More

    ಶಿವರಾತ್ರಿಗೆ ಗುಮ್ಮಟನಗರಿ ಸಜ್ಜು

    ವಿಜಯಪುರ : ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಮಹಾಶಿವರಾತ್ರಿ ಆಚರಣೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ವಿವಿಧ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ನಗರದ ಹೊರವಲಯ ಶಿವಗಿರಿಯಲ್ಲಿ ಸರಳವಗಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

    ಶಿವಗಿರಿಯಲ್ಲಿ 85 ಅಡಿ ಎತ್ತರದ ಶಿವನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲು ಜಿಲ್ಲೆಯ ವಿವಿಧ ಕಡೆಗಳಿಂದ ಭಕ್ತರು ಆಗಮಿಸಲಿದ್ದಾರೆ. ಇದೊಂದು ಶ್ರದ್ಧಾ ಕೇಂದ್ರವಾಗದೆ ಪ್ರವಾಸಿ ಕೇಂದ್ರವೂ ಆಗಿದೆ. ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡಲಿದ್ದಾರೆ. ಜಾತ್ರಾ ಮಹೋತ್ಸವದ ಅಂಗವಾಗಿ ಈಗಾಗಲೇ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಕಳೆದ 14 ವರ್ಷಗಳಿಂದ ಜಾತ್ರಾ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಪ್ರಸಕ್ತ ವರ್ಷ ಕರೊನಾ ಹಿನ್ನೆಲೆ ಸರಳವಾಗಿ ಜಾತ್ರಾ ಮಹೋತ್ಸವ ಆಯೋಜಿಸಲಾಗುತ್ತಿದೆ.

    ಉಕ್ಕಲಿಯಲ್ಲಿ ರುದ್ರಾಭಿಷೇಕ
    ಪ್ರತಿ ವರ್ಷದಂತೆ ಈ ವರ್ಷವೂ ಮಾ.11ರಂದು ಉಕ್ಕಲಿಯ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಿಸಲಾಗುತ್ತಿದೆ. ಬೆಳಗ್ಗೆ ರುದ್ರಾಭಿಷೇಕ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 9 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಸುರೇಶ ಜೋಶಿ (ನಿಡೋಣಿ) ಸಂಗಡಿಗರಿಂದ ಡೊಳ್ಳಿನ ಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾ.12ರಂದು ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ನಡೆಯಲಿದೆ.

    770 ಲಿಂಗದ ಗುಡಿಯ ದರ್ಶನ
    ವಿಜಯಪುರದ ಬಿಎಲ್‌ಡಿಇ ರಸ್ತೆಯಲ್ಲಿರುವ 770 ಲಿಂಗದ ಗುಡಿಗೆ ಜಿಲ್ಲೆಯ ಭಕ್ತರು ಆಗಮಿಸಿ, ದರ್ಶನ ಪಡೆಯಲಿದ್ದಾರೆ. ಕಾಯಕಯೋಗಿ ಬಸವಣ್ಣನವರ ಬಸವ ಕಲ್ಯಾಣದಲ್ಲಿದ್ದ 770 ಶರಣರ ಸ್ಮರಣಾರ್ಥ ಈ ಗುಡಿ ನಿರ್ಮಿಸಲಾಗಿದೆ.

    ಅಡವಿ ಶಂಕರಲಿಂಗ ದೇವಸ್ಥಾನದಲ್ಲಿ ಆಚರಣೆ
    ಇಲ್ಲಿನ ದರ್ಗಾ ರಿಂಗ್‌ರಸ್ತೆಯಲ್ಲಿರುವ ಐತಿಹಾಸಿಕ ಅಡವಿ ಶಂಕರಲಿಂಗ ದೇವಸ್ಥಾನದಲ್ಲಿ ಮಹಾಶಿವರಾತ್ರಿ ನಿಮಿತ್ತ ಜಾಗರಣೆ ಇನ್ನಿತರ ಧಾರ್ಮಿಕ ಆಚರಣೆಗಳನ್ನು ಆಯೋಜಿಸಲಾಗಿದೆ. ಮಾ.11ರಂದು ಬೆಳಗ್ಗೆ 6 ಗಂಟೆಯಿಂದ ಮಹಾರುದ್ರಾಭಿಷೇಕ, ಜೋರಾಪುರ ಪೇಠದಲ್ಲಿರುವ ಶಂಕರಲಿಂಗ ದೇವಸ್ಥಾನದಲ್ಲಿ ಮುಂಜಾನೆ 5 ಗಂಟೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts