More

    ಸಿದ್ಧೇಶ್ವರ ಜಾತ್ರೆ ಸರಳವಾಗಿ ಆಚರಣೆ

    ವಿಜಯಪುರ: ಪುರದೇವತೆ ಶ್ರೀ ಸಿದ್ಧೇಶ್ವರ ಜಾತ್ರೆಯನ್ನು ಕರೊನಾ ಹಿನ್ನೆಲೆ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
    ಗುರುವಾರ ದೇವಸ್ಥಾನ ಮುಂಭಾಗ ಶ್ರೀ ಸಿದ್ಧೇಶ್ವರ ಸಂಸ್ಥೆ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು. ಪಲ್ಲಕ್ಕಿ ಉತ್ಸವ, ನಂದಿ ಧ್ವಜಗಳ ಮೆರವಣಿಗೆ, ಹೋಮ-ಹವನ ಮುಂತಾದ ಕಾರ್ಯಕ್ರಮಗಳು ನೆರವೇರಿದವು.
    ಸಿದ್ಧೇಶ್ವರ ಸಂಸ್ಥೆ ಚೇರ್ಮನ್ ಬಸಯ್ಯ ಎಸ್. ಹಿರೇಮಠ ಹಾಗೂ ರಾಮನಗೌಡ ಬ. ಪಾಟೀಲ (ಯತ್ನಾಳ) ನೇತೃತ್ವದಲ್ಲಿ ಮಧ್ಯಾಹ್ನ 12.35 ಕ್ಕೆ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧೆ ಭಕ್ತಿಯಿಂದ ಹೋಮ ಹವನ ನೆರವೇರಿತು. ಶುದ್ಧೋದಕರಿಂದ ಶುಚಿಗೊಳಿಸಿದ ಧಾರ್ಮಿಕ ವಿಧಿ-ವಿಧಾನಗಳಿಂದ ಸಿಂಗಾರಗೊಂಡಿದ್ದ ಹೋಮ ಕಟ್ಟೆಯಲ್ಲಿ ಆರ್ಘ್ಯ, ಪಾದ್ಯ ಆಚಮನಗಳೊಂದಿಗೆ ಅಭಿಷೇಕ ಸಲ್ಲಿಸಲಾಯಿತು.
    ಚಂದನದ ಕಟ್ಟಿಗೆ ಎಳ್ಳು ಧಾನ್ಯಗಳಿಂದ ಕೂಡಿದ ಕಟ್ಟೆ ಮೇಲೆ ಹಾವೇರಿ ಜಿಲ್ಲೆಯ ಫಕೀರಯ್ಯ ಶಾಸಿಗಳ ನೇತೃತ್ವದಲ್ಲಿ ಹೋಮ ಹವನ ನೆರವೇರಿಸಲಾಯಿತು. ಈರಯ್ಯಶಾಸಿ, ಮಂಜಯ್ಯ ಶಾಸಿ, ಸಿದ್ದಯ್ಯ ಶಾಸಿ, ಸಿದ್ಧರಾಮಯ್ಯ ಶಾಸ್ತ್ರಿ, ಮುರಗಯ್ಯ ಗಚ್ಚಿನಮಠ ಹಾಜರಿದ್ದರು.
    ಸಂಸ್ಥೆ ಕಾರ್ಯದರ್ಶಿ ಸದಾನಂದ ದೇಸಾಯಿ, ಕೋಶ್ಯಾಧ್ಯಕ್ಷ ಬಿ.ಎಸ್. ಸುಗೂರ, ಎಸ್.ಸಿ. ಉಪ್ಪಿನ, ಸದಾಶಿವ ಗುಡ್ಡೋಡಗಿ, ಎಸ್.ಎಚ್. ನಾಡಗೌಡ, ಎಂ.ಎಂ. ಸಜ್ಜನ, ನಾಗಪ್ಪ ಗುಗ್ಗರಿ, ಬಸವರಾಜ ಗಣಿ, ಸುಧೀರ ಚಿಂಚಲಿ, ರಮೇಶ ಹಳ್ಳದ, ಶಿವಾನಂದ ನೀಲಾ, ಶ್ರೀಮಂತ ಜಂಬಗಿ, ಎಂ.ಎಸ್. ಕರಡಿ, ಗುರು ಗಚ್ಚಿನಮಠ, ಮಹಾದೇವ ಹತ್ತಿಕಾಳ, ಬಸವರಾಜ ಕಂದಗಲ್ಲ, ಈರಣ್ಣ ಪಾಟೀಲ, ಮಹಾದೇವ ಜಂಗಮಶೆಟ್ಟಿ, ಅಮೃತ ತೋಸ್ನಿವಾಲ, ಮಲಕಪ್ಪಣ್ಣ ಗಾಣಿಗೇರ ಇತರರಿದ್ದರು. ಅಮೃತ ತೋಸ್ನಿವಾಲ ನಂದಿಕೋಲು ಸೇವಾತ್ರಿಗಳಿಗೆ ಪ್ರಸಾದ ಸೇವೆ ಹೊಣೆ ಹೊತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts