More

    ಚಿನ್ನ-ಬೆಳ್ಳಿ ಆಭರಣ ಜಪ್ತು

    ವಿಜಯಪುರ: ಕಳ್ಳತನ, ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಚುರುಕಿನ ಕಾರ್ಯಾಚರಣೆ ನಡೆಸಿರುವ ಪೊಲೀಸರು ಹತ್ತು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

    ನಗರದಲ್ಲಿ ಈಚೆಗೆ ನಡೆದ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೋಹಿತ ರಾಮು ಕಾಯಗೊಂಡ (33) ಎಂಬಾತನನ್ನು ಬಂಧಿಸಿ 101.7 ಗ್ರಾಂ ಚಿನ್ನಾಭರಣ, 270 ಗ್ರಾಂ ಬೆಳ್ಳಿಯ ಆಭರಣ ಸೇರಿದಂತೆ ಒಟ್ಟು 4,96,200 ರೂ. ಮೌಲ್ಯದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ. ಜಗದಾಳೆ ಗಲ್ಲಿ, ಸೇನಾನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿರುವ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ ಅಗರವಾಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸ್ಯಾಟ್‌ಲೈಟ್ ಬಸ್ ನಿಲ್ದಾಣದಲ್ಲಿ ಅಸ್ಲಂ ಮಹಿಬೂಬ್ ಸನದಿ (27) ಎಂಬಾತನನ್ನು ಬಂಧಿಸಿ 100 ಗ್ರಾಂ ಚಿನ್ನಾಭರಣ ಸೇರಿ ಒಟ್ಟು 4.80 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಈತ ರಹೀಮ್ ನಗರ, ಶಾಸ್ತ್ರೀ ನಗರ, ಕುಲಕರ್ಣಿ ಲೇಔಟ್, ಟ್ರೇಜರಿ ಕಾಲನಿ, ಅಯ್ಯಪ್ಪಸ್ವಾಮಿ ಬಡಾವಣೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿರುವ ಬಗ್ಗೆ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಗಿ ಎಸ್‌ಪಿ ತಿಳಿಸಿದರು.

    ಬಬಲೇಶ್ವರ ಠಾಣೆ ವ್ಯಾಪ್ತಿ
    ಬಬಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಎಂಎಸ್‌ಐಎಲ್ ವೈನ್‌ಶಾಪ್ ಹಾಗೂ ಇಂಡಿಯನ್ ಗ್ಯಾಸ್ ಗೋಡೌನ್ ಕೀಲಿ ಮುರಿದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದೆ.

    ಸಂತೋಷ ಉರ್ಫ್ ಕಂತ್ರಿ ರೇವು ರಾಠೋಡ, ಮಿಥುನ ರಾಠೋಡ, ಅನಿಲ್ ಚವಾಣ್, ಬಸಯ್ಯ ಮಠಪತಿ, ಮನೋಜ ಸಿಂಗೆ, ಸಂತೋಷ ಲೋಣಾರ, ರಫೀಕ್ ಸೋರೆಗೋಳ, ಸುಂದರ ಹರಿಜನ ಬಂಧಿತ ಆರೋಪಿಗಳು. ಇವರಿಂದ 29 ಸಾವಿರ ರೂ.ನಗದು, 2 ಲ್ಯಾಪ್‌ಟಾಪ್, ಒಂದು ಮೊಬೈಲ್, ಎರಡು ಮೋಟಾರ್ ಸೈಕಲ್, 1 ಗೂಡ್ಸ್ ವಾಹನ ಸೇರಿದಂತೆ ಐದು ಲಕ್ಷ ರೂ.ಮೌಲ್ಯದ ಸಾಮಗ್ರಿ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಎಸ್‌ಪಿ ಅಗರವಾಲ್ ತಿಳಿಸಿದರು.

    36 ಆರೋಪಿಗಳ ಬಂಧನ
    ಕನ್ನಾಳ ಕ್ರಾಸ್ ಬಳಿ ನಡೆದ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 36 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಎಸ್‌ಪಿ ಅನುಪಮ ಅಗರವಾಲ್ ತಿಳಿಸಿದರು.

    ಕಳೆದ ನವೆಂಬರ್ 2 ರಂದು ಮಹಾದೇವ ಸಾಹುಕಾರ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ಪ್ರಕರಣವನ್ನು ಪೊಲೀಸರು ಅತ್ಯಂತ ಚುರುಕಿನಿಂದ ತನಿಖೆ ನಡೆಸಿದ್ದಾರೆ. ಒಟ್ಟು 5 ಕಂಟ್ರಿ ಪಿಸ್ತೂಲ್, 8 ಜೀವಂತ ಗುಂಡು, 2 ಆಟೋರಿಕ್ಷಾ, ಒಂದು ಟಿಪ್ಪರ್, 4 ಕಾರು, 32 ಮೊಬೈಲ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದರು.

    ಅಶ್ಲೀಲ ಫೋಟೋ ಹರಿಬಿಟ್ಟವನ ಬಂಧನ: ಫೆಸ್​‌ಬುಕ್ ಐಡಿಯನ್ನು ದುರಪಯೋಗಪಡಿಸಿಕೊಂಡು ಊರಿನ ಹಿರಿಯರ ಘನತೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ. ರ್ಇಾನ್ ಶೌಖತ್ ಅಲಿ ನದ್ಾ ಎಂಬಾತ ಬಂಧಿತ ಆರೋಪಿ. ಈತನ ವಿರುದ್ಧ ಕಳೆದ ಜ.19 ರಂದು ದೂರು ದಾಖಲಾಗಿತ್ತು. ಈತನ ಮೊಬೈಲ್ ಸೀಜ್ ಮಾಡಲಾಗಿದೆ ಎಂದು ಎಸ್‌ಪಿ ತಿಳಿಸಿದರು.

    ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ 8 ಜನರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

    12 ಪ್ರಕರಣಗಳಲ್ಲಿ ಭಾಗಿಯಾಗಿರುವ ಚಾಂಚಪೀರ ಉರ್ ರಮಲಿ ಮೊಹ್ಮದ್‌ಗೌಸ್ ಇನಾಮದಾರ, 11 ಪ್ರಕರಣಗಳಲ್ಲಿ ಭಾಗಿಯಾಗಿರುವ ಸೈನ್‌ಸಾಬ್ ರಜಾಕ್‌ಸಾಬ್ ಮಕಾನದಾರ, 14 ಪ್ರಕರಣಗಳಲ್ಲಿ ಭಾಗಿಯಾಗಿರುವ ಸತೀಶ ಉರ್ ಸತ್ಯಾ ಧನರಾಜ್ ನಾಯಕ, 16 ಪ್ರಕರಣಗಳಲ್ಲಿ ಭಾಗಿಯಾಗಿರುವ ದೇವೆಂದ್ರ ತದ್ದೇವಾಡಿ, 8 ಪ್ರಕರಣಗಳಲ್ಲಿ ಭಾಗಿಯಾಗಿರುವ ಚಂದ್ರಶೇಖರ ವಾಡೇ ಉರ್ ವಾಡೇದ, 4 ಪ್ರಕರಣಗಳಲ್ಲಿ ಭಾಗಿಯಾಗಿರುವ ಸಂಗನಗೌಡ ಸಂಕನಾಳ, 15ಪ್ರಕರಣಗಳಲ್ಲಿ ಭಾಗಿಯಾಗಿರುವ ಹೈದರಲಿ ಬಾಬುಸಾಬ್ ನದ್ಾ ಹಾಗೂ 7 ಪ್ರಕರಣಗಳಲ್ಲಿ ಭಾಗಿಯಾಗಿರುವ ಪೀರಪ್ಪ ಕಟ್ಟಿಮನಿ ಮೇಲೆ ಗೂಂಡಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 78 ಜನರ ಮೇಲೆ ರೌಡ್ ಶೀಟ್ ತೆರೆಯಲಾಗಿದ್ದು, ಅವರ ಚಲನವಲನಗಳ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ ಎಂದು ವಿವರಿಸಿದರು.

    ಡಿವೈಎಸ್‌ಪಿ ಲಕ್ಷ್ಮಿ ನಾರಾಯಣ, ಸಿಪಿಐ ರವೀಂದ್ರ ನಾಯ್ಕೋಡಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts