡ್​, ಹಂಗೆರಿ ಮತ್ತು ಇನ್ನೂ ಹಲವು ದೇಶಗಳು ರಷ್ಯಾದ ಒತ್ತಡಕ್ಕೆ ಬಾಗಿ ಡಾಲರ್​ ಬದಲು ರೂಬಲ್​ನಲ್ಲೆ ವ್ಯವಹಾರ ಆರಂಭಿಸಿವೆ. ಇದಂತೂ ರಷ್ಯಾಗೆ ವರದಾನವೇ ಆಗಿದೆ. ಯುದ್ಧದ ಆರಂಭದ ದಿನಗಳಲ್ಲಿ ಕುಸಿಯುತ್ತಿದ್ದ ರಷ್ಯನ್​ ರೂಬಲ್​ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ, ರಷ್ಯನ್​ ಅರ್ಥವ್ಯವಸ್ಥೆಯೂ ಚೇತರಿಸಿಕೊಳ್ಳುತ್ತಿದೆ. ಇದಾವುದನ್ನೂ ಅರಿಯುವ ವಿವೇಕ ತೋರದ ಅಧ್ಯಕ್ಷ ವೊಲೊದಿಮೀರ್​ ಝೆಲೆನ್ಸ್​ಕಿ ಅಮೆರಿಕ ಮತ್ತು ಯೂರೋಪ್​ ಕೊಡುತ್ತಿರುವ ಶಸ್ತ್ರಾಸ್ತ್ರಗಳಿಂದ ಯುದ್ಧವನ್ನು ಗೆಲ್ಲಬಹುದೆಂಬ ಭ್ರಮೆಯಲ್ಲೆ ಇದ್ದಾರೆ, ಬಡಪಾಯಿ ಯೂಕ್ರೇನಿಯನ್ನರು ಸಾಯುತ್ತಿದ್ದಾರೆ. ಇಪ್ಪತ್ತೊಂದನೆಯ ಶತಮಾನದ ಮೂರನೆಯ ದಶಕದಲ್ಲೂ ಹೀಗೆ ನಡೆಯುತ್ತಿರುವುದು ಮನುಷ್ಯ ಇನ್ನೂ ನಾಗರಿಕನಾಗಿಲ್ಲ ಎನ್ನುವುದರ ಜ್ವಲಂತ ಸಾಕ್ಷಿಯಾಗಿದೆ. ಝೆಲೆನ್ಸ್​ಕಿ ಮರುಳೋ, ಜಗತ್ತು ಮರುಳೋ ಎನ್ನುವಂತಹ ಇಂತಹ ಸನ್ನಿವೇಶದಲ್ಲಿ ಪ್ರಸಕ್ತ ಯುದ್ಧವನ್ನು ಇನ್ನಷ್ಟು ಕರಾಳವಾಗಿಸುವ ಎರಡು ಬೆಳವಣಿಗೆಗಳು ತೆರೆದುಕೊಳ್ಳುತ್ತಿವೆ.

    ಯುದ್ಧವನ್ನು ನಿಲುಗಡೆಗೆ ತರಲು ಮತ್ತು ರಷ್ಯಾಗೆ ಪಾಠ ಕಲಿಸಲು ತನಗೆ 33 ಬಿಲಿಯನ್​ ಡಾಲರ್​ಗಳು ಬೇಕೆಂದು ಅಧ್ಯಕ್ಷ ಜೋ ಬೈಡೆನ್​ ಕಾಂಗ್ರೆಸ್​ ಮುಂದೆ ಮನವಿ ಸಲ್ಲಿಸಿದ್ದಾರೆ. ಅಧ್ಯಕ್ಷರ ಮನವಿಯನ್ನು ಪುರಸ್ಕರಿಸಿ, ಮಸೂದೆಯನ್ನು ಅಂಗೀಕರಿಸಿ, ಅಷ್ಟೂ ಹಣವನ್ನು ಆದಷ್ಟು ಶ್ರೀವಾಗಿ ಅವರ ಕೈಗೆ ಹಾಕಲು ಡೆಮೋಕ್ರಾಟಿಕ್​ ಪಕ್ಷ ತೀರ್ಮಾನಿಸಿರುವುದಾಗಿ ಹೌಸ್​ ಆ್​ ರೆಪ್ರೆಸೆಂಟೇಟಿವ್ಸ್​ನ ಸ್ಪೀಕರ್​, ಪಕ್ಷದ ನಾಯಕಿ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ. ಇನ್ನೂ ಶೀತಲ ಸಮರ ಮನಸ್ಥಿತಿಯಲ್ಲೆ ಹಿಮಗಟ್ಟಿಹೋಗಿರುವ ಡೆಮೋಕ್ರಾಟಿಕ್​ ಪಕ್ಷ ಜಗತ್ತನ್ನು ಇನ್ನಷ್ಟು ಅಪಾಯದತ್ತ ದೂಡಲು ಹೊರಟಿದೆ. ಅದರ ಪ್ರಕಾರ 33 ಬಿಲಿಯನ್​ ಡಾಲರ್​ಗಳಲ್ಲಿ 8.5 ಮಿಲಿಯನ್​ ಯೂಕ್ರೇನ್​ ಸರ್ಕಾರಕ್ಕೆ ದೇಣಿಗೆಯಾಗಿ ಹೋಗುತ್ತದೆ. ಅಳಿದುಳಿದಿರುವ ಸರ್ಕಾರಿ ಅಧಿಕಾರಿಗಳಿಗೆ ಮತ್ತು ಸೈನಿಕರಿಗೆ ಸಂಬಳ ನೀಡಲು ಈ ಹಣ ಬಳಕೆಯಾಗಲಿದೆ. 20 ಬಿಲಿಯನ್​ ಡಾಲರ್​ ಮೊತ್ತ ಯೂಕ್ರೇನ್​ನ ಸುರಾ ಪಡೆಗಳನ್ನು ಸದೃಢಗೊಳಿಸಲು, ಅವುಗಳ ಕಾದುವ ಸಾಮರ್ಥ್ಯವನ್ನು ಹೆಚ್ಚಿಸಲು ಬಳಕೆಯಾಗುತ್ತದಂತೆ. ಅಷ್ಟೇ ಅಲ್ಲ, ಇದರಲ್ಲಿ ಒಂದು ಅರ್ನಿದಿಷ್ಟ ಮೊತ್ತವನ್ನು ರಷ್ಯನ್​ ವಿಾನಿಗಳನ್ನು ಖರೀದಿಸಲು ಬಳಸುವುದು ಅಧ್ಯಕ್ಷ ಬೈಡೆನ್​ರ ಯೋಜನೆ!

    ಕಮ್ಯೂನಿಸ್ಟ್​ ಸೋವಿಯತ್​ ಕಾಲದಲ್ಲಿ ಆರ್ಥಿಕವಾಗಿ ಸದೃಢವಾಗಿಲ್ಲದಿದ್ದರೂ ತನ್ನ ಸೇನಾ ಮತ್ತು ಅಣುಶಕ್ತಿ ತಂತ್ರಾನಗಳ ಅಭಿವೃದ್ಧಿಗೆ ಕ್ರೆಮ್ಲಿನ್​ ಮಹತ್ವ ನೀಡಿತ್ತು. ಹೀಗಾಗಿಯೇ ಆರ್ಥಿಕವಾಗಿ ಬಲಾಢ್ಯ ಅಮೆರಿಕಗೆ ಸೇನಾಶಕ್ತಿಯಲ್ಲಿ ಸೆಡ್ಡುಹೊಡೆದು ನಿಲ್ಲುವುದು ಅದಕ್ಕೆ ಸಾಧ್ಯವಾದದ್ದು. ರಷ್ಯಾ ಸಹಾ ಅದನ್ನೇ ಮುಂದುವರಿಸಿಕೊಂಡು ಬಂದಿದೆ. ಹೀಗಾಗಿಯೇ ಅದು ಅತ್ಯಾಧುನಿಕ, ಅರಿಭಯಂಕರ ಎಸ್​&400, ಎಸ್​&500 ಹಾಗೂ ಹೈಪರ್​ಸಾನಿಕ್​ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿರುವುದು. ರಷ್ಯಾದ ಈ ಸಾಮರ್ಥ್ಯವನ್ನು ಮುರಿಯದೇ ಅದನ್ನು ಮಣಿಸಲು ಸಾಧ್ಯವಾಗದು ಎನ್ನುವುದು ಬೈಡೆನ್​ರ ತೀರ್ಮಾನ. ಅದಕ್ಕಾಗಿ ಅವರು ಹೂಡಿರುವ ಯೋಜನೆ ಕ್ಷಿಪಣಿ, ಅಣ್ವಸ್ತ್ರ ತಂತ್ರಾನ, ಯುದ್ಧವಿಮಾನ ಹಾಗೂ ಅರೆವಾಹಕಗಳ ಅಭಿವೃದ್ಧಿಯಲ್ಲಿ ತೊಡಗಿರುವ ಉನ್ನತ ದರ್ಜೆಯ 200&250 ರಷ್ಯನ್​ ವಿಾನಿಗಳನ್ನು ಅಧಿಕ ಸಂಬಳ ಹಾಗೂ ಸವಲತ್ತುಗಳ ಆಮಿಷವೊಡ್ಡಿ ಅಮೆರಿಕಕ್ಕೆ ಸೆಳೆದುಕೊಳ್ಳುವುದು. ಅದಕ್ಕಾಗಿ ಬಿಲಿಯನ್​ಗಟ್ಟಲೆ ಹಣವನ್ನು ಚೆಲ್ಲಲು ಅವರು ಸಿದ್ಧರಾಗಿದ್ದಾರೆ, ಇಂತಹ ಕಾರ್ಯಾಚರಣೆಯಲ್ಲಿ ಅಮೆರಿಕಕ್ಕೆ ಸಾಕಷ್ಟು ಅನುಭವವಿದೆ. ಹಿಟ್ಲರ್​ನ ಕಾಲದಲ್ಲಿ ಸೇನಾ ತಂತ್ರಾನ, ಕ್ಷಿಪಣಿ ಹಾಗೂ ಬಾಹ್ಯಾಕಾಶ ತಂತ್ರಾನ, ಅಣುಶಕ್ತಿ, ಪರಮಾನಸಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಜರ್ಮನ್​ ವಿಾನಿಗಳು ಅಗಾಧ ಪ್ರಗತಿ ಸಾಧಿಸಿದ್ದರು. ಅದರಿಂದಾಗಿಯೇ ಜರ್ಮನಿಯ ಯುದ್ಧ ಸಾಮರ್ಥ್ಯ ಅಪಾರವಾಗಿ ಏರಿದ್ದು. ಮಹಾಯುದ್ಧದ ಅಂತಿಮ ದಿನಗಳಲ್ಲಿ “ಆಪರೇಷನ್​ ಪೇಪರ್​ಕ್ಲಿಪ್​’ ಎಂಬ ಯೋಜನೆ ಮೂಲಕ ಸುಮಾರು 1,600 ಉತ್ಕ ೃಷ್ಟ ಜರ್ಮನ್​ ವಿಾನಿಗಳನ್ನು ಅಮೆರಿಕ ಹಣ ಮತ್ತು ಸವಲತ್ತುಗಳ ಆಮಿಷ ಒಡ್ಡಿ ತನ್ನತ್ತ ಸೆಳೆದುಕೊಂಡಿತು. ನರರಾಕ್ಷಸ ಹಿಟ್ಲರ್​ನೊಂದಿಗೆ ಕೈಗೂಡಿಸಿದ ಪಾತಕಿಗಳೆಂದು, ಬ್ರಿಟನ್​ ಮತ್ತು ಅಮೆರಿಕಗಳಿಂದಲೇ ಖಂಡನೆಗೊಳಗಾಗಿದ್ದ ಇವರು ರಾತ್ರೋರಾತ್ರಿ ಅಮೆರಿಕ ಸೇರಿ ಸಭ್ಯರಾಗಿಬಿಟ್ಟರು! ಅಮೆರಿಕನ್​ ನಾಗರಿಕರಾಗಿಬಿಟ್ಟೊಡನೇ ಅವರ ಪಾಪಗಳೆಲ್ಲವೂ ತೊಳೆದುಹೋದವು. ಜರ್ಮನ್​ ರಾಜಕೀಯ ಹಾಗೂ ಸೇನಾ ನಾಯಕರನ್ನು ಯುದ್ಧಾಪರಾಧಗಳಿಗಾಗಿ ನ್ಯೂರೆಂರ್ಬಗ್​ನಲ್ಲಿ ವಿಚಾರಣೆಗೊಳಪಡಿಸಿ, ದೋಷಿಗಳೆಂದು ತೀರ್ಮಾನಿಸಿ ಗಲ್ಲಿಗೇರಿಸುತ್ತಿದ್ದಾಗಲೇ ಈ ವಿಾನಿಗಳು ಅಮೆರಿಕದಲ್ಲಿ ರಾಜೋಪಚಾರ ಅನುಭವಿಸುತ್ತಿದ್ದರು. ಮುಂದೆ ಅಣ್ವಸ್ತ್ರ ಕ್ಷಿಪಣಿ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಅಮೆರಿಕ ದಾಪುಗಾಲು ಹಾಕತೊಡಗಿದ್ದರಲ್ಲಿ ಈ ಮಾಜಿ ನಾಜಿ ವಿಾನಿಗಳ ಕೊಡುಗೆ ಅಪಾರ. ಹೀಗೆ ಹಿಂದೆ ಹ್ಯಾರಿ ಟ್ರೂಮನ್​ ಮಾಡಿದ್ದನ್ನೇ ಈಗ ಜೋ ಬೈಡೆನ್​ ಮಾಡಹೊರಟಿದ್ದಾರೆ. ಅವರ ಯೋಜನೆ ಯಶಸ್ವಿಯಾದರೆ ಇನ್ನು ಕೆಲವೇ ವರ್ಷಗಳಲ್ಲಿ ನವೀನ ಶಸ್ತ್ರಾಸ್ತ್ರಗಳನ್ನು ಅನ್ವೇಷಿಸಿ ಉತ್ಪಾದಿಸುವ ರಷ್ಯಾದ ಸಾಮರ್ಥ್ಯ ಕುಗ್ಗುತ್ತ ಹೋಗುತ್ತದೆ ಮತ್ತು ಅಮೆರಿಕ ಸೇನಾತಂತ್ರಾನದಲ್ಲಿ ಮಹಾಜಿಗಿತ ಸಾಧಿಸುತ್ತದೆ.

    ಇದಕ್ಕೆ ರಷ್ಯಾದ ಉತ್ತರ ಏನು? ಅಗಾಧ ಹಣ, ಪರಿಶ್ರಮ ಮತ್ತು ಸಮಯವನ್ನು ಬಳಸಿ ಸೃಷ್ಟಿಸಿರುವ ವಿಾನಿಗಳನ್ನು ಅದು ಸುಲಭವಾಗಿ ಕಳೆದುಕೊಳ್ಳಬಹುದೇ? ಕ್ರೆಮ್ಲಿನ್​ ಮುಂದಿರುವುದು ಇಕ್ಕಟ್ಟಿನ ಹಾದಿ. ವಿಾನಿಗಳನ್ನು ಕೈದಿಗಳಂತೆ ಇಟ್ಟುಕೊಳ್ಳುವುದು ಪರಿಹಾರದ ಮಾರ್ಗವಲ್ಲ. ಅಂತಹ ಸ್ಥಿತಿಯಲ್ಲಿ ಮನುಷ್ಯನ ಮಿದುಳು ಸಮರ್ಪಕವಾಗಿ ಕೆಲಸ ಮಾಡಲಾರದು. ಇದನ್ನು ಈಗಾಗಲೇ ಚೀನಾದಲ್ಲಿ ನೋಡುತ್ತಿದ್ದೇವೆ. ಚೀನೀ ವಿಾನಿಗಳು ಹೊಸದನ್ನು ಹುಡುಕುವ ಬದಲು ಇತರೆಡೆಗಳಿಂದ ಕದ್ದ ತಂತ್ರಾನಗಳನ್ನು ತುಸು ಮಾರ್ಪಡಿಸಿಕೊಂಡು ಅವು ತಮ್ಮವೇ ಎಂದು ಹೇಳುವ ಮಟ್ಟಕ್ಕಿಳಿದಿದ್ದಾರೆ. ಈ ನೀತಿ ಯಾವ ದೇಶವನ್ನೂ ಯಾವ ೇತ್ರದಲ್ಲೂ ಬಹುಕಾಲ ಮುಂಚೂಣಿಯಲ್ಲಿಡಲಾರದು. ಹೀಗಾಗಿ ತನ್ನ ವಿಾನಿಗಳನ್ನು ಇನ್ನಷ್ಟು ಅಕ್ಕರೆಯಿಂದ ಕಾಣುವುದರ ಜತೆಗೆ ಅವರು ಗಡಿ ದಾಟದಂತೆ ನೋಡಿಕೊಳ್ಳುವುದು ರಷ್ಯಾದ ನೀತಿಯಾಗಬಹುದು. ಇಂತಹ ನೀತಿಯಲ್ಲಿ ನಿಷ್ಣಾತನಾದವರೊಬ್ಬರು ಸದ್ಯದಲ್ಲೆ ರಷ್ಯಾದ ಚುಕ್ಕಾಣಿ ಹಿಡಿಯುವ ಸೂಚನೆ ದಟ್ಟವಾಗಿದೆ. ಅಧ್ಯಕ್ಷ ವ್ಲಾದಿಮಿರ್​ ಪೂತಿನ್​ರ ಆರೋಗ್ಯ ಹದಗೆಡುತ್ತಿರುವ ಸೂಚನೆ ಎರಡು ವರ್ಷಗಳ ಹಿಂದೆಯೇ ಕಂಡುಬಂದಿತ್ತು. ೆಬ್ರವರಿ 2020ರಲ್ಲಿ ಅವರು ಕ್ಯಾನ್ಸರ್​ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಪೂರ್ಣವಾಗಿ ಗುಣಮುಖರಾದಂತಿಲ್ಲ. ಅವರ ದೇಹಸ್ಥಿತಿ ಬಗ್ಗೆ ಕ್ರೆಮ್ಲಿನ್​ನಿಂದ ಯಾವುದೇ ವಿವರಗಳು ಹೊರಬರುವುದಿಲ್ಲ. ಆದರೆ ರಷ್ಯನ್​ ದೂರದರ್ಶನದಲ್ಲಿ ಕಾಣಬರುವ ಅವರ ಮುಖಭಾವ ಮತ್ತು ಮಾತು ಅವರು ಹಿಂದಿನಂತೆ ಇಲ್ಲ ಎಂದು ಸೂಚಿಸುತ್ತದೆ ಎಂದು ಪಶ್ಚಿಮದ ವೈದ್ಯವರ್ಗ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ಪೂತಿನ್​ ಮತ್ತೆ ಶಸ್ತ್ರಚಿಕಿತ್ಸೆ ಮತ್ತು ಶುಶ್ರೂಷೆಗಾಗಿ ದೀರ್ಕಾಲ ಸಾರ್ವಜನಿಕ ಬದುಕಿನಿಂದ ಮರೆಯಾಗುವ ಸಾಧ್ಯತೆ ದಟ್ಟವಾಗಿದೆ. ಆಗ ಅವರ ನೀತಿಗಳನ್ನು ಅಷ್ಟೇ ನಿಷ್ಠೆಯಿಂದ ಮುಂದುವರಿಸುವ ಮತ್ತೊಬ್ಬ ಸಮರ್ಥ ನಾಯಕನ ತಾತ್ಕಾಲಿಕ ಅಗತ್ಯವುಂಟಾಗುತ್ತದೆ. ಈಗಿನ ಲೆಕ್ಕಾಚಾರಗಳ ಪ್ರಕಾರ ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿ ನಿಕೊಲಾಯ್​ ಪಾತ್ರುಶೆವ್​.

    71 ವರ್ಷದ ಪಾತ್ರುಶೆವ್​ ಹಿಂದಿನ ಸೋವಿಯತ್​ ಗುಪ್ತಚರ ಸಂಸ್ಥೆ ಕೆಜಿಬಿಯ ಉತ್ತರಾಧಿಕಾರಿಯಾದ ಇಂದಿನ ರಷ್ಯನ್​ ಎ್​ಎಸ್​ಬಿಯ ನಿರ್ದೇಶಕರಾಗಿದ್ದವರು. ಅವರೀಗ ರಷ್ಯಾದ ರಾಷ್ಟ್ರೀಯ ಸುರಾ ಸಮಿತಿಯ ಕಾರ್ಯದರ್ಶಿ. ಇಂದಿನ ಆಡಳಿತದಲ್ಲಿ ಪೂತಿನ್​ ನಂತರ ಎರಡನೆಯ ಸ್ಥಾನದಲ್ಲಿರುವ ಪಾತ್ರುಶೆವ್​ ಉತ್ಕ ೃಷ್ಟ ಬೇಹುಗಾರ ಮತ್ತು ದಿಟ್ಟ ರ್ನಿಣಯಗಳಿಗೆ ಹೆಸರಾದ ಆಡಳಿತಗಾರ. ನಮ್ಮ ಗೃಹಮಂತ್ರಿ ಅಮಿತ್​ ಷಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ರನ್ನು ಒಟ್ಟುಗೂಡಿಸಿದರೆ ನಿಮಗೆ ಒಬ್ಬ ಪಾತ್ರುಶೆವ್​ ದೊರೆಯುತ್ತಾರೆ ಎಂದರೆ ಈ ವ್ಯಕ್ತಿಯ ಒಂದು ರ್ನಿದಿಷ್ಟ ಚಿತ್ರಣ ನಿಮಗೆ ಸಿಗಬಹುದು.
    ನಾಜಿ ಜರ್ಮನಿಯ ವಿರುದ್ಧದ ವಿಜಯದ ವಾರ್ಷಿಕೋತ್ಸವ ಆಚರಣೆ ಇದೇ ಮೇ 9ರಂದು ವಿಧ್ಯುಕ್ತವಾಗಿ ಜರುಗಿದ ನಂತರ ಪೂತಿನ್​ ಹಿಂದೆ ಸರಿದು ಪಾತ್ರುಶೆವ್​ ಕ್ರೆಮ್ಲಿನ್​ ಚುಕ್ಕಾಣಿ ಹಿಡಿಯಬಹುದು. ಯೂಕ್ರೇನ್​ ವಿಷಯದಲ್ಲಿ ಪಾತ್ರುಶೆವ್​ರ ರ್ನಿಣಯಗಳನ್ನೇ ಇದುವರೆಗೆ ಪೂತಿನ್​ ಜಾರಿಗೆ ತಂದಿದ್ದಾರೆ ಎಂಬ ಮಾತೂ ಇದೆ. ಈ ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳು ಸಹಜವಾಗಿಯೇ ಉಂಟಾಗುತ್ತವೆ. ಪಾತ್ರುಶೆವ್​ ಎದುರು ಬೈಡೆನ್​ ಯೋಜನೆಗಳು ಎಷ್ಟು ದಿನ ನಿಲ್ಲಬಹುದು? ಝೆಲೆನ್ಸ್​ಕಿಗೆ ವಿವೇಕ ಮೂಡಲು ಇನ್ನೆಷ್ಟು ದಿನ ಬೇಕಾಗಬಹುದು? ಕಾದು ನೋಡೋಣ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts