More

    ಜನಸೇವಕ ಚಂದು ಪಾಟೀಲ್‌ಗೆ ವಿಜಯರತ್ನ ಗರಿ; ವಿಜಯವಾಣಿ-ದಿಗ್ವಿಜಯ ವಾಹಿನಿಯ ಪ್ರತಿಷ್ಠಿತ ಗೌರವ

    ಬೆಂಗಳೂರು: ಅಭಿವೃದ್ಧಿಪರ ಚಿಂತಕ, ಜನಸೇವಕ, ಸಮಾಜಪರ ಕಾಳಜಿಯುಳ್ಳ ನಾಯಕ, ಈ ಭಾಗದ ಪ್ರಖ್ಯಾತ ಯುವ ಉದ್ಯಮಿಯೂ ಆದ ಬಿಜೆಪಿ ಮುಖಂಡ ಚಂದ್ರಕಾಂತ (ಚಂದು) ಪಾಟೀಲ್ ಅವರು ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ವಿಜಯರತ್ನ-2022’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಚಂದು ಪಾಟೀಲ್ ಅವರು ನಿರಂತರ ಮಾಡುತ್ತಿರುವ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಗುರುತಿಸಿ ‘ವಿಜಯರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಜರುಗಿದ ಸಮಾರಂಭದಲ್ಲಿ ಚಂದು ಪಾಟೀಲ್ ಸೇರಿದಂತೆ 42 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆರೋಗ್ಯ ಸಚಿವ ಡಾ. ಸುಧಾಕರ್, ಎಂಎಲ್​​ಸಿ ಡಾ.ಬಿ.ಜಿ. ಪಾಟೀಲ್, ಚಿತ್ರನಟ ರಮೇಶ್ ಅರವಿಂದ್, ನಟಿ ಶರ್ಮಿಳಾ ಮಾಂಡ್ರೆ, ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ, ವಿಆರ್‌ಎಲ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷೆ ವಾಣಿ ಆನಂದ ಸಂಕೇಶ್ವರ ಇದ್ದರು.

    ನಿರಂತರ ಸಮಾಜ ಸೇವೆ: ಈ ಭಾಗದ ಯುವ ಉದ್ಯಮಿಗಳ ಸಾಲಿನಲ್ಲಿ ಚಂದು ಪಾಟೀಲ್ ಹೆಸರು ಅಗ್ರಪಂಕ್ತಿಯಲ್ಲಿದೆ. ಇವರದ್ದು ಬಹುಮುಖಿ ಸೇವೆ. ರಾಜಕೀಯ, ಸಾಮಾಜಿಕ, ಶಿಕ್ಷಣ, ಔದ್ಯೋಗಿಕ, ಧಾರ್ಮಿಕ ಹೀಗೆ ನಾನಾ ಕ್ಷೇತ್ರಗಳ ಮುಖಾಂತರ ಸಮಾಜ ಸೇವೆಗೆ ಸಮರ್ಪಿಸಿಕೊಂಡು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಇವರು ಖ್ಯಾತ ಉದ್ಯಮಿ, ಬಿಜೆಪಿ ಮುಖಂಡರು ಮಾತ್ರವಲ್ಲ. ಇವರೊಬ್ಬ ಅಪ್ಪಟ ಹೃದಯವಂತ ಸಾಮಾಜಿಕ ಜೀವಿ, ಅಭಿವೃದ್ಧಿಪರ ವಿಚಾರಧಾರೆಯುಳ್ಳ ಚಿಂತಕರು ಎಂಬುದು ವಿಶೇಷ.

    ಮಹಾತ್ಮ ಬಸವಣ್ಣನವರ ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಹಾಗೂ ಕಾಯಕ ಮತ್ತು ದಾಸೋಹ ತತ್ವವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ. ನಯ, ವಿನಯ, ಸರಳ ವ್ಯಕ್ತಿತ್ವ ಮೂಲಕವೇ ಸಾಧನೆ ಮಾಡುತ್ತಿದ್ದಾರೆ. ನಿರಂತರ ಸಮಾಜೋಧಾರ್ಮಿಕ ಕಾರ್ಯಗಳಿಗೆ ಕೈಲಾದಷ್ಟು ಸಹಾಯ ಮಾಡುತ್ತಿರುವ ದಾಸೋಹ ಜೀವಿ. ಇವರು ಉತ್ತಮ ಸ್ನೇಹ ಜೀವಿ. ಇನ್ನೊಬ್ಬರ ನೋವು, ಕಷ್ಟ ಕಂಡು ಮಿಡಿಯುತ್ತಾರೆ. ಸಂಕಷ್ಟಕ್ಕೆ ಸಿಲುಕಿದ್ದವರಿಗೆ ಜಾತಿ, ಮತ, ಪಂಥದ ಭೇದ ಮಾಡದೆ ನೆರವಿಗೆ ಧಾವಿಸುವ ಹೃದಯವೈಶಾಲ್ಯತೆ ಹೊಂದಿದ್ದಾರೆ. ಎಲ್ಲರೊಂದಿಗೆ ಬೆರೆಯುವ ಸರಳ ವ್ಯಕ್ತಿತ್ವದಿಂದ ಜನಮನ ಗೆದ್ದಿದ್ದಾರೆ.

    ನಮ್ಮ ಮನೆತನ ಮುಂಚಿನಿಂದಲೇ ಕಷ್ಟದಲ್ಲಿದ್ದವರಿಗೆ, ನೊಂದವರಿಗಾಗಿ ಒಂದಿಲ್ಲೊಂದು ರೀತಿಯಲ್ಲಿ ಸಹಾಯಹಸ್ತ ಚಾಚುತ್ತಲೇ ಬಂದಿದೆ. ತಂದೆ ಡಾ.ಬಿ.ಜಿ.ಪಾಟೀಲ್ ಮಾರ್ಗದರ್ಶನದಲ್ಲಿ ಸಮಾಜಮುಖಿ ಸೇವೆ ನಡೆಸಲಾಗುತ್ತಿದೆ. ಸಮಾಜ ಸೇವೆಗಾಗಿ ಸಮಯ ಮೀಸಲಿಡಲಾಗಿದೆ. ಕೋವಿಡ್ ಕಷ್ಟ ಕಾಲದಲ್ಲಿ ಜೀವದ ಹಂಗು ತೊರೆದು ಜನರ ಹಿತಕ್ಕೆ ದುಡಿದಿದ್ದೇವೆ. ಅಜ್ಜ ದಿ. ಗಳಂಗಳಪ್ಪ ಪಾಟೀಲ್ ಬಾಲ್ಯದಿಂದ ನಮಗೆ ಪ್ರೇರಣೆ ನೀಡುತ್ತ ನಮ್ಮ ತುಂಬು ಕುಟುಂಬದಲ್ಲಿ ಸಂಸ್ಕಾರ ತುಂಬಿದ್ದಾರೆ. ನಮಗೆ ಅಧಿಕಾರಕ್ಕಿಂತ ಜನಹಿತ ಮುಖ್ಯ. ಬಡವರಿಗೆ, ನೊಂದವರಿಗೆ ನೆರವಾಗುತ್ತ ನಿರಂತರ ಜನಸೇವೆ ಮುಂದುವರಿಯಲಿದೆ.

    | ಚಂದು ಪಾಟೀಲ್ ಎಸ್‌ಬಿಪಿ ಗ್ರೂಪ್​ ಆಫ್ ಇಂಡಸ್ಟ್ರೀಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್

    ಜನಸೇವಕ ಚಂದು ಪಾಟೀಲ್‌ಗೆ ವಿಜಯರತ್ನ ಗರಿ; ವಿಜಯವಾಣಿ-ದಿಗ್ವಿಜಯ ವಾಹಿನಿಯ ಪ್ರತಿಷ್ಠಿತ ಗೌರವಅಭಿವೃದ್ಧಿಯ ತುಡಿತ: ಶ್ರೀಮಂತರ ಸಾಲಿಗೆ ಸೇರಿದರೂ ಚಂದು ಪಾಟೀಲ್ ಅವರಲ್ಲಿ ಅಹಂ ಭಾವ ಕಾಣಿಸದು. ಘಮಂಡ್ ತಮ್ಮ ಸನಿಹ ಸುಳಿಯುವುದಕ್ಕೆ ಸಹ ಬಿಟ್ಟಿಲ್ಲ. ಸೀದಾ-ಸಾದಾ ನಡೆಯೊಂದಿಗೆ ಎಲ್ಲ ಧರ್ಮೀಯರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಇವರ ತುಡಿತ ಮಾದರಿ. ಇದಕ್ಕೆಲ್ಲ ತಂದೆ ಎಂಎಲ್​​ಸಿ ಡಾ.ಬಿ.ಜಿ.ಪಾಟೀಲ್ ಅವರ ಮಾರ್ಗದರ್ಶನ, ಪ್ರೇರಣೆ ಮತ್ತು ಅಜ್ಜ ದಿ.ಗಳಂಗಳಪ್ಪ ಪಾಟೀಲ್ ಆಶೀರ್ವಾದ ಕಾರಣ. ಈ ಮನೆತನದ ಎಸ್‌ಬಿ ಪಾಟೀಲ್ ಗ್ರೂಪ್ ಆಫ್ ಇಂಡಸ್ಟ್ರೀಸ್‌ಗೆ ಚಂದು ಪಾಟೀಲ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸಹ ಹೌದು. ಸಮಾಜಕ್ಕೆ ಈ ಗ್ರೂಪ್ ಮಹತ್ವದ ಕೊಡುಗೆ ನೀಡುತ್ತಿದೆ. ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಯ ಬ್ರ್ಯಾಂಡ್ ಹೊಂದಿದೆ. ಸಾವಿರಾರು ಜನ ಇಲ್ಲಿ ಕೆಲಸ ಮಾಡುತ್ತಿದ್ದು, ಉತ್ತಮ ಬದುಕು ಕಂಡುಕೊಂಡಿದ್ದಾರೆ.

    ಶೈಕ್ಷಣಿಕ ಸೇವೆ: ಎಸ್‌ಬಿಪಿ ಗ್ರೂಪ್​ ಅಡಿ ಶಿಕ್ಷಣ ಸಂಸ್ಥೆಗಳು ಈ ಭಾಗದ ಶೈಕ್ಷಣಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಿವೆ. ಇಲ್ಲಿರುವ ಚಂದ್ರಕಾಂತ ಪಾಟೀಲ್ ಆಂಗ್ಲ ಮಾಧ್ಯಮ (ಸಿಬಿಎಸ್‌ಇ) ಶಾಲೆ, ಚಂದ್ರಕಾಂತ ಪಾಟೀಲ್ ಪಬ್ಲಿಕ್ (ಸ್ಟೇಟ್ ಸಿಲೆಬಸ್) ಸ್ಕೂಲ್, ಚಂದ್ರಕಾಂತ ಪಾಟೀಲ್ ಮೆಮೋರಿಯಲ್ (ವಿಜ್ಞಾನ, ವಾಣಿಜ್ಯ) ಪದವಿಪೂರ್ವ ಮಹಾವಿದ್ಯಾಲಯ, ಅಮೀತ್ ಪಾಟೀಲ್ ಸಿಬಿಎಸ್‌ಇ ಸ್ಕೂಲ್ ಆ್ಯಂಡ್ ಕಾಲೇಜಿಗೆ ಚಂದು ಪಾಟೀಲ್ ಆಗಾಗ್ಗೆ ಭೇಟಿ ನೀಡುತ್ತಾರೆ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ.

    ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದನೆ

    ಸ್ಥಳೀಯವಾಗಿ ಸದಾ ಲಭ್ಯವಿರುವ ಚಂದು ಪಾಟೀಲ್ ಅವರು ತಮ್ಮ ನಿತ್ಯದ ಕೆಲಸ-ಕಾರ್ಯಗಳ ಒತ್ತಡದ ಮಧ್ಯೆಯೂ ಶೈಕ್ಷಣಿಕ, ಸಾಮಾಜಿಕ, ಜನಪರ ಕೆಲಸಗಳಿಗಾಗಿ ಸಮಯ ಕೊಡುತ್ತಾರೆ. ಕಲಬುರಗಿ ಉತ್ತರ ಕ್ಷೇತ್ರದ ಜನರ ಸೇವೆಗಂತೂ ಫುಲ್ ಟೈಮ್ ಮೀಸಲು ಇಟ್ಟಿದ್ದಾರೆ. ಕ್ಷೇತ್ರದ ಯಾರೇ ಬರಲಿ, ಎಂಥದ್ದೇ ಒತ್ತಡ ಸಂದರ್ಭವಿದ್ದರೂ ನಗುನಗುತ್ತ ಮಾತನಾಡಿಸುವ ಶೈಲಿ ಎಂಥವರನ್ನೂ ಇವರತ್ತ ಸೆಳೆಯುವಂತೆ ಮಾಡುತ್ತದೆ. ಎಲ್ಲರಿಗೂ ‘ನಮಸ್ಕಾರ, ಆರಾಮ ಇದ್ದೀರಾ?’ ಎಂದು ಅತಿ ಸರಳತೆ, ವಿನಮ್ರತೆಯಿಂದ ಮಾತನಾಡಿಸುತ್ತಾರೆ. ಇವರ ಸರಳ ವ್ಯಕ್ತಿತ್ವ, ಸೌಜನ್ಯತೆಯ ಸ್ವಭಾವ ಜನಮನ ಗೆದ್ದಿದೆ. ಇನ್ನೊಬ್ಬರ ಕಷ್ಟಕ್ಕೆ ಮಿಡಿದು, ಅದಕ್ಕೆ ತಕ್ಷಣ ಸ್ಪಂದಿಸುವ ಹೃದಯವಂತಿಕೆ ಹೊಂದಿದ್ದಾರೆ. ಜನತೆ ಸಮಸ್ಯೆ ಹೊತ್ತು ಬಂದರೆ, ಅದು ತಮ್ಮ ಸಮಸ್ಯೆ ಎಂದು ಭಾವಿಸಿ ಪರಿಹಾರ ಒದಗಿಸಲು ಪ್ರಯತ್ನಿಸುವುದು ಇವರ ದೊಡ್ಡ ಗುಣ. ಉತ್ತರ ಕ್ಷೇತ್ರದಲ್ಲಿ ಬರುವ ವಿವಿಧ ಬಡಾವಣೆಗಳ ಜನರ ಹತ್ತಾರು ಸಮಸ್ಯೆಗಳನ್ನು ನಿವಾರಿಸಿದ ಶ್ರೇಯ ಇವರಿಗೆ ಸಲ್ಲುತ್ತದೆ. ಸಮಾಜಪರ, ಅಭಿವೃದ್ಧಿಪರ ಕೆಲಸಕಾರ್ಯಗಳಿಗಾಗಿ ಹಗಲಿರುಳೆನ್ನದೇ ದುಡಿಯುವುದು ಇವರ ವಿಶೇಷತೆ. ಈ ಕಾರಣಕ್ಕೆ ನಮ್ಮ ಸಂಕಷ್ಟ ನಿವಾರಿಸಲು ಚಂದು ಪಾಟೀಲ್ ಇದ್ದಾರೆ ಎಂದು ಉತ್ತರ ಕ್ಷೇತ್ರದ ಜನರು ಹೆಮ್ಮೆಯಿಂದ ಹೇಳುತ್ತಾರೆ.

    ಜನಪರ ಕಾಳಜಿಯ ಫೌಂಡೇಷನ್

    ಚಂದು ಪಾಟೀಲ್ ಕಲಬುರಗಿ ಉತ್ತರ ವಿಧಾನಸಭೆ ಕ್ಷೇತ್ರದಿಂದ ಕಳೆದ ಬಾರಿ ಸ್ಪರ್ಧಿಸಿ ಅಲ್ಪ ಮತಗಳಿಂದ ಸೋತರು. ಸೋಲಿನಿಂದ ನಿರಾಶರಾಗದ ಇವರು ಸೋಲೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿ ಮತ್ತಷ್ಟು ಜನರ ಸೇವೆಯಲ್ಲಿ ತೊಡಗಿದ್ದಾರೆ. ಇದು ಇವರಿಗೆ ಜನರ ಬಗ್ಗೆ ಇರುವಂಥ ಕಾಳಜಿಗೆ ಸಾಕ್ಷಿ ಎನಿಸಿದೆ. ಬಿಜೆಪಿಯಲ್ಲಿ ಇವರು ಮಾಡುತ್ತಿರುವ ಕೆಲಸಕಾರ್ಯ ಗುರುತಿಸಿ ಕರ್ನಾಟಕ ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿ ನಿಗಮ (ಕ್ರೆಡಲ್)ಅಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ. ಇಲ್ಲಿ ವಿಶಿಷ್ಟ ಕೆಲಸ ಮಾಡುತ್ತ ಕ್ರೆಡಲ್‌ಗೆ ನವಶಕ್ತಿ ತುಂಬಿದ ಶ್ರೇಯ ಇವರಿಗೆ ಸಲ್ಲುತ್ತದೆ. ಸಮಾಜ ಸೇವೆಗಾಗಿಯೇ ಚಂದು ಪಾಟೀಲ್ ಫೌಂಡೇಷನ್ ಸ್ಥಾಪಿಸಿದ್ದು, ಸಮಾಜಮುಖಿ ಕೆಲಸ ಮತ್ತಷ್ಟು ವಿಸ್ತರಿಸಲಾಗಿದೆ. ಕರೊನಾ ವೇಳೆ ಕಷ್ಟದಲ್ಲಿದ್ದ ಸಾವಿರಾರು ಕುಟುಂಬಕ್ಕೆ ಆಹಾರ ಕಿಟ್ ಸೇರಿ ನಾನಾ ತರಹದ ನೆರವಿಗೆ ಬಂದು ಜನಪರ ಕಾಳಜಿ ಮೆರೆದಿದ್ದಾರೆ. ಯುವ ನೇತಾರನ ಸಮಾಜಮುಖಿ ಕಾರ್ಯ ಜನರು ಕೊಂಡಾಡುತ್ತಿದ್ದಾರೆ. ಉಚಿತ ಆರೋಗ್ಯ ತಪಾಸಣೆ ಶಿಬಿರ, ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ನೆರವು ಸೇರಿ ಹಲವಾರು ಚಟುವಟಿಕೆ ನಿರಂತರ ನಡೆದಿವೆ. ಪ್ರತಿ ವರ್ಷ ಹತ್ತಾರು ಬಡಪಾಯಿಗಳಿಗೆ ಇಂಜಿನಿಯರಿಂಗ್ ಶಿಕ್ಷಣದ ವೆಚ್ಚ ಭರಿಸುತ್ತಿರುವುದು ವಿಶೇಷ. ಚಂದು ಪಾಟೀಲ್‌ಗೆ ಜನಬೆಂಬಲ ಜತೆಗೆ ಇವರ ಹಿಂದೆ ದೊಡ್ಡ ಯುವ ಪಡೆಯಿದ್ದು, ನಾನಾ ಕೆಲಸಗಳು ಪರಿಣಾಮಕಾರಿ ಮಾಡಿ ನೊಂದವರಿಗೆ ನೆರವಾಗುತ್ತಿದ್ದಾರೆ. ಚಂದು ಪಾಟೀಲ್ ಅಭಿಮಾನಿ ಬಳಗವೇ ಹುಟ್ಟಿಕೊಂಡಿದ್ದು, ಸೇವಾ ಕಾರ್ಯ ನಡೆಸಲಾಗುತ್ತಿದೆ.

    ಇಷ್ಟವಿಲ್ಲದ ಮದುವೆ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ..

    ನಿದ್ರೆ ಬರುತ್ತಿಲ್ಲ ಎಂದು ಬೇಸತ್ತು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts