More

    ಹೂಳು ತೆಗೆಯಲು ಚಾಲನೆ: ವಿಜಯವಾಣಿ ವರದಿ ಪರಿಣಾಮ

    ಮಂಡ್ಯ: ಮದ್ದೂರು ಪಟ್ಟಣದ ಕೆಮ್ಮಣ್ಣು ನಾಲೆಯಲ್ಲಿದ್ದ ಹೂಳು ಮತ್ತು ಗಿಡ ಗಂಟಿಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಂದಾಗಿದ್ದಾರೆ.
    ಜೂ.20ರಂದು ‘ವಿಜಯವಾಣಿ’ ಕೆಮ್ಮಣ್ಣು ನಾಲೆಯ ಹೂಳೆತ್ತಿ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಹೂಳು ಮತ್ತು ಗಿಡ ಗಂಟಿಗಳನ್ನು ತೆರವುಗೊಳಿಸುತ್ತಿರುವುದು ರೈತರಿಗೆ ಸಂತೋಷ ತಂದಿದೆ. ಕೆಮ್ಮಣ್ಣು ನಾಲೆಯಲ್ಲಿ ತೆರವುಗೊಳಿಸುತ್ತಿರುವ ಗಿಡ ಗಂಟಿಗಳನ್ನು ಟ್ರ್ಯಾಕ್ಟರ್ ಮೂಲಕ ಬೇರೆ ಕಡೆಗೆ ಸಾಗಿಸಬೇಕು. ಅದನ್ನು ಬಿಟ್ಟು ನಾಲೆಯ ಪಕ್ಕದಲ್ಲೆ ಹಾಕುವುದರಿಂದ ಮಳೆ ಬಂದಾಗ ಮತ್ತೆ ಹೂಳು ಸೇರಿಕೊಳ್ಳುವುದರಿಂದ ಸರ್ಕಾರದ ಹಣ ವ್ಯರ್ಥವಾಗುತ್ತದೆ. ಈ ಹಿನ್ನೆಲೆಯಲ್ಲಿ ಹೂಳು ಮತ್ತು ಗಿಡ ಗಂಟಿಗಳನ್ನು ಟ್ರ್ಯಾಕ್ಟರ್ ಮೂಲಕ ಬೇರೆ ಕಡೆಗೆ ಸಾಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts