More

    ಪುರಸಭೆಯಲ್ಲಿ ಅಕ್ರಮ ಖಾತೆಗಳ ಸದ್ದು

    ವಿಜಯವಾಣಿ ಸುದ್ದಿಜಾಲ ವಿಜಯಪುರ
    ಪಟ್ಟಣದ ಪುರಸಭೆಯಲ್ಲ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಅಕ್ರಮ ಖಾತೆಗಳ ಸದ್ದು ಜೋರಾಗಿತ್ತು.
    ಸಭೆ ಆರಂಭದಲ್ಲಿ ಹನೀಫ್ ಉಲ್ಲ ಮಾತನಾಡಿ, ಪುರಸಭೆಯಲ್ಲಿ ಅಕ್ರಮ ಖಾತೆ ಮಾಡಿಕೊಡುವ ಬಗ್ಗೆ ಆರೋಪಿಸಿದರು. ಈ ವೇಳೆ ಮುಖ್ಯಾಧಿಕಾರಿ ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸಭೆ ಗೊಂದಲದ ಗೂಡಾಯಿತು. ಇದರ ನಡುವೆ, ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ 11 ಮಂದಿ ಸದಸ್ಯರು ಮನವಿ ಮಾಡಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಮುಖ್ಯಾಧಿಕಾರಿ ವಿರುದ್ಧ ಹಲವರು ಹರಿಹಾಯ್ದರು.
    ಈ ಹಿಂದಿನ ವಿಶೇಷ ಸಭೆಯಲ್ಲಿ ಸರ್ವೇ ನಂಬರ್ 191ರಲ್ಲಿರುವ ಪುರಸಭೆ ಆಸ್ತಿಯನ್ನು ಅಳತೆ ಮಾಡಿ ಕಾಂಪೌಂಡ್ ನಿರ್ಮಾಣ ಮಾಡಬೇಕೆಂದು ತಿಳಿಸಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್ ಆಕ್ರೋಶ ವ್ಯಕ್ತಪಡಿಸಿದರು.
    ಪುರಸಭೆ ಮುಖ್ಯಾಧಿಕಾರಿ ಮೋಹನ್ ಕುಮಾರ್ ಮಾತನಾಡಿ, ಸರ್ಕಾರಿ ಆಸ್ತಿಯನ್ನು ಯಾವುದೇ ಪ್ರಭಾವಿಯಾದರು ಅತಿಕ್ರಮಣಕ್ಕೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ತಹಸೀಲ್ದಾರ್ ಈಗಾಗಲೇ ಪರೀಶೀಲನೆ ಮಾಡಿದ್ದು, ಸೂಕ್ತ ಕ್ರಮ ಕೈಗೊಳ್ಳಲ್ಲಿದ್ದಾರೆ ಎಂದರು.
    ನಂದಕುಮಾರ್ ಮಾತನಾಡಿ, 2015ರಿಂದ ಇತ್ತೀಚೆಗೆ ಬಯಾಪದಿಂದ ಅನುಮೋದನೆಯಾಗಿ ಪುರಸಭೆಯಿಂದ ಖಾತೆ ತೆರೆದಿರುವ ನೀಲಿ ನಕ್ಷೆ ಮತ್ತು ಮನೆ ಕಟ್ಟಡಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸದಸ್ಯರಿಗೆ ನೀಡಬೇಕು. ಪ್ರವಾಸಿ ಮಂದಿರದ ಎದುರಿನಲ್ಲಿರುವ ಸರ್ಕಾರಿ ಆಸ್ತಿಯನ್ನು ಕೂಡಲೇ ಸ್ವಾಧೀನಪಡಿಸಿಕೊಳ್ಳಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts