More

    ಶಿವಣಗಿ ಬಸ್‌ನಿಲ್ದಾಣಕ್ಕೆ ಹೊಸ ರೂಪ

    ಹಡಗಲಿ: ವಿಜಯಪುರ ತಾಲೂಕಿನ ಶಿವಣಗಿ ಬಸ್ ನಿಲ್ದಾಣ ಇದೀಗ ಹೊಸ ರೂಪ ಪಡೆದುಕೊಂಡಿದೆ. ಅನೇಕ ವರ್ಷಗಳಿಂದ ಸುಣ್ಣ, ಬಣ್ಣ ಕಾಣದೆ, ಎಲ್ಲೆಂದರಲ್ಲಿ ಕಸ, ಮೂಲ ಸೌಕರ್ಯಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದರು. ಈ ಬಗ್ಗೆ ವಿಜಯವಾಣಿ ನ.28ರಂದು ‘ಹಾಳಾದ ಶಿವಣಗಿ ಬಸ್ ನಿಲ್ದಾಣ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.
    ಕೊನೆಗೂ ಅಧಿಕಾರಿಗಳು ಎಚ್ಚುತ್ತುಕೊಂಡು ಶಿವಣಗಿ ಬಸ್‌ನಿಲ್ದಾಣಕ್ಕೆ ಹೊಸ ರೂಪ ನೀಡಿದ್ದಾರೆ. ಬಣ್ಣ ಬಳಿದು, ಕಿಟಕಿ ಗಾಜು, ಹೊಸ ಟೇಬಲ್, ಇನ್ನಿತರ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ.
    ಅಂದಾಜು 17 ವರ್ಷಗಳ ಹಿಂದೆ ಬಸನಗೌಡ ಪಾಟೀಲ ಅವರು ಕೇಂದ್ರ ರೈಲ್ವೆ ಮಂತ್ರಿಯಾಗಿದ್ದಾಗ ಶಿವಣಗಿ ಬಸ್‌ನಿಲ್ದಾಣವನ್ನು ಉದ್ಘಾಟಿಸಲಾಗಿತ್ತು. ಆಗಿನಿಂದ ಈ ವರೆಗೆ ಅಲ್ಲಿನ ಪ್ರಯಾಣಿಕರಿಗೆ ಸೂಕ್ತ ಶೌಚಗೃಹ, ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ವಿದ್ಯುತ್ ಸಂಪರ್ಕ ಇಲ್ಲದೆ ರಾತ್ರಿ ಪ್ರಯಾಣಿಸುವ ಪ್ರಯಾಣಿಕರು ಹೈರಾಣವಾಗಬೇಕಿತ್ತು. ಇದೀಗ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿದ್ದಾರೆ. ಇದರಿಂದಾಗಿ ಶಿವಣಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗಿದ್ದು, ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಶಿವಣಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮೂಲಸೌಕರ್ಯ ಒದಗಿಸಲಾಗಿದೆ. ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಜಿಲ್ಲೆಯ ಬಸ್ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.
    ನಾರಾಯಣಪ್ಪ ಕುರುಬರ ಜಿಲ್ಲಾ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts