More

  ಸಿಎಎ ಕಾಯ್ದೆ ನಾಗರಿಕರ ವೈರಿ

  ವಿಜಯಪುರ: ಎನ್‌ಆರ್‌ಸಿ ಹಾಗೂ ಸಿಎಎ ದೇಶದ ಪ್ರತಿ ನಾಗರಿಕನ ವೈರಿಗಳಾಗಿವೆ. ಅವುಗಳನ್ನು ಪ್ರತಿಯೊಬ್ಬರೂ ತಿರಸ್ಕರಿಸಬೇಕೆಂದು ಉಪನ್ಯಾಸಕ ಸಂಜೀವ ವಠಾರ ಹೇಳಿದರು.

  ನಗರದಲ್ಲಿ ಪೌರತ್ವ ವಿರೋಧಿ ವೇದಿಕೆಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಸೇವ್ ಡೆಮಾಕ್ರಸಿ, ಸೇವ್ ಇಂಡಿಯಾ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

  ಆಸ್ಸಾಂನ ವಿಶಿಷ್ಟ ಮತ್ತು ಐತಿಹಾಸಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಎನ್‌ಆರ್‌ಸಿ ಜಾರಿಗೊಳಿಸಲಾಗಿತ್ತು. ಆದರೆ, ಕೇಂದ್ರ ಬಿಜೆಪಿ ಸರ್ಕಾರ ತನ್ನ ರಾಜಕೀಯ ದುರುದ್ದೇಶಕ್ಕಾಗಿ ದೇಶಾದ್ಯಂತ ಈ ಕಾಯ್ದೆಯನ್ನು ಜಾರಿಗೊಳಿಸುತ್ತಿದೆ. ಇದು ಸಂವಿಧಾನ ವಿರೋಧಿಯಾಗಿದ್ದು, ಧಾರ್ಮಿಕ ತಾರತಮ್ಯ ಸೃಷ್ಟಿಸುತ್ತದೆ. ದೇಶದ ನಾಗರಿಕರು ಇದನ್ನು ತಿರಸ್ಕರಿಸಬೇಕು ಎಂದು ಹೇಳಿದರು.

  ಸಾಮಾಜಿಕ ಕಾರ್ಯಕರ್ತೆ ಲತಾ ಪಿ.ಎಂ. ಮಾತನಾಡಿ, ಸಮಾಜದಲ್ಲಿ ನಡೆಯುವ ಎಲ್ಲ ಅನ್ಯಾಯಗಳನ್ನು ವಿರೋಧಿಸಬೇಕು. ಜಾತಿ-ಧರ್ಮ ಮೀರಿ ಜನತೆ ಒಂದಾಗಬೇಕು. ಇಂದಿನ ಸರ್ಕಾರಗಳು ಪ್ರಜೆಗಳನ್ನು ಮರೆತು ದೇಶದ ಶ್ರೀಮಂತರ ಕಾಳಜಿಯಲ್ಲಿ ತೊಡಗಿರುವಾಗ ಜನತೆ ಒಂದಾಗಿ ಧ್ವನಿ ಎತ್ತುವುದು ಅನಿವಾರ್ಯವಾಗಿದೆ ಎಂದರು.

  ಅಕ್ರಂ ಮಾಶ್ಯಾಳಕರ ಅಧ್ಯಕ್ಷತೆ ವಹಿಸಿದ್ದರು. ಬಿ.ಭಗವಾನರೆಡ್ಡಿ, ದಸ್ತಗೀರ್ ಉಕ್ಕಲಿ, ಎಚ್.ಟಿ. ಭರತಕುಮಾರ ಉಪಸ್ಥಿತರಿದ್ದರು. ಸಿದ್ದಲಿಂಗ ಬಾಗೇವಾಡಿ ನಿರೂಪಿಸಿದರು. ಶ್ರೀನಾಥ ಪೂಜಾರಿ ವಂದಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts