More

    ಜೀವಜಲದ ಮಹತ್ವ ಅರಿಯಿರಿ: ಡಾ.ಮಹೇಶ ಬಿರಾಜನವರ

    ವಿಜಯಪುರ: ಜೀವಜಲದ ಅಭಾವ ತಡೆಗಟ್ಟುವತ್ತ ಪ್ರತಿಯೊಬ್ಬರೂ ಗಮನಹರಿಸಬೇಕು. ಇಲ್ಲದಿದ್ದರೆ ಭೂಮಿ ಮೇಲೆ ಜೀವಿಗಳು ಬದುಕುಳಿವುದು ಅಸಾಧ್ಯವಾಗುತ್ತದೆ ಎಂದು ವಿಜಯಪುರ ಅಂತರ್ಜಲ ಇಲಾಖೆಯ ಹಿರಿಯ ಭೂವಿಜ್ಞಾನಿ ಡಾ.ಮಹೇಶ ಬಿರಾಜನವರ ಹೇಳಿದರು.

    ಇಲ್ಲಿನ ಇಬ್ರಾಹಿಂಪುರ ಬಡಾವಣೆಯಲ್ಲಿರುವ ಚಂದ್ರಕಾಂತ ಸಜ್ಜನ ಪ್ರೌಢಶಾಲೆಯಲ್ಲಿ ಜಿಲ್ಲಾ ಅಂತರ್ಜಲ ಇಲಾಖೆ ಸಹಯೋಗದಲ್ಲಿ ನೀರು ಬಳಕೆ ಹಾಗೂ ಅದರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ನೀರಿನ ಅಭಾವ ತಡೆಗಟ್ಟಲು ನಮಗಿರುವ ಒಂದೇ ಮಾರ್ಗವೆಂದರೆ ನೀರಿನ ಸಂರಕ್ಷಣೆ. ಲಭ್ಯವಿರುವ ನೀರನ್ನು ಜಾಗರೂಕತೆಯಿಂದ ಮತ್ತು ಮಿತವಾಗಿ ಬಳಸಿ ಮುಂದಿನ ಪೀಳಿಕೆಗೆಗೆ ಉಳಿಸಬೇಕು. ಆದ್ದರಿಂದ ಪ್ರತಿಯೊಬ್ಬರು ಜವಾಬ್ದಾರಿ ಅರಿತು ನೀರು ಬಳಕೆ ಮಾಡಬೇಕು. ಇದು ಪ್ರತಿ ನಾಗರಿಕನ ಹೊಣೆಗಾರಿಕೆ ಆಗಿದೆ ಎಂದರು.

    ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಭೂವಿಜ್ಞಾನಿ ಡಾ.ಬಸವರಾಜ ಚಿಕ್ಕಸಂಸಿ ಮಾತನಾಡಿ, ನೀರು ಪ್ರಕೃತಿಯ ಸಕಲ ಜೀವಿಗಳ ಅವಿಭಾಜ್ಯ ಅಂಗವಾಗಿದೆ. ಮನುಷ್ಯ, ಪ್ರಾಣಿ, ಸಕಲ ಜೀವರಾಶಿ ಹಾಗೂ ಗಿಡಮರಗಳಿಗೂ ನೀರು ಅತೀ ಅವಶ್ಯಕ. ವಿಶ್ವದಲ್ಲಿ ನೀರಿಗಾಗಿ ಹಲವು ಯುದ್ಧಗಳೇ ನಡೆದಿವೆ. ಆದದರಿಂದ ನೀರಿನ ಸಂರಕ್ಷಣೆ ಅತೀ ಅವಶ್ಯಕ. ನೀರಿನ ಪ್ರತಿ ಹನಿಯು ಅಮೂಲ್ಯ ಸಂಪತ್ತು. ಅದನ್ನು ಮಿತವಾಗಿ ಬಳಸಿ, ಸಂರಕ್ಷಿಸುವುದು ಇಂದಿನ ಅಗತ್ಯತೆಯಾಗಿದೆ ಎಂದರು.

    ಗ್ರಾಮೀಣಾಭಿವೃದ್ಧಿ ಸಂಸ್ಥೆ ನಿರ್ದೇಶಕ ಬಾಬು ಸಜ್ಜನ, ಮನಗೂಳಿ ಪಪೂ ಮಹಾವಿದ್ಯಾಲಯದ ಆರ್.ಕೆ. ಹನಗಾಡಿ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ರಸಾಯನ ತಜ್ಞ ಲಕ್ಷ್ಮಣ ತೆರವಾರ, ಸಾಲೋಟಗಿ ಗ್ರಾಪಂ ಕಾರ್ಯದರ್ಶಿ ಬಂಡೆಪ್ಪ ತೇಲಿ ಮಾತನಾಡಿದರು. ಮುಖ್ಯಶಿಕ್ಷಕ ಅಣ್ಣಪ್ಪ ಸಜ್ಜನ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಂ. ಗುಡ್ಡೋಡಡಗಿ ಮತ್ತಿತರರು ಉಪಸ್ಥಿತರಿದ್ದರು.

    ಸಹಶಿಕ್ಷಕ ಎಚ್.ಬಿ. ಕುಮಸಿ ಸ್ವಾಗತಿಸಿದರು. ಜಿ.ಬಿ. ಹಾವಿನಾಳ ನಿರೂಪಿಸಿದರು. ಎ.ಎಸ್. ಚಿತ್ರಕೋಟಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts